ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕೀ ಅಂಬಿಕಾ ಸಿ ರವರು “ವಿಶ್ವ ಹುಲಿ ದಿನಾಚರಣೆ” ಅಂಗವಾಗಿ ಫೌಂಡೇಶನ್ ಸಂಸ್ಥೆ ವತಿಯಿಂದ “ನಶಿಸುತ್ತಿರುವ ಹುಲಿ ಸಂತತಿ ಮತ್ತು ಪ್ರಕೃತಿ ಸಂರಕ್ಷಣೆ” ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ವನ್ಯಜೀವಿ ಛಾಯಾಗ್ರಹಕ ಶಿವಕುಮಾರ್ ನಟರಾಜ್ ರವರು ಸೆರೆ ಹಿಡಿಯಲ್ಪಟ್ಟ ಛಾಯಾ ಚಿತ್ರ ಹಾಗೂ ಕೆ. ಮಲ್ಯಾದ್ರಿ, ಪಿಬಿ ಮನು, ನಿಧಿ ಸಂದೇಶ್, ಸಂಧ್ಯಾ ಕುಮಾರ್, ಚಾದುರ್ಯಾ ಮತ್ತು ನಕ್ಷತ್ರ ರವರುಗಳ ವನ್ಯಜೀವಿ ಚಿತ್ರಕಲೆಗಳ ಪ್ರದರ್ಶನ ಕಾರ್ಯಕ್ರಮವನ್ನ ಬೆಂಗಳೂರಿನ ನಯನ ಕನ್ನಡ ಭವನದ ಮೂರನೇ ಮಹಡಿಯಲ್ಲಿರುವ ವರ್ಣ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 28 ಮತ್ತು 29 ಜುಲೈ 2025 ರಂದು ಬೆಳಿಗ್ಗೆ 10 ರಿಂದ ಸಂಜೆ 5:00 ವರೆಗೆ ಪ್ರದರ್ಶನಗೊಳ್ಳುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾದಂತಹ ಪಿ ಸಂಪತ್ ಕುಮಾರ್ ಅವರು, ಅಂತರಾಷ್ಟ್ರೀಯ ಚಿತ್ರಕಾರ ಶ್ರೀನಾಥ್ ಕಾಳೆ, ವಿವಿಧ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಹುಲಿ ವೇಷ ದಾರಿಗಳಾದ ಮಕ್ಕಳು ಉಪಸ್ಥಿತರಿದ್ದು, ಹುಲಿ ಚಿತ್ರಗಳನ್ನು ಸಂಭ್ರಮದಿಂದ ವೀಕ್ಷಿಸಿ, ಅಂತರಾಷ್ಟ್ರೀಯ ಹುಲಿ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
VK NEWS DIGITAL : HEADLINES 28-7-2025