ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ
ಬೆಂಗಳೂರು : ರಾಜಾಜಿನಗರ 2ನೇ ಹಂತದ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಆಗಸ್ಟ್ 3, ಭಾನುವಾರ ಮಧ್ಯಾಹ್ನ 3-30ಕ್ಕೆ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರನ್ನು ‘ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣದಾಸ್ ರಸ್ತೆಯಿಂದ ಶ್ರೀಮಠದವರೆಗೆ ಚೆಂಡೆ ವಾದ್ಯದೊಂದಿಗೆ ಹತ್ತಾರು ಭಜನಾ ಮಂಡಳಿಗಳ ಸದಸ್ಯರಗಳ ಗಾನದೊಂದಿಗೆ ಆಹ್ವಾನಿಸಲಾಗುವುದು.
ಕಾರ್ಯಕ್ರಮಗಳು : ಶ್ರೀ ವಾದಿರಾಜ ಆಚಾರ್ಯರಿಂದ “ಶ್ರೀ ವ್ಯಾಸರಾಜ ವೈಭವ” ವಿಷಯವಾಗಿ ಪ್ರವಚನ. ಭಜನಾ ಮಂಡಳಿಯವರಿಂದ ನೃತ್ಯ-ಗಾಯನ ನಂತರ ಶ್ರೀ ಗೋಪಿಕೃಷ್ಣನೊಂದಿಗೆ ಶ್ರೀಗಳಿಗೆ ನಾಣ್ಯ ಮತ್ತು ಧಾನ್ಯಗಳಿಂದ ತುಲಾಭಾರ, ಪುಷ್ಪವೃಷ್ಟಿ, ಶ್ರೀಪಾದಂಗಳವರಿಂದ ದರ್ಬಾರ್ ಹಾಗೂ ಆಶೀರ್ವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ಈ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾದಿಗಳ ಹಾಗೂ ಮಠದ ಸಿಬ್ಬಂದಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸೋಸಲೆ ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.