ಬೆಂಗಳೂರು:- ಕರ್ನಾಟಕ ಚಲನಚಿತ್ರ ಕಾರ್ಮಿಕ ಕಲಾವಿದರು ಮತ್ತು ತಂತ್ರಜ್ಞರ ಹಾಗೂ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸಭೆಯು ಇಂದು ಗಾಂಧಿನಗರದ ಲ್ಲಿರುವ ಒಕ್ಕೂಟದ ಆವರಣದಲ್ಲಿ ನಡೆಯಿತು. ಗೌರವ ಅಧ್ಯಕ್ಷರು ಪೋಷಕ ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್
ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಚಲನಚಿತ್ರ ಪೋಷಕ ಕಲಾವಿದರಿಗೆ ಅರೋಗ್ಯ, ಹಣಕಾಸಿನ ನೆರವು, ಒಂಟಿ ಆಶಕ್ತ ಕಲಾವಿದರ ಆಶ್ರಮದ ಬಗ್ಗೆ ಸೇರಿದಂತೆ ಹಲವಾರು
ಕಾರ್ಯಚಟುವಟಿಕೆಗಳ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾ ಯಿತು. ಈ ಸಂದರ್ಭದಲ್ಲಿ ನೋತನವಾಗಿ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಆಯ್ಕಯಾದ ಸೋಮಶೇಖರ್ ಇವರನ್ನು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಪದ್ಮಿನಿನಂದ, ಗೌರವ ಅಧ್ಯಕ್ಷರಾದ ರವಿಶಂಕರ್, ಒಕ್ಕೂಟದ ಅಧ್ಯಕ್ಷರಾದ ಶ್ರೀ ಸೋಮಶೇಖರ್, .ಖಜಾಂಚಿ ಲಿಂಗರಾಜು, ಕಾರ್ಯದರ್ಶಿ ಮೂಗು ಸುರೇಶ್, ಅರವಿಂದ್, ಪತ್ರಕರ್ತರ್ತರು ಹಾಗೂ ಸಂಪಾದಕರಾದ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ ನೂರಾರು ಕಲಾವಿದರು ಭಾಗವಹಿಸಿದ್ದರು.