Live Stream

[ytplayer id=’22727′]

| Latest Version 8.0.1 |

Entertainment News

*ಅದ್ದೂರಿಯಾಗಿ ಜರುಗಿದ ʼಆಸ್ಟ್ರಲ್ ಸ್ಟಾರ್ ಕಿಡ್ಸ್ ಮತ್ತು ಆಸ್ಟ್ರಲ್ ಮಮ್ಮಿ & ಮೀʼ ಫ್ಯಾಷನ್‌ ಶೋ*

*ಅದ್ದೂರಿಯಾಗಿ ಜರುಗಿದ ʼಆಸ್ಟ್ರಲ್ ಸ್ಟಾರ್ ಕಿಡ್ಸ್ ಮತ್ತು ಆಸ್ಟ್ರಲ್ ಮಮ್ಮಿ & ಮೀʼ ಫ್ಯಾಷನ್‌ ಶೋ*
ಬೆಂಗಳೂರು,ಆ.17: ಆಸ್ಟ್ರಲ್ ಸ್ಟಾರ್ ಕಿಡ್ಸ್ ಮತ್ತು ಆಸ್ಟ್ರಲ್ ಮಮ್ಮಿ & ಮೀ ಕಾರ್ಯಕ್ರಮದ  ಮೊದಲ ಆವೃತ್ತಿಯು ನಗರದಲ್ಲಿ ಆಯೋಜಿಸಲಾಗಿತ್ತು. ಮಕ್ಕಳು ಹಾಗೂ ತಾಯಂದಿರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ ಹೊರಹೊಮ್ಮಿತು.
ನಗರದ ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್‌ ಡಿವಿನಿಟಿ ಮಾಲ್‌ನಲ್ಲಿ ಆಸ್ಟ್ರಲ್ ಸ್ಟಾರ್ ಕಿಡ್ಸ್ ಮತ್ತು ಆಸ್ಟ್ರಲ್ ಮಮ್ಮಿ & ಮೀ ಕಾರ್ಯಕ್ರಮವನ್ನು ಅಸ್ಟ್ರಲ್‌ ಪೇಜೆಂಟ್ಸ್‌ ಹಾಗೂ ಮೀಡಿಯಾ ಕನೆಕ್ಟ್‌ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಎರಡು ವಿಭಾಗಗಳನ್ನು ಈ ಫ್ಯಾಷನ್‌ ಶೋ ಒಳಗೊಂಡಿದ್ದು, ಮಕ್ಕಳ ರ್ಯಾಂಪ್‌ ವಾಕ್ ಮತ್ತು ತಾಯಿ ಹಾಗೂ ಮಗುವಿನ ರ್ಯಾಂಪ್‌ ವಾಕ್ ನಿಂದ ಕೂಡಿತ್ತು. ‌ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಿವಿಧ ವಿಭಾಗದಲ್ಲಿ ಬಹುಮಾನ ವಿತರಿಸಲಾಯಿತು.
ಮೊದಲನೆಯದಾಗಿ ಕಾರ್ಯಕ್ರಮದ ಮುಖ್ಯ ಸರ್ಧೆಯಾದ ಅಷ್ಟ್ರಲ್ ಮಮ್ಮಿ & ಮಿನಿ ಕರ್ನಾಟಕ ಕಿರೀಟವನ್ನು ವಿನುತಾ ಜೆವಿ & ಚೇಶ್ವಿಕ ಅವರು ಮೂಡಿಗೆರಿಸಿಕೊಂಡರು. ಫಸ್ಟ್ ರನ್ನರ್ ಅಪ್ ಆಗಿ ಸುಪ್ರಿಯಾ & ಸಿಯರ ಆರ್ ಶ್ರೀವತ್ಸ ಮತ್ತು ಸೆಕೆಂಡ್ ರನ್ನರ್ ಅಪ್ ಆಗಿ ಡಾ ಶಿಲ್ಪಾ ಸಿಂಗ್ & ಔರಿಯಾ ಸುರಾ ತಮ್ಮದಾಗಿಸಿಕೊಂಡರು.
ಜ್ಯೂನಿಯರ್ ಮಿಸ್ ಅಷ್ಟ್ರಲ್ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅದ್ವಿತ, ಫಸ್ಟ್ ರನ್ನರ್ ಅಪ್ ಆಗಿ ಬೆಳಕು, ಆದ್ಯಾ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು.  ಜೂನಿಯರ್ ಮಿಸ್ಟರ್ ಅಷ್ಟ್ರಲ್ ಕರ್ನಾಟಕ ವಿಭಾಗದಲ್ಲಿ  ಪ್ರಥಮ ಬಹುಮಾನವನ್ನು ಸಂಪ್ರೀತ್ ರಾಯ್ ಮತ್ತು ಫಸ್ಟ್ ರನ್ನರ್ ಅಪ್ ಅನ್ನು ಸಂಭ್ರಮ್ ಮಠದ್ ಪಡೆದುಕೊಂಡರು.
ಟೈನಿ ಮಿಸ್ಟರ್ ಅಷ್ಟ್ರಲ್ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ವಾಗೀಶ್ ಎಸ್ ಮಗನೂರ್, ಫಸ್ಟ್ ರನ್ನರ್ ಅಪ್ ಅನ್ನು ಭೀವಿನ್, ಸೆಕೆಂಡ್ ರನ್ನರ್ ಅಪ್ ಅನ್ನು ಕೌಶಿಕ್ ಆರ್ ರಾವತ್ ತಮ್ಮದಾಗಿಸಿಕೊಂಡರು. ಲಿಟಲ್ ಮಿಸ್ ಅಷ್ಟ್ರಲ್ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಮೆಲೋನಿ ಮುತಕ್ಕ, ಫಸ್ಟ್ ರನ್ನರ್ ಅಪ್ ಅನ್ನು ಚೇತನ ಸಿರಿ ಎಂ ಆರ್, ಸೆಕೆಂಡ್ ರನ್ನರ್ ಅಪ್ ಅನ್ನು ಅದಿತಿ ಕಟ್ಟಿ ಪಡೆದುಕೊಂಡರು. ಲಿಟಲ್‌ ಮಿಸ್ಟರ್‌ ಅಸ್ಟ್ರಲ್‌ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ರೆಯಾನ್ಷ್‌ ಡಿ, ಫಸ್ಟ್‌ ರನ್ನರ್‌ ಅಪ್‌ ಅನ್ನು ಕಿಯಾನ್‌ ಮತ್ತು ಸೆಕೆಂಡ್‌ ರನ್ನರ್‌ ಅಪ್‌ ಅನ್ನು ವೇದಾಂತ್‌ ಜಿ ಪಡೆದುಕೊಂಡರು. ಅಷ್ಟ್ರಲ್ ಬಡ್ಸ್ & ಬ್ಯೂಟಿ ಕರ್ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಪ್ನಾ & ರಿಷಬ್ ವಸಿಷ್ಠ ಹಾಗೂ ಫಸ್ಟ್ ರನ್ನರ್ ಅಪ್ ಅನ್ನು ಡಾ ಶಿಲ್ಪಾ & ರಾಗ್ನರ್ ಔಲೀಸ್ ಸುರಾ ಅವರು ತಮ್ಮದಾಗಿಸಿಕೊಂಡರು.
ರಾಜ್ಯದ ವಿವಿಧೆಡೆಗಳಿಂದ ಸುಮಾರು 100ಕ್ಕೂ ಸ್ಪರ್ಧಿಗಳು ಈ ಫ್ಯಾಷನ್‌ ಶೋ ನಲ್ಲಿ ಪಾಲ್ಗೊಂಡಿದ್ದು,  ತಾಯಿ ಮತ್ತು ಮಕ್ಕಳ ಪ್ರತಿಭಾ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಯಿತು.
ಈ ಕುರಿತು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀಮತಿ ಪ್ರತಿಭಾ ಸೌಂಶಿಮಠ (ಮಿಸೆಸ್‌ ಇಂಡಿಯಾ – ಕರ್ನಾಟಕದ ನಿರ್ದೇಶಕಿ, ಮಿಸೆಸ್‌ ಇಂಡಿಯಾದ  ರಾಷ್ಟ್ರೀಯ ನಿರ್ದೇಶಕಿ)  ಮಾತನಾಡಿ,  ತಾಯಂದಿರಿಗೆ ಇದೊಂದು ವಿಶೇಷ ವೇದಿಕೆಯಾಗಿದೆ ಏಕೆಂದರೆ ಇಲ್ಲಿ ತಾಯಿ ಮತ್ತು ಅವರ ಮಕ್ಕಳಿಗೂ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿ ಕೊಡಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಪ್ರತಿಭಾ ಪ್ರದರ್ಶನ ಜೊತೆಗೆ ತಾಯಿ ಮತ್ತು ಮಕ್ಕಳ ನಡುವಿನ ಬಾಂಧ್ಯವ್ಯವನ್ನು ಬೆಸೆಯುವ ವೇದಿಕೆ ಇದಾಗಿತ್ತು. ಈ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ರನ್ನರ್ ಡಾ. ನಿಶಿತಾ ಶೆಟ್ಟಿ ಫರ್ನಾಂಡಿಸ್, ರಾಧಾ ರಮಣ ಧಾರವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಅವರ ಪತ್ನಿ ಶಿಕಾ ಪ್ರಸಾದ್ ಮತ್ತು ಸೆಲೆಬ್ರಿಟಿ ಮೇಕಪ್ ಕಲಾವಿದೆ ಹಾಗೂ ಇನ್‌ಫ್ಲುಯೆನ್ಸರ್‌ ವಿದ್ಯಾ ನವೀನ್‌ ಮತ್ತು ಸಿಂಧೂರಿ ಯತೀಶ್‌ ಅವರು ತೀರ್ಪುಗಾರರಾಗಿ ಉಪಸ್ಥಿತರಿದ್ದರು.
ವೀ ಕೇ ನ್ಯೂಸ್
";