*ವಿಶ್ವ ಛಾಯಗ್ರಾಹಕರ ದಿನ:ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು*
ಪ್ರೆಸ್ ಕ್ಲಬ್ ಸಭಾಂಗಣ: ಪೋಟೋ ಜರ್ನರ್ಲಿಸ್ಟ್ ಅಸೋಸಿಯೇಷನ್ ಬೆಂಗಳೂರುವತಿಯಿಂದ ವಿಶ್ವ ಛಾಯಗ್ರಾಹಕ ದಿನ ಅಚರಣೆ.
ಮುಖ್ಯಮಂತ್ರಿಗಳಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ರವರು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆಯಿಷಾ ಖಾನಂ ಮತ್ತು ಸಂಪಾದಕರಾದ ಶಾಂತಕುಮಾರ್, ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷರಾದ ಮೋಹನ್ ರವರು, ಉಪಾಧ್ಯಕ್ಷರಾದ ಶೈಲೇಂದ್ರ ಬೋಜಕ್ , ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಸದಾಶಿವಶೆಣೈರವರು, ಹಿರಿಯ ಪತ್ರಿಕಾ ಛಾಯಗ್ರಾಹಕ ಭಾಗ್ಯಪ್ರಕಾಶ್ ರವರು ದೀಪ ಬೆಳಗಿಸಿ ವಿಶ್ವ ಛಾಯಗ್ರಾಹಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ಕೆ.ವಿ.ಪ್ರಭಾಕರ್ ರವರು* ಕ್ಯಾಮರ ಎದುರು ಎಲ್ಲರು ನಗುತ್ತಾರೆ ಮತ್ತು ಕ್ಯಾಮರಮ್ಯಾನ್ ಎಷ್ಟೆ ನೋವು ಇದ್ದರು ನಗು ಎಂದು ಎದುಗಡೆ ಇದ್ದವರಿಗೆ ಹೇಳುತ್ತಾರೆ.
ಕೋಲಾರ ಜಿಲ್ಲೆ ಪತ್ರಕರ್ತನಾಗಿ ಸೇವೆ ಆರಂಭಿಸಿದೆ. ಪೋಟೋ ಇಲ್ಲದೇ ಜಗತ್ತ ಹೇಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪೋಟೋ ಇರುವುದರಿಂದ ಸಾಕ್ಷ್ಮಿಯಾಗಿ, ಅವಿಭಾಗ್ಯ ಅಂಗವಾಗಿ ಉಳಿದಿದೆ.
ಪೋಟೋ ಎಲ್ಲ ವಿಷಯಗಳನ್ನು ತಿಳಿಸುತ್ತದೆ. ಪೋಟೋಗ್ರಾಫಿ ಬಹಳ ಮುಖ್ಯ.
ಕ್ಯಾಮರ ಹಿಡಿದವರೆಲ್ಲ ಅದ್ಬುತ ಛಾಯಗ್ರಾಹಕ ಆಗುವುದಿಲ್ಲ, ಹೃದಯಾಂತರಾಳದಿಂದ ಪೋಟೋ ತೆಗೆಯಬೇಕು. ಸುಡಾನ್ ನಲ್ಲಿ ಒಂದು ಮಗುವಿನ ಚಿತ್ರ ಕೆವಿಯನ್ ಕಾರ್ಟನ್ ರವರು ತೆಗೆದ ಚಿತ್ರ ವಿಶ್ವಕ್ಕೆ ಹೊಸ ಸಂದೇಶ, ಪ್ರಶ್ನೆಗಳಿಗೆ ಹುಟ್ಟಿತು. ಶಕ್ತಿ ಯೋಜನೆ ಸಂಗವ್ವ ಬಸ್ ನಿಲ್ದಾಣದ ಮೆಟ್ಟಲುಗಳಿಗೆ ನಮಸ್ಕಾರ ಮಾಡಿರುವ ಚಿತ್ರ ವಿಶೇಷವಾಗಿತ್ತು.
ರೀಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರವರಗೆ ಕ್ಯಾಮರ ತಂತ್ರಜ್ಞಾನ ಬೆಳದಿದೆ ಎಂದು ಹೇಳಿದರು.
*ಶಾಂತಕುಮಾರ್* ರವರು ಮಾತನಾಡಿ ವಿಶ್ವ ಛಾಯಗ್ರಾಹಕ ದಿನದ ಶುಭಶಯಗಳು. ಪೋಟೋ ಜರ್ನಲಿಸ್ಟ್ ಗಳು ಹುರುಪು,ಉತ್ಸಾಹಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಂಬಾ ಕಷ್ಟದ ಕೆಲಸ ಪೋಟೋ ಜರ್ನಲಿಸ್ಟ್ ಗಳದ್ದು. ಪೋಟೋ ಜರ್ನಲಿಸ್ಟ್ ಗಳ ಕ್ರೀಯಟಿವ್ ಆಗಿ ಇರಬೇಕು.
ಭೋಪಾಲ್ ನಲ್ಲಿ ನಡೆದ ದುರಂತದ ಕುರಿತು ಪೋಟೋಗಳು ಇಂದು ನೋಡಿದಾಗ ಆಗಿನ ಘಟನೆ ಕಣ್ಣುಮುಂದೆ ನಿಲ್ಲುತ್ತದೆ.
ಮೊದಲು ಪತ್ರಕರ್ತ ನಂತರ ಪೋಟೋ ಜರ್ನಲಿಸ್ಟ್ ಪತ್ರಿಕೋದ್ಯಮ ಸಿದ್ದಾಂತ ಮರೆಯಬಾರದು ಎಂದು ಹೇಳಿದರು.
*ಆಯಿಷಾ ಖಾನಂರವರು* ವಿಷಯ ಜೊತೆಯಲ್ಲಿ ಪೋಟೋ ಇದ್ದಾಗ ಅರ್ಥಪೂರ್ಣವಾಗಿ ಇರುತ್ತದೆ. ಪೋಟೋಗ್ರಾಫಿ ಕುರಿತು ತಿಳಿದುಕೊಳ್ಳಿ, ಅರ್ಥಮಾಡಿಕೊಂಡು ಪೋಟೋ ತೆಗೆಯಿರಿ ಎಂದು ಹೇಳಿದರು.
*ಸದಾಶಿವಶೆಣೈರವರು* ಮಾತನಾಡಿ ಪೋಟೋ ಗ್ರಾಫರ್ ಗಳು ಮೈಯಲ್ಲಿ ಕಣ್ಣಾಗಿ ಇಟ್ಟಿಕೊಂಡಿರಬೇಕು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಡಿನ ಪ್ರತಿಷ್ಟಿತ ಪತ್ರಿಕೆಯಲ್ಲಿ ಬಸ್ ಮೇಲಿನ ಚಿತ್ರ ಪ್ರಕಟನೆಯಾಗಿ ಡೊಡ್ಡ ಸುದ್ದಿಯಾಗಿ ರಾಜ್ಯದಲ್ಲಿ ಪ್ರಚಾರವಾಗಿತ್ತು.
ಪೋಟೋಗ್ರಾಫರ್ ಗಳು ಕಠಿಣ ಶ್ರಮ ಪಡಬೇಕು. ರಾಜಕಾರಣಿಗಳು, ನಟ,ನಟಿಯರ ಪೋಟೋ ತೆಗೆಯವುದು ಸುಲಭ ಅದರೆ ಯುದ್ದ ಸಂದರ್ಭದ ಪೋಟೋ ತೆಗೆಯುವುದು ಬಹಳ ಕಷ್ಟ ಎಂದು ಹೇಳಿದರು.
*ಅಧ್ಯಕ್ಷರಾದ ಮೋಹನ್* ರವರು ಮಾತನಾಡಿ ಪೋಟೋಗ್ರಾಫರ್ ಗಳು ಬಹಳ ಸಂಕಷ್ಟದಲ್ಲಿ ಪ್ರತಿದಿನ ಕೆಲಸ ಮಾಡುತ್ತಾರೆ. ವಸತಿ ಇಲಾಖೆ ವತಿಯಿಂದ ಪತ್ರಿಕಾ ಛಾಯಗ್ರಾಫರ್ ಗಳಿಗೆ ನಿವೇಶನ ನೀಡಬೇಕು ಮತ್ತು ಮಾಧ್ಯಮ ಅಕಾಡೆಮಿಯಲ್ಲಿ ಪತ್ರಿಕಾ ಛಾಯಗ್ರಾಹಕರಿಗೆ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಅಕ್ರಮ್, ಸುಧಾಕರ್, ಪುಷ್ಕರ್, ರಾಬರ್ಟ್ ಮತ್ತು ಪತ್ರಿಕಾ ಛಾಯಗ್ರಾಹಕರು, ಪತ್ರಿಕಾ ಛಾಯಗ್ರಾಹಕರು, ಸುರಾನ ಕಾಲೇಜು, ಮೌಂಟ್ ಕಾರ್ಮಲ್, ಜೈನ್ ಪತ್ರಿಕಾ ವಿಭಾಗ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.