Live Stream

[ytplayer id=’22727′]

| Latest Version 8.0.1 |

Local News

ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗಾ ದಿನಾಚರಣೆ

ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗಾ ದಿನಾಚರಣೆ

ಬೆಂಗಳೂರು: ಯೋಗ ಕೇವಲ ಶಾರೀರಿಕ ಮಾತ್ರವಲ್ಲದೆ ಆರೋಗ್ಯ,ಜ್ನಾನಕ್ಕೋ ಒಳ್ಳೆಯ ಮದ್ದುಗಿದ್ದು, ನಿತ್ಯ ಎಲ್ಲರು ಅಭ್ಯಾಸ ಮಾಡಬೇಕು ಎಂದು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆಲಂಪಲ್ಲಿ ವಿಷ್ಣು ಭರತ್ ತಿಳಿಸಿದರು.

ಅಂತರಾಷ್ರ್ಟ್ರಿಯ ಯೋಗ ದಿನಾಚರಣೆ ಹಿನ್ನೆಲೆ

ಕನಕಪುರ ರಸ್ತೆಯ ಸೋಮನಹಳ್ಳಿಯ ಎಪಿಎಸ್ ಶಿಕ್ಷಣದ  ಅಂಗ ಸಂಸ್ಥೆಯಾಗಿರುವ ಅನಂತ ಜ್ಙಾನ ಗಂಗೋತ್ರಿ ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನ ಆಚರಣೆಯಲ್ಲಿ ಮಾತನಾಡಿದ ಅವರು,  ಸಂಸ್ಥೆಯ ನೂರಾರು ಮಕ್ಕಳು ಯೊಗದಿನಾಚರಣೆಯಲ್ಲಿ ಭಾಗವಹಿಸಿದ್ರು, ಚಿಕ್ಕವರಿದ್ದಾಗಲೇ ಮಕ್ಕಳು ಯೋಗ ಅಭ್ಯಾಸ ಮಾಡಬೇಕು, ಯಾವುದೆ ರೋಗಗಳು ಬರುವುದಿಲ್ಲ, ಯೋಗದಿಂದ ಮಾನಸಿಕವಾಗಿ ಶಕ್ತರಾಗಲು ಸಾದ್ಯವಾಗುತ್ತದೆ, ನಿತ್ಯ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು‌.

  • ಜೂನ್ 21 ವಿಶೇಷ ದಿನವಾಗಿದೆ. ಸೂರ್ಯ ಪ್ರಕಾಶಮಾನವಾಗಿ ಬೆಳಗುತ್ತಾನೆ. ಪ್ರತಿನಿತ್ಯ ಇರುವುದಕ್ಕಿಂತ ಇವತ್ತು ಬಹಳ ಉದ್ದದ ದಿನವಾಗಿದೆ, ಹಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ಅಂತರಾಷ್ಡ್ರೀಯ ಯೋಗ ದಿನ ಆಚರಣೆ ಮಾಡಿದ್ಧಾರೆ. ಇ ದಿನ ವೈಜಾಗ್ ನಲ್ಲಿ ಲಕ್ಷಾಂತರ ಜನ ಯೋಗದಲ್ಲಿ ಭಾಗಿಯಾಗಿದ್ಧಾರೆ. ಯೋಗ ಮಾಡುವವರಿಗೆ ಯಾವುದೇ ಆರೋಗ್ಯ ವಿಮೆ ಬೇಕಾಗಿಲ್ಲ. ಜೀವನದ ಉದ್ದಕ್ಕೂ ಸಂತೋಷವಾಗಿ ಇರಬಹುದು ಎಂದು ತಿಳಿಸಿದರು.

ಎಪಿಎಸ್ ಕಾಲೇಜಿನ ಯೋಗ ಶಿಕ್ಷಕಿ ಧನಲಕ್ಷ್ಮಿ ಸಿಪಿ  ಮಾತನಾಡಿ, ಯೋಗ ದಿನಾಚಾರಣೆ ಮಾಡುವ ಉದ್ದೇಶ ಇಂದು ವಿಶೇಷವಾಗಿ ಸೂರ್ಯ ಪ್ರಕಾಶ ಮಾನವಾಗಿ ಬೆಳಗುತ್ತಾನೆ. ಲ್ಯಾಟಿಟ್ಯಡ್ ಮತ್ತು ಲಾಂಗಿಟ್ಯೂಡ್ ಹೆಚ್ಚು ಇರುತ್ತದೆ. ಒಂದು ಭೂಮಿ ಒಂದು ಆರೋಗ್ಯ ಎಂಬ ಕಲ್ಪನೆಯ ಅಡಿಯಲ್ಲಿ ಯೋಗ ಮಾಡಲಾಗುತ್ತದೆ. ಇದನ್ನು ಮೋದೀಜಿ  ಜಾರಿಗೆ ತಂದಿದ್ದಾರೆ, ಯೊಗದಿಂದ ಹತ್ತು ಹಲವು ಪ್ರಯೋಜನಗಳಿವೆ ಮಕ್ಕಳು ನಿತ್ಯ ಯೋಗ ಮಾಡುವುದರಿಂದ ಆರೋಗ್ಯದ ಜೊತೆಗೆ ಮಾನಸಿಕವಾಗಿ  ಸದ್ರುಡವಾಗುತ್ತದೆ ಎಂದರು.

ಬೆಂಗಳೂರಿನ ಎನ್ ಆರ್ ಕಾಲೋನಿಯ ಎಪಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಾಧ್ಯಾಪಕರು, ಶಿಕ್ಷಕರು,ವಿದ್ಯಾಥಿರ್ಇಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗಭ್ಯಾಸ ಮಾಡಿದರು. ಅದ ಪಿಯುಸಿ,ಡಿಗ್ರಿ,ಪಾಲಿಟೆಕ್ನಿಕ್ ನ ಪ್ರಾಚಾರ್ಯರು, ಎಪಿಎಸ್ ಗ್ರಾಮೀಣ ಶಾಲೆಯ ಹೆಡ್ ಮಾಸ್ಟರ್  ಸೆರಿದಂತೆ , ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಯೋಗ ಗುರುಗಳಾದ  ಶಂಕರ್ ಹಾಗು ಧನಲಕ್ಷ್ಮಿ ಅವರ ಸಹಯೋಗದಲ್ಲಿ ನೂರಾರು ಮಕ್ಕಳಿಗೆ ಯೋಗ ಬಗ್ಗೆ ತಿಳಿಸುವ ಜೊತೆಗೆ ಕೆಲವು ಯೋಗದ ಆಸನಗಳನ್ನು ನೇರವಾಗಿ  ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ಪ್ರಕಾಶ್ ಎ, ಯೋಗ ಗುರು ಶಂಕರ್, ಉಪ ಪ್ರಾಚಾರ್ಯರಾದ ಪ್ರೊ.ಸಮೀರಣ್ಣ ಸಿಪಿ, ಪಿಇ ವಿಭಾಗದ ನಿರ್ದೇಶಕರಾದ ಡಾ.ಶ್ರೀಧರ್ ಬಿಡಿ, ಡಾ.ಡಿಜಿ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";