ಬೆಂಗಳೂರು: ಕನ್ನಡದ ಹೆಮ್ಮೆಯ ಚಿತ್ರನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಹೀಯಾಳಿಸಿ ತಮಿಳಿನ ಯೂಟ್ಯೂಬರ್ ಒಬ್ಬ ಪೇಚಿಗೆ ಸಿಲುಕಿದ್ದಾನೆ, ವಿಷ್ಣು ವರ್ಧನ್ ಅವರನ್ನು ಟೀಕಿಸಿರುವುದು ಕನ್ನಡಿಗರನ್ನು ಕೆರಳಿಸಿದೆ, ಯೂಟ್ಯೂಬರ್ ನನ್ನು ಕನ್ನಡಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ,
ಹೌದು, ಟ್ರೋಲ್ ಅಥವಾ ರೋಸ್ಟ್ ಮಾಡೋದು ಇತ್ತೀಚಿನ ಸಾಮಾಜಿಕ ಜಾಲತಾಣದ ವಿಡಿಯೋಗಳ ಟ್ರೆಂಡ್ ಆಗಿದೆ, ವಿವ್ಸ್ ಪಡೆಯುವುದಕ್ಕೆ ಯುಟ್ಯೂಬರ್ ಗಳು ಇನ್ನೊಬ್ಬರನ್ನು ಹೀಯಾಳಿಸು ಕೆಲಸ ಮಾಡುತ್ತಾರೆ,
ತಮಿಳಿನ ಯೂಟ್ಯೂಬರ್ ಲೈಟ್ ಮೈಂಡ್ ಟಾಮ್ ವಿಜಯ ಹೆಸರಿನ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಯೂಟ್ಯೂಬರ್ ಕೋಟಿಗೊಬ್ಬ ಸಿನಿಮಾ ರಜನಿಕಾಂತ್ ನಟನೆಯ ಭಾಷಾ ಸಿನಿಮಾದ ರಿಮೇಕ್ ಬಗ್ಗೆ ಟ್ರೋಲ್ ಮಾಡಿದ್ದಾನೆ, ಈ ಸಿನಿಮಾದಲ್ಲಿ ವಿಷ್ಣು ವರ್ಧನ್ ಕಾಲಿನಿಂದ ವಿಲನ್ ಅನ್ನಯ ಹಗ್ಗದಿಂದ ಕಟ್ಟಿ ಹಾಕುವ ದೃಶ್ಯ ಹಾಗೂ ಸಿಂಹ ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್ ಅನ್ನು ತೋರಿಸಿ ಟೀಕಿಸಿದ್ದಾನೆ, ಇದು ಕನ್ನಡಿಗರನ್ನು ಕೆರಳಿಸಿದೆ,
Veekay News > Entertainment News > Cinema > ತಮಿಳು ಯೂಟ್ಯೂಬರ್ ಗೆ ಕನ್ನಡಿಗರಿಂದ ಹಿಗ್ಗಾಮುಗ್ಗಾ ತರಾಟೆ!
ತಮಿಳು ಯೂಟ್ಯೂಬರ್ ಗೆ ಕನ್ನಡಿಗರಿಂದ ಹಿಗ್ಗಾಮುಗ್ಗಾ ತರಾಟೆ!
ವೀ ಕೇ ನ್ಯೂಸ್03/07/2025
posted on
