ಬೆಂಗಳೂರು, ಮೇ.1: ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಗಾರ ಮಾಲೀಕರು ಮತ್ತು ತಂತ್ರಜ್ಞರ ಸಂಘದಿಂದ ನಗರದ ಅರಮನೆ ಮೈದಾನದಲ್ಲಿ ಬೃಹತ್ ಆಲ್ ಇಂಡಿಯಾ ಬೈಕ್ ಮೆಕ್ಯಾನಿಕಲ್ ಸಮಾವೇಶ ಯಶಸ್ವಿಯಾಗಿ ನೆರವೇರಿತು. ಈ ಐತಿಹಾಸಿಕ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 12,500ಕ್ಕೂ ಹೆಚ್ಚು ಬೈಕ್ ಮೆಕ್ಯಾನಿಕ್ಸ್ ಮತ್ತು ಕಾರ್ಯಗಾರ ಮಾಲೀಕರು ಭಾಗವಹಿಸಿ, ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕರ ಕಲ್ಯಾಣ ಕುರಿತು ಚರ್ಚಿಸಿದರು. ನಂಜಾವಧೂತ ಮಹಾಸ್ವಾಮೀಜಿ, ಜಾಮಿಯಾ ಮಸ್ಜಿದ್ ನ ಮಹಮದ್ ಮಕ್ ಸೂದ್ ಇಮ್ರಾನ್ ರಶೀದ್, ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಮ್ ಅಹಮದ್( Salim Ahmed ) ಹಾಗೂ ಸಂಘದ ಕಾರ್ಯದರ್ಶಿ ಭಾಸ್ಕರ್ ಜಿ ನಾಯ್ಡು (Bhaskar G. Naidu) ಸಮಾವೇಶಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ನಂಜಾವಧೂತ ಮಹಾಸ್ವಾಮೀಜಿ, ಸಹಸ್ರಾರು ಬೈಕ್ ಮೆಕ್ಯಾನಿಕ್ ಗಳು ಒಂದೇ ವೇದಿಕೆಯಲ್ಲಿ ಸೇರುವುದು ಮಹತ್ವದ ಸಾಧನೆ. ನಿಮ್ಮ ಕೈಯಲ್ಲಿ ದೇಶದ ಚಾಲನಾ ಶಕ್ತಿ ಇದೆ. ಪ್ರತಿಯೊಂದು ಬೈಕ್ ಓಡಲು ನಿಮ್ಮ ಪರಿಶ್ರಮವೇ ಕಾರಣ. ನೀವು ಕೇವಲ ಮೆಕ್ಯಾನಿಕ್ ಗಳಳಲ್ಲ. ಸಮಾಜದ ನಿರ್ಮಾತೃಗಳು. ತಂತ್ರಜ್ಞಾನವನ್ನು ಅಳವಡಿಸಿಕೊಂಡು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನಿಮ್ಮ ಭವಿಷ್ಯ ಇನ್ನಷ್ಟು ಪ್ರಕಾಶಮಾನವಾಗುತ್ತದೆ. ಸಂಘಟಿತ ಶಕ್ತಿಯ ಮೂಲಕ ನೀವು ನಿಮ್ಮ ಹಕ್ಕುಗಳನ್ನು ಸಾಧಿಸಿ, ಮುಂದಿನ ಪೀಳಿಗೆಗೆ ಉತ್ತಮ ದಾರಿ ತೋರಿಸಬೇಕು ಎಂದು ಕರೆ ನೀಡಿದರು. ಬೈಕ್ ಮೆಕ್ಯಾನಿಕ್ ಸಮುದಾಯಕ್ಕೆ ಹೊಸ ದಿಕ್ಕು ನೀಡುವಲ್ಲಿ ಈ ಸಮಾವೇಶ ಮಹತ್ವದ ಹೆಜ್ಜೆಯಾಗಿದೆ ಮತ್ತು ಸಂಘಟಿತ ಅಭಿವೃದ್ಧಿಯ ಅಗತ್ಯತೆಯನ್ನು ಸಮಾವೇಶ ಸಾದರಪಡಿಸಿತು. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನ,. ಆಧುನಿಕ ಸಾಧನಗಳು ಹಾಗೂ ಬೈಕ್ ಸರ್ವಿಸ್ ಕ್ಷೇತ್ರದ ನಾವೀನತೆ ಅನಾವರಣಗೊಂಡಿತು. ಸಂಘದ ರಾಜ್ಯಾಧ್ಯಕ್ಷರು ಕೆ. ಎಸ್. ಪ್ರಸನ್ನ ಕುಮಾರ್ ಗೌಡ, ಕಾರ್ಯದರ್ಶಿ ಭಾಸ್ಕರ್ ಜಿ ನಾಯ್ಡು, ರಾಜ್ಯ ಕಾರ್ಯದರ್ಶಿ ವೆಂಕಟ್ ಶ್ಯಾಮ್, ಹಾಗೂ ರಾಜ್ಯ ಸಲಹೆಗಾರ ನಾರಾಯಣ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿ, ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಇಂತಹ ಸಮಾವೇಶಗಳನ್ನು ಆಯೋಜಿಸುವುದಾಗಿ ತಿಳಿಸಿದರು.
Veekay News > Districts > Bengaluru Urban > ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*
ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*
ವೀ ಕೇ ನ್ಯೂಸ್02/05/2026
posted on





















