Live Stream

[ytplayer id=’22727′]

| Latest Version 8.0.1 |

Crime News

ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ. 175 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ 9 ಲಕ್ಷ ನಗದು ವಶ.

ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ. 175 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ 9 ಲಕ್ಷ ನಗದು ವಶ.

ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪರ‍್ಯಾದುದಾರರು ದಿನಾಂಕ:23/05/2025 ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪರ‍್ಯಾದುದಾರರು ಹಾಗೂ ಪರ‍್ಯಾದುದಾರರ ಪತ್ನಿಯವರು ದಿನಾಂಕ:21/05/2025 ರಂದು ಚಿಕ್ಕಮಗಳೂರಿಗೆ ಹೋಗಿರುತ್ತಾರೆ. ದಿ. 22ರ ತಡರಾತ್ರಿ ಮನೆಗೆ ಬಂದು ನೋಡಲಾಗಿ, ಕೊಠಡಿಯ ಬೀರುವಿನಲ್ಲಿದ್ದ 24,00,000 ನಗದು, 175 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಕಳುವಾಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಠಾಣಾ ಸರಹದ್ದಿನಲ್ಲಿರುವ ರಿಂಗ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ಪ್ರಶ್ನಿಸಲಾಗಿ, ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಮತ್ತು ಅವರ ಮತ್ತಿಬ್ಬರ ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಆರೋಪಿಗಳಿಬ್ಬರ ಮಾಹಿತಿಯ ಮೇರೆಗೆ ದಿನಾಂಕ:02/06/2025 ರಂದು 175 ಗ್ರಾಂ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಹಾಗೂ 4,00,000/- ನಗದು, ಕೃತ್ಯಕ್ಕೆ ಉಪಯೋಗಿಸಿದ ಎರಡು ರಾಡ್ ಹಾಗೂ ದ್ವಿ-ಚಕ್ರ ವಾಹನ ಸಹ ವಶಪಡಿಸಿಕೊಳ್ಳಲಾಯಿತು.

ತನಿಖೆಯನ್ನು ಮುಂದುವರೆಸಿ, ಆರೋಪಿಗಳ ಸಹಚರರಿಬ್ಬರ ಪೈಕಿ ಓರ್ವ ಆರೋಪಿಯನ್ನು ಜಯನಗರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ, ಕೇಂದ್ರ ಕಾರಾಗೃಹದಲ್ಲಿರುವ ಬಗ್ಗೆ ಮಾಹಿತಿಯನ್ನು ಪಡೆದು, ಆತನನ್ನು ದಿನಾಂಕ:09/06/2025 ರಂದು 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.

ದಿನಾಂಕ:12/06/2025 ರಂದು ಆರೋಪಿಯಿಂದ ಕಳವು ಮಾಡಿದ್ದ ಹಣದ ಪೈಕಿ 5,00,000/- ನಗದನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯ ಪತ್ತೆಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.

ಈ ಪ್ರಕರಣದ ಮೂವರು ಆರೋಪಿಗಳಿಂದ ಒಟ್ಟು 175 ಗ್ರಾಂ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿಯ ನಾಣ್ಯಗಳು ಹಾಗೂ ₹ 9,00,000/- ನಗದು, ಕೃತ್ಯಕ್ಕೆ ಉಪಯೋಗಿಸಿದ ಎರಡು ರಾಡ್ ಹಾಗೂ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 25,00,000/-(ಇಪ್ಪತ್ತೆöÊದು ಲಕ್ಷ ರೂಪಾಯಿ).

ಈ ಪ್ರಕರಣದ ಮೂವರು ಆರೋಪಿಗಳಿಂದ 1) ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯ-01 ಕನ್ನ ಕಳವು ಪ್ರಕರಣ, 2) ಹನುಮಂತನಗರ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭ ಜಗಲಾಸರ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ವಿ.ವಿ.ಪುರಂ ಉಪ-ವಿಭಾಗದ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಮೀದ್ ಬಾಷಾ ರವರ ನೇತೃತ್ವದಲ್ಲಿ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ.ಗಿರೀಶ್ ನಾಯ್ಕ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";