Live Stream

[ytplayer id=’22727′]

| Latest Version 8.0.1 |

Art & LiteratureCultural

ನೂತನ ನಿಗಮದ ಅಧ್ಯಕ್ಷರು – ಮಾಜಿ ಸಚಿವರಿಗೆ ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಅಭಿನಂದನಾ ಸಮಾರಂಭ

ನೂತನ ನಿಗಮದ ಅಧ್ಯಕ್ಷರು – ಮಾಜಿ ಸಚಿವರಿಗೆ ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಅಭಿನಂದನಾ ಸಮಾರಂಭ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಅಕ್ಟೋಬರ್ 16 ಗುರುವಾರ ಸಂಜೆ 6 ರಿಂದ 9.30 ರವರೆಗೆ, “ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನ”ವನ್ನು (First All India Kannada Poets’ Conference) ಹಮ್ಮಿಕೊಂಡಿದೆ.
ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹಿರಿಯ ಐ.ಎ.ಎಸ್. ಅಧಿಕಾರಿಗಳಾದ ಡಾ. ಸಿ. ಸೋಮಶೇಖರ್‍ರವರು (Dr.C. Somashekhar) ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ “ಮೋಕ್ಷಗುಂಡಂ ವಿಶ್ವೇಶ್ವರಯ್ಯ (Sir M Visweswaraiah) ಮತ್ತು ಸರ್ವಪಲ್ಲಿ ರಾಧಾಕೃಷ್ಣನ್‍ರವರು (Sarvapalli Radhakrishnan) ದೇಶಕ್ಕೆ ಕೊಟ್ಟ ಕೊಡುಗೆಗಳ ಕುರಿತು ವಿಚಾರ ಸಂಕಿರಣ ಹಾಗೂ ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಪ್ರಶಸ್ತಿ (International Award) ಪ್ರದಾನ ಸಮಾರಂಭ ನಡೆಯಲಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ. ನಂಜಯನಮಠ ಮತ್ತು ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಎಂ.ಎಸ್. ಮುತ್ತುರಾಜ್ ಹಾಗೂ ಮಾಜಿ ಸಚಿವ ಮತ್ತು ಉದ್ಯಮಿ ಡಾ. ಮುರುಗೇಶ ಆರ್. ನಿರಾಣಿರವರಿಗೆ ಪ್ರಥಮ ವಿಶ್ವೇಶ್ವರಯ್ಯ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಉಡುಪಿಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀ ರಮಾನಂದ ಗುರೂಜಿರವರ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ನೇರವೇರಿಸಲಿದ್ದು, ಪ್ರಶಸ್ತಿ ಪ್ರದಾನವನ್ನು ಸುಪ್ರಿಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತರಾದ ಡಾ. ಸಂತೋಷ ಹೆಗ್ಡೆ ಮಾಡಲಿದ್ದು, ಚಲನಚಿತ್ರ ಕಲಾವಿದರಾದ ಶಂಕರ್ ಭಟ್, ಗಣೇಶರಾವ್ ಕೇರ್ಕರ್ ಹಾಗೂ ಶ್ರೀಮತಿ ಮೀನಾ ಉಪಸ್ಥಿತರಿರುತ್ತಾರೆ. ವಿಚಾರ ಸಂಕಿರಣದ ವಿಷಯವನ್ನು ಮಕ್ಕಳ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಮಂಡಿಸಲಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀ ಕೇ ನ್ಯೂಸ್
";