Live Stream

[ytplayer id=’22727′]

| Latest Version 8.0.1 |

Education NewsState News

ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು: ಐಐಎಸ್ಸಿ ಪ್ರೊ. ಡಾ.ಶ್ರೀನಿವಾಸ ತಲಬತ್ತುಲ

ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು: ಐಐಎಸ್ಸಿ ಪ್ರೊ. ಡಾ.ಶ್ರೀನಿವಾಸ ತಲಬತ್ತುಲ

ಬೆಂಗಳೂರು ಸೆ 18: ವಿಶ್ವವಿದ್ಯಾಲಯಗಳು ಸಂಶೋಧನೆಯನ್ನು ಕಡೆಗಣಿಸುತ್ತಿವುದರಿಂದ ಹೊಸ ಆವಿಷ್ಕಾರಗಳ ಉಗಮಕ್ಕೆ ತೊಡಕುಂಟಾಗಿದೆ ಎಂದು ಭಾರತೀಯ ವಿಜ್ಞಾನ ಮಂದಿರ (ಐಐಎಸ್ಸಿ)IISc ಇಸಿಇ ವಿಭಾಗದ ಡಾ.ಶ್ರೀನಿವಾಸ ತಲಬತ್ತುಲ (Dr. Srinivasa Talabattala) ಹೇಳಿದರು.

ದಿ ಆಕ್ಸ್ ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್, (The Oxford College of Engineering)  ಬೆಂಗಳೂರು ವಿಭಾಗದ ಸಹಯೋಗದೊಂದಿಗೆ ” ಕಂಪ್ಯೂಟ್ ಕಂಟ್ರೋಲ್ನೆಟ್‌ವರ್ಕ್ ಮತ್ತು ಫೋಟಾನಿಕ್ಸ್ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರುವಿಶ್ವವಿದ್ಯಾಲಯಗಳು ಪಠ್ಯಕ್ರಮದ ಬೋಧನೆಗೆ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದುಸಂಶೋಧನೆಯನ್ನು ಕಡೆಗಣಿಸಿವೆ. ಇದು ಆವಿಷ್ಕಾರಗಳ ಬೆಳವಣಿಯನ್ನು ಕುಂಠಿತಗೊಳಿಸಿದೆ. “ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಂಪ್ಯೂಟ್ಕಂಟ್ರೋಲ್ನೆಟ್‌ವರ್ಕ್ ಮತ್ತು ಫೋಟಾನಿಕ್ಸ್ ಎಂಬ ನಾಲ್ಕು ತಂತ್ರಜ್ಞಾನಗಳು ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರವನ್ನು ರೂಪಿಸುತ್ತಿವೆ. 

ಕಂಪ್ಯೂಟಿಂಗ್ — ಇದು ಡೇಟಾ ಸಂಸ್ಕರಣೆವಿಶ್ಲೇಷಣೆ ಮತ್ತು ನಿರ್ಧಾರಗಳ ತ್ವರಿತಗತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ.  ಕಂಟ್ರೋಲ್ ಸಿಸ್ಟಮ್ಸ್ — ಕಾರುಗಳುಯಂತ್ರಗಳುರೋಬೋಟ್ಸ್ ಇವುಗಳ ನಿಖರ ಕಾರ್ಯನಿರ್ವಹಣೆಗೆ ಸಹಾಯ ಮಾಡಲಿದೆ. ನೆಟ್‌ವರ್ಕ್ಸ್‌ — ಇದು ಜಗತ್ತಿನ ಎಲ್ಲೆಡೆ ಇರುವ ಜನರನ್ನುಯಂತ್ರಗಳನ್ನುಮತ್ತು ಸೇವೆಗಳನ್ನು ಒಂದೇ ಜಾಲದಲ್ಲಿ ಜೋಡಿಸುವ ಶಕ್ತಿ ರೂಪಿಸುತ್ತದೆ.  ಫೋಟಾನಿಕ್ಸ್ — ಬೆಳಕಿನ ತಂತ್ರಜ್ಞಾನ. ಇದು ಫೈಬರ್ ಆಪ್ಟಿಕ್ಸ್ ಮೂಲಕ ವೇಗದ ಇಂಟರ್ನೆಟ್ಲೇಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ಕ್ರಾಂತಿಮತ್ತು ಸಂವಹನ ಕ್ಷೇತ್ರದಲ್ಲಿ ಹೊಸ ದಿಕ್ಕುಗಳನ್ನು ತೋರಿಸುತ್ತಿದೆ ಎಂದರು.

ಈ ನಾಲ್ಕು ತಂತ್ರಜ್ಞಾನಗಳು ಒಟ್ಟಾಗಿನಾವೆಲ್ಲಾ ಕಂಡುಕೊಳ್ಳುತ್ತಿರುವ ಸ್ಮಾರ್ಟ್‘ ಭವಿಷ್ಯವನ್ನು ನಿರ್ಮಿಸುತ್ತಿವೆ — ಸ್ಮಾರ್ಟ್ ನಗರಗಳುಸ್ಮಾರ್ಟ್ ಕಾರುಗಳುಸ್ಮಾರ್ಟ್ ಆರೋಗ್ಯ ಸೇವೆಗಳು ಒದಗಿಸುತ್ತವೆ. ನಾವು ಈ ತಂತ್ರಜ್ಞಾನಗಳ ಭಾಗವಾಗಬೇಕು. ನಾವೇ ಹೊಸ ಅವಿಷ್ಕಾರಗಳನ್ನು ಮಾಡಬೇಕು. ನಾವೇ ಮುಂದಿನ ತಲೆಮಾರಿಗೆ ತಂತ್ರಜ್ಞಾನವನ್ನು ಉಡುಗೊರೆಯಾಗಿ ನೀಡಬೇಕು ಎಂದರು.

ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್  ಪ್ರಾಂಶುಪಾಲರಾದ ಡಾ. ಎಚ್.ಎನ್.ರಮೇಶ್ ಮಾತನಾಡಿನಾವು ಈ ಐಸಿಸಿಎನ್‌ಪಿ – 2025 ಅಂತರಾಷ್ಟ್ರೀಯ ಸಮ್ಮೇಳನಕ್ಕೆ ದೇಶಾದ್ಯಂತ ಅರ್ಜಿಗಳನ್ನು ಆಹ್ವಾನಿಸಲಾಗಿದ್ದುಐಐಟಿ ಸೇರಿದಂತೆ 400ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಬಂದಿದ್ದುಅಂತಿಮವಾಗಿ 70 ಪತ್ರಿಕೆಗಳನ್ನು ಆಯ್ಕೆಮಾಡಿದ್ದೇವೆ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಿನೋಪ್ಸಿಸ್ ಕಂಪನಿಯ ಹಿರಿಯ ನಿರ್ದೇಶಕ ವಿಕಾಸ್ ಗಡಿಜರ್ಮನಿಯ ಕನ್ಸ್ಟ್ರಾಕ್ಟರ್ ಯುನಿವರ್ಸಿಟಿ ಡಾ.ಫ್ರಾನ್ಸೆಸ್ಕೊ ಮೌರೆಲ್ಲಿಇತೋಪಿಯ ಬಹಿರ್ ದಾರ್ ಯುನಿವರ್ಸಿಟಿ ಡಾ. ಫೆಕಾಫು ಮಿಹ್ರೆಟ್ ಗೆರೆಮೆವ್,  ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಉಪಪ್ರಾಂಶುಪಾಲ ಡಾ. ಬಿ.ಕೆ.ಮಂಜುನಾಥಕಾಲೇಜಿನ ಸಂಯೋಜಕರು ಡಾ. ಪ್ರೀತಾ ಶರಣ್ ಇತರರು ಇದ್ದರು.

ನಮ್ಮ ಕುಟುಂಬಸ್ಥರು ಬಡವರಿಗೆ ಗುಣಮಟ್ಟ ಶಿಕ್ಷಣ ನೀಡಬೇಕು ಎಂಬ ಪರಿಕಲ್ಪನೆಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಅವರ ಹಾದಿಯಲ್ಲೇ ನಾವು ಮುಂದುವರೆಯುತ್ತಿದ್ದುಬಹುತೇಕ ಎಲ್ಲ ಕೋರ್ಸುಗಳನ್ನು ನಾವು ಪರಿಚಯಿಸಿದ್ದೇವೆ. ಒಳ್ಳೆಯ ಪ್ಲೇಸ್ ಮೆಂಟ್ ಕಲ್ಪಿಸಿಕೊಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಇಂಡಸ್ಟ್ರಿ ಎಕ್ಸ್ ಪರ್ಟ್ ಗಳ ಅನುಭವ ತಿಳಿಸಲು ಈ ರೀತಿಯ ಸೆಮಿನಾರ್ ಆಯೋಜನೆ ಮಾಡುತ್ತಲೇ ಇರುತ್ತೇವೆ.

*ಲೀಲಾ ಲಕ್ಷ್ಮೀ ರಾಜುಅಕಾಡೆಮಿಕ್ ಲೀಡ್ಆಕ್ಸ್ ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ.

ವೀ ಕೇ ನ್ಯೂಸ್
";