ವಾರಣಾಸಿ ಯಲ್ಲಿನ ಸರ್ವೋದಯ ಸಂಸ್ಥೆಯ ಆಸ್ತಿಯ ಅತಿಕ್ರಮಣ, ಗುಜರಾತಿನ ಸಬರಮತಿ ಹಾಗೂ ಗುಜರಾತ್ ವಿದ್ಯಾಪೀಠದಲ್ಲಿನ ಸರಕಾರಿ ಹಸ್ತಕ್ಷೇಪ,ಕೇಂದ್ರದ ಕೆಲವು ಜನ ವಿರೋಧಿ ನೀತಿ – ಇವುಗಳನ್ನು ಪ್ರತಿಭಟಿಸಿ ವಾರ್ಧಾ ದಲ್ಲಿನ ಸರ್ವ ಸೇವಾ ಸಂಘ , ಇತರ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಬರುವ ಅಕ್ಟೋಬರ್ 2 ರಿಂದ ನವೆಂಬರ್ 26 ರ ಅವಧಿಯಲ್ಲಿ 1000 ಕಿ. ಮೀ. ಪಾದಯಾತ್ರೆಯ ನ್ನು ಹಮ್ಮಿಕೊಂಡಿದೆ.
ವಾರಣಾಸಿಯ ರಾಜಘಾಟ್ ನಿಂದ ಪ್ರಾರಂಭವಾಗುವ ಯಾತ್ರೆ ಅಲಹಾಬಾದ್, ರಾಯ್ ಬರೇಲಿ, ಲಕ್ನೋ, ಕಾನ್ಪುರ್, ಷಹಜಹಾನ್ ಪುರ, ಮಥುರಾ , ಗಾಜಿಯಾಬಾದ್ ಸೇರಿದಂತೆ 110 ಗ್ರಾಮಗಳ ಮೂಲಕ ಸಾಗುತ್ತದೆ.
ಗಾಂಧಿ – ಸರ್ವೋದಯ – ಲೋಕ ಶಕ್ತಿ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಉಚಿತ ಊಟ ವಸತಿ ವ್ಯವಸ್ಥೆ ಮಾಡಲಾಗುವುದು. ಸರಾಸರಿ ಪ್ರತಿದಿನ 20 ಕಿ. ಮೀ. ನಂತೆ 55 ದಿವಸಗಳಲ್ಲಿ ಈ ದೂರವನ್ನು ಕ್ರಮಿಸಲು ಯೋಜಿಸಲಾಗಿದೆ. ಮೇಲ್ಕಂಡ ಎಂಟು ನಗರಗಳಲ್ಲಿ ಯಾತ್ರೆಯನ್ನು ಸೇರಿಕೊಳ್ಳುವ – ನಿರ್ಗಮಿಸುವ ಅವಕಾಶವಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8874719992( ಅರವಿಂದ್ ಅಂಜುಮ್) 9415300520 ( ನಂದಲಾಲ್ ಮಾಸ್ಟರ್)
9453047097 ( ರಾಮ್ ಧೀರಜ್ ) 9880140640 ( ಡಾ. ವಿ.ಪ್ರಶಾಂತ್ ಬೆಂಗಳೂರು ) ಇವರುಗಳನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ವೋದಯ ಮಂಡಳಿ ಅಧ್ಯಕ್ಷ ಡಾ. ಹೆಚ್ ಎಸ್ ಸುರೇಶ್ ತಿಳಿಸಿದ್ದಾರೆ.
VK NEWS DIGITAL :
ಜ್ಯೋತಿರ್ಭೀಮೇಶ್ವರ ವ್ರತ (ಭೀಮನ ಅಮಾವಾಸ್ಯೆ) ಆಚರಣೆ ಮತ್ತು ಮಹತ್ವ