Live Stream

[ytplayer id=’22727′]

| Latest Version 8.0.1 |

State News

ಜನರೊಂದಿಗೆ ಜನತಾದಳ ನಡೆ ಪ್ರಾಥಮಿಕ ಸದಸ್ಯತ್ವ ಪಡೆದ ಬಸನಗೌಡ ಪಾಟೀಲ

ಜನರೊಂದಿಗೆ ಜನತಾದಳ ನಡೆ  ಪ್ರಾಥಮಿಕ ಸದಸ್ಯತ್ವ ಪಡೆದ ಬಸನಗೌಡ ಪಾಟೀಲ

ಜನರೊಂದಿಗೆ ಜನತಾದಳ ನಡೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದ ಹಿರೇಮುರಾಳ ಗ್ರಾಮದ ಹೋರಾಟಗಾರ ಹಾಗೂ ಸಮಾಜಸೇವಕ ಬಸನಗೌಡ ಪಾಟೀಲ

ಜನರೊಂದಿಗೆ ಜನತಾದಳ ನಡೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದ ಹಿರೇಮುರಾಳ ಗ್ರಾಮದ ಹೋರಾಟಗಾರ ಹಾಗೂ ಸಮಾಜಸೇವಕ ಬಸನಗೌಡ ಪಾಟೀಲ
ಬೆಂಗಳೂರು ನಗರದ ಜೆಪಿ ಭವನದ ಆವರಣದಲ್ಲಿ ಜನರೊಂದಿಗೆ ಜನತಾದಳ ನಡೆ ವಿಶೇಷ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಚಾಲನೆ ನೀಡಿದರು ಇನ್ನು ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಉಪಸ್ಥಿತಿ ಇದ್ದರು
ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಜೆಡಿಎಸ್ ಪಕ್ಷ ಸದಸ್ಯರ ಸಹಕಾರದಿಂದ ಸದೃಢ ಗೊಳ್ಳುತ್ತಿದೆ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಕೂಡ ಜನಸಾಮಾನ್ಯರಿಗಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶ್ರಮವಹಿಸುತ್ತಿದ್ದಾರೆ ಆಡಳಿತ  ಪಕ್ಷದ  ದುರಾಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಾತನಾಡಿ ಪಕ್ಷದ ಬಲವರ್ಧನೆಗೆ ಎಲ್ಲಾ ಕಾರ್ಯಕರ್ತರು ಸಹಕಾರ ನೀಡಿ ಕರ್ನಾಟಕ ರಾಜ್ಯದಾದ್ಯಂತ ಮುಂದಿನ ಚುನಾವಣೆಯಲ್ಲಿ ವಿಜಯ ಪತಾಕೆಯನ್ನು ಹಾರಿಸೋಣ ನಮ್ಮ ಪಕ್ಷದ ಕಾರ್ಯಕರ್ತರು ನಮ್ಮ ಉಸಿರು ಎಂದು ಶ್ಲಾಘನೀಯ ವ್ಯಕ್ತಪಡಿಸಿದರು, ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು ರಾಜ್ಯ ಸರ್ಕಾರ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಹಣವನ್ನ ಲೂಟಿ ಮಾಡುತ್ತಿದೆ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಇವರ ಆಟ ಇನ್ನು ಜಾಸ್ತಿ ದಿನ ನಡೆಯುವುದಿಲ್ಲ ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ ನಮ್ಮ ಪಕ್ಷಕ್ಕೆ ಬಹುಮತ ಕೊಡುತ್ತಾರೆ ಎಂದು  ಹೇಳಿದರು ಕಾರ್ಯಕ್ರಮದ ನಂತರ ಪಕ್ಷದ ಹಿರಿಯರಾದ ಸಿಂಧನೂರು ಶಾಸಕರಾದ ವೆಂಕಟರಾವ್ ನಾಡಗೌಡ ಜೆಡಿಎಸ್ ಪಕ್ಷದ ಹಿರಿಯರಾದ ತಿಪ್ಪೇಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದ ಸಾಮಾಜಿಕ ಹೋರಾಟಗಾರ ಹಾಗೂ ಸಮಾಜಸೇವಕ ಮಾಜಿ ಕಾರ್ಯ ಪಾಲ ಅಭಿಯಂತರರಾದ ಶ್ರೀಯುತ ಬಸನಗೌಡ ಪಾಟೀಲ್ ಅವರು ಪ್ರಾಥಮಿಕ ಸದಸ್ಯತ್ವವನ್ನು ತೆಗೆದುಕೊಳ್ಳುವ ಮೂಲಕ ಪಕ್ಷದ ಚಲನವಲಗಳನ್ನು ಗಮನಿಸಿದ್ದೇನೆ ಜನಪರ ಯೋಜನೆಗಳು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ ಹಾಗಾಗಿ ಜೆಡಿಎಸ್ ನಿಂದ ಸಾರ್ವಜನಿಕರ ಸೇವೆಯನ್ನು ಮಾಡಲು ನಾನು ಮುಂದಾಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು ಸಂದರ್ಭದಲ್ಲಿ , ಇಂಡಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತರದ ಶ್ರೀ ಬಿ ಡಿ ಪಾಟೀಲ್ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಡಗಿ ಅವರು ಮುದ್ದೇಬಿಹಾಳದ ಜೆಡಿಎಸ್ ನ ತಾಲೂಕ ಮುಖಂಡರುಗಳಾದ ಸಿದ್ದು ವಾಲಿಕಾರ, ಅರವಿಂದ ಕಾಸಿನಕುಂಟಿ , ಬಾಬು ಮಾದಿನಿಹಾಳ ಹಾಗೂ ಮುದ್ದೇಬಿಹಾಳ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತಿ ಇದ್ದರು.

 

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";