Live Stream

[ytplayer id=’22727′]

| Latest Version 8.0.1 |

Entertainment News

2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಹೆಸರುಗಳ ಶಿಫಾರಸ್ಸಿಗೆ ಆಹ್ವಾನ

2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಹೆಸರುಗಳ ಶಿಫಾರಸ್ಸಿಗೆ ಆಹ್ವಾನ
ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ, ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ ಪ್ರಶಸ್ತಿ’ಗಳಿಗೆ ಸಾಧಕರ ಹೆಸರುಗಳನ್ನು ಶಿಫಾರಸ್ಸು ಮಾಡಲು ಆಹ್ವಾನಿಸಲಾಗಿದೆ.
2026ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಅನ್ವಯಿಸುವ ನಿಯಮಾವಳಿಗಳು https://padmaawards.gov.in  ರಲ್ಲಿ ಲಭ್ಯವಿದ್ದು, ಅರ್ಹ ಹೆಸರುಗಳನ್ನು ಶಿಫಾರಸ್ಸು ಮಾಡುವಾಗ ಕೇಂದ್ರ ಸರ್ಕಾರ ಸೂಚಿಸಿರುವ ಅಂಶಗಳನ್ನು ಪರಿಗಣಿಸುವುದು.
ಮೇಲೆ ಸೂಚಿಸಿದ ಕ್ಷೇತ್ರಗಳಲ್ಲಿ ನೀಡಬಹುದಾದ ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025 ನೇ ಜುಲೈ 31 ರಂದು ಮುಕ್ತಾಯಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ರಾಜ್ಯ ಸರ್ಕಾರವು ಪ್ರಸ್ತಾವನೆಗಳು ಪರಿಶೀಲಿಸಿ 2025ನೇ ಜುಲೈ 31 ರೊಳಗಾಗಿ ಕೇಂದ್ರ ಸರ್ಕಾರಕ್ಕೆ ಆನ್‍ಲೈನ್ ಮೂಲಕ ಮಾತ್ರ ಕಳುಹಿಸಬೇಕಾಗಿರುವುದರಿಂದ ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಪ್ರಸ್ತಾವನೆಗಳನ್ನು ಸಂಬಂಧಿಸಿದ ಇಲಾಖೆಗಳು 2025ನೇ ಜುಲೈ 15 ರೊಳಗೆ ಸಲ್ಲಿಸುವುದು ಹಾಗೂ ಸಾಫ್ಟ್ ಪ್ರತಿಗಳನ್ನು     ಇ-ಮೇಲ್ ವಿಳಾಸ: [email protected].in ಕ್ಕೆ ಕಳುಹಿಸುವುದು. 2025ನೇ ಜುಲೈ 15 ರ ನಂತರ ಬರುವ ಯಾವುದೇ ಪ್ರಸ್ತಾವನೆ /ಮನವಿಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ವೀ ಕೇ ನ್ಯೂಸ್
";