ಬೆಂಗಳೂರು: ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಮತ್ತು ಸಿಸಿಬಿ ಪೊಲೀಸರು ಬೆಂಗೂರಿನ ಪ್ರಮುಖ ಪಬ್‍ಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿ, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‍ಗಳ ಬಂಧಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನ ಐಷಾರಾಮಿ ಟೆಕ್ನೋ ಪಾರ್ಟಿಗಳಿಗೆ ವಿವಿಧ ರೀತಿಯ ಡ್ರಗ್ ಸರಬರಾಜು ಮಾಡುತ್ತಿದ್ದುದರ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಇದೇ ವೇಳೆ ವಿದೇಶಿಗರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದೇ ಮಾಹಿತಿ ಆಧರಿಸಿ ಮೇರೆಗೆ ಶನಿವಾರ ರಾತ್ರಿ ನಗರದ ಎಂಜಿ ರೋಡ್ ಮತ್ತು ಕೋರಮಂಗಲದ ಎರಡು ಪಬ್‍ಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಡಿಜೆ ಆಪರೇಟರ್‍ಗಳಾಗಿ ಕೆಲಸ ಮಾಡ್ತಿದ್ದ ಇಬ್ಬರು ವಿದೇಶಿಗರು ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಪಬ್‍ಗಳಿಂದಲೇ ಯುವಕರನ್ನು ಸಂಪರ್ಕ ಮಾಡಿ ಡ್ರಗ್ಸ್ ರವಾನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಐಷಾರಾಮಿ ಪಾರ್ಟಿಗಳಿಗೂ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ವಿಚಾರಣೆ ಸಂದರ್ಭದಲ್ಲಿ ನಗರಕ್ಕೆ ವಿದ್ಯಾಭ್ಯಾಸ ವೀಸಾದಲ್ಲಿ ಬಂದಿರುವ ಹಲವರು, ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಉಳಿದುಕೊಂಡು ಡ್ರಗ್ ಪೆಡ್ಲರ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
Veekay News > Crime News > ಎಂಜಿ ರೋಡ್ ಮತ್ತು ಕೋರಮಂಗಲ ಪಬ್ ಮೇಲೆ ದಾಳಿ: ವಿದೇಶಿ ಡ್ರಗ್ ಪೆಡ್ಲರ್ ಗಳ ಅರೆಸ್ಟ್
ಎಂಜಿ ರೋಡ್ ಮತ್ತು ಕೋರಮಂಗಲ ಪಬ್ ಮೇಲೆ ದಾಳಿ: ವಿದೇಶಿ ಡ್ರಗ್ ಪೆಡ್ಲರ್ ಗಳ ಅರೆಸ್ಟ್
ವೀ ಕೇ ನ್ಯೂಸ್13/07/2025
posted on
