ಮುಂಬೈ, ಜುಲೈ 27 – ಬಾಲಿವುಡ್ ನಟ ಸಂಜಯ್ ದತ್ ಅವರು ಇತ್ತೀಚೆಗಷ್ಟೇ ಬಹಿರಂಗಪಡಿಸಿರುವ ವಿವರ ಎಲ್ಲರ ದಯೆಯನ್ನು ಆಕರ್ಷಿಸಿದೆ. ಅವರ ಅಭಿಮಾನಿಯೊಬ್ಬರು 2018ರಲ್ಲಿ ತಮ್ಮ ಸಾವಿನ ಮುನ್ನ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿನಲ್ಲಿ ಬರೆದು ಹೋದರೆಂದಿದ್ದಾರೆ. ಆದರೆ, ದತ್ ಅವರು ಆ ಆಸ್ತಿಯನ್ನು ತಮ್ಮ ಬಳಿಡದೇ, ಅಭಿಮಾನಿಯ ಕುಟುಂಬಕ್ಕೆ ಹಿಂತಿರುಗಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಭಿಮಾನಿಯ ನಿಷ್ಠೆ, ದತ್ ಅವರ ಮಾನವೀಯತೆ
ಸಂಜಯ್ ದತ್ ಅವರು Curly Tales ಕಾರ್ಯಕ್ರಮದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದರು. ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳಿದರು:
“ಹೌದು, ನನ್ನ ಅಭಿಮಾನಿಯೊಬ್ಬರು ನನ್ನ ಹೆಸರಿಗೆ 72 ಕೋಟಿ ರೂ. ಬರೆದು ಹೋಗಿದ್ದರು. ಆದರೆ ನಾನು ಆ ಸಂಪತ್ತನ್ನು ಅವರ ಕುಟುಂಬಕ್ಕೆ ಹಿಂದಿರುಗಿಸಿದ್ದೇನೆ.“
ಅವರ ಈ ಮಾತು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.