ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಡುರಸ್ತೆಯಲ್ಲಿ ಗನ್ ಹಿಡಿದು ಪೊಲೀಸ್ ಅಧಿಕಾರಿ ರಂಪಾಟ ಮಾಡಿದ್ದಾರೆ, ಆಸಾಮಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದಿದ್ದಾರೆ,
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದ ಪಕ್ಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಕೈಯಲ್ಲಿ ಗನ್ ಹಿಡಿದು ರಂಪಾಟ ನಡೆಸಿದ್ದಾರೆ,
ಸಚಿವರ ಮನೆಯ ಬಳಿ ಅಪಾಟ್ರ್ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಕಾಮಗಾರಿ ಹಿನ್ನೆಲೆಯಲ್ಲಿ ಲಾರಿಯೊಂದು ಗ್ರಾನೈಟ್ ಗಳನ್ನು ಹೊತ್ತು ತಂದಿದೆ, ಈ ವೇಳೆ ಮನೆ ಮುಂದೆ ಕಾರುಗಳು ಸಾಲಾಗಿ ನಿಂತಿದ್ದಕ್ಕೆ ಕೋಪಗೊಂಡು ಏಕಾಏಕಿ ಮನೆಯಿಂದ ಹೊರಗಡೆ ಬಂದ ಜಯಪ್ರಕಾಶ್ ಕೈಯಲ್ಲಿ ಗನ್ ಹಿಡಿದು ಅವಾಜ್ ಹಾಕಿದ್ದಾರೆ,
ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ, ಗ್ರಾನೈಟ್ ಅನ್ಲೋಡ್ ಮಾಡಬೇಕು ಸರ್ ಎಂದು ಕಟ್ಟಡ ಕಾರ್ಮಿಕರು ತಿಳಿಸಿದ್ದಾರೆ, ಅವರಿಗೂ ಸಹ ಜಯಪ್ರಕಾಶ್ ಗನ್ ತೋರಿಸಿ ಬೆದರಿಸಿದ್ದಾರೆ,
Veekay News > State News > ಗೃಹ ಸಚಿವ ಪರಂ ಮನೆ ಪಕ್ಕದಲ್ಲೇ ಗನ್ ಹಿಡಿದು ನಿವೃತ್ತ ಅಧಿಕಾರಿಯ ರಂಪಾಟ!
ಗೃಹ ಸಚಿವ ಪರಂ ಮನೆ ಪಕ್ಕದಲ್ಲೇ ಗನ್ ಹಿಡಿದು ನಿವೃತ್ತ ಅಧಿಕಾರಿಯ ರಂಪಾಟ!
ವೀ ಕೇ ನ್ಯೂಸ್01/07/2025
posted on
