Live Stream

[ytplayer id=’22727′]

| Latest Version 8.0.1 |

Hassan

ಪೇಟೆ ಮಾಚಗೌಡನಹಳ್ಳಿಯ ರಂಗಭೂಮಿ ನಟ ರವಿಕುಮಾರ್ ಎಂ.ಜಿ

ಪೇಟೆ ಮಾಚಗೌಡನಹಳ್ಳಿಯ ರಂಗಭೂಮಿ ನಟ ರವಿಕುಮಾರ್ ಎಂ.ಜಿ

ಗೊರೂರು ಅನಂತರಾಜು, ಹಾಸನ. ಕಾಲಮಾನದ ಸುಳಿಯಲ್ಲಿ ನಶಿಸಿ ಹೋಗುತ್ತಿರುವ ರಂಗ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಹಾಸನ ಜಿಲ್ಲೆ  (Hassan District) ಅರಕಲಗೂಡು (Arakalagudu) ತಾಲ್ಲೂಕಿನ ಪೇಟೆಮಾಚಗೌಡನಹಳ್ಳಿಯ ಶ್ರೀ ರವಿಕುಮಾರ್ ರಂಗ (Ravikumar Ranga) ಸಂಘಟಕರು ಕಲಾವಿದರಾಗಿ ಗಮನ ಸೆಳೆಯುತ್ತಾರೆ. ಕಳೆದ 22 ವರ್ಷಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿರುವ ಇವರು ಅರಕಲಗೂಡು ಶ್ರೀ ದೊಡ್ಡಮ್ಮದೇವಿ ಕಲಾಸಂಘದ ಮಾ. ಉಪಾದ್ಯಕ್ಷ ರಾಗಿರುತ್ತಾರೆ. ಶ್ರೀಯುತರು ರಂಗಮ್ಮ ಲೇಟ್ ಗೋವಿಂದೇಗೌಡ ದಂಪತಿಗಳ ಮಗನಾಗಿ ಜನಿಸಿ ಬಾಲ್ಯದಲ್ಲಿಯೇ ರಂಗಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಮಾಯಣ, ಮಹಾಭಾರತಕ್ಕೆ ಸಂಬ0ಧಿಸಿದ ನಾಟಕಗಳಲ್ಲಿ ಹಲವಾರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇವರು ಸಮರ್ಥ ಸಂಘಟಕರಾಗಿ ದೊಡ್ಡಮ್ಮದೇವಿ ಕಲಾಸಂಘವನ್ನು ;ಸ್ಥಾಪಿಸಿ ಜಿಲ್ಲೆ ರಾಜ್ಯಮಟ್ಟದ ಪೌರಾಣಿಕ ನಾಟಕೋತ್ಸವಗಳನ್ನು ನಡೆಸಿರುತ್ತಾರೆ. ಜೀವನ ನಿರ್ವಹಣೆಗಾಗಿ ಬೇಕರಿ ನಡೆಸುವ ಸದಾ ಕ್ರಿಯಾಶೀಲ ವ್ಯಕ್ತಿಯಾಗಿ ಇವರ ಸಾಧನೆಯ ಹಿಂದೆ ತಾಯಿ ರಂಗಮ್ಮ, ಪತ್ನಿ ಲತಾ ಮತ್ತು ಪುತ್ರ ರಾಕೇಶ್ ಮತ್ತು ಸ್ನೇಹಿತರ ಉತ್ತೇಜನ ಬಹಳಷ್ಟಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರು ಸತ್ಯವ್ರತ ಶನಿಮಹಾತ್ಮೆ ನಾಟಕದಲ್ಲಿ ಚಂದ್ರಹಾಸ, ಶನಿದೇವರು, ರಾಜವಿಕ್ರಮ ನಾಟಕದಲ್ಲಿ ವಿಕ್ರಮ, ಕುರುಕ್ಷೇತ್ರದಲ್ಲಿ ವಿಧುರ, ಕೃಷ್ಣ, ಅಭಿಮನ್ಯು, ಸತ್ಯ ಹರಿಶ್ಚಂದ್ರ ನಾಟಕದಲ್ಲಿ ಹರಿಶ್ಚಂದ್ರ, ಸೀತಾ ಸ್ವಯಂವರದಲ್ಲಿ ಲಕ್ಷö್ಮಣ, ನಳದಮಯಂತಿಯಲ್ಲಿ ದಮಯಂತಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ದಾನ ಶೂರ ಕರ್ಣ ನಾಟಕದಲ್ಲಿ ನಟಿಸಿದ್ದಾರೆ. ರವಿಕುಮಾರ್ ಎಂ.ಜಿ. ಉರುಫ್ ಬೇಕರಿ ರಾಜೇಗೌಡರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ರಂಗಭೂಮಿ ಯಲ್ಲಿ ನೀಡಿದ ಸೇವೆಯ ಹಿನ್ನಲೆಯಲ್ಲಿ ಬಾಬಾಸಾಹೇಆಬ್ ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಷಿಪ್ ಅವಾರ್ಡ್ 2023ರಲ್ಲಿ ಲಭಿಸಿದೆ.

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ 27-3-2010ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ವೀರಭದ್ರೇಶ್ವರಸ್ವಾಮಿ ಕಲಾ ಸಂಘ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಮ್ಮೆಯ ಕಲಾವಿದ ಪ್ರಶಸ್ತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅರಕಲಗೊಡು ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅರಕಲಗೊಡು ತಾಲ್ಲೂಕು ಕದಂಬ ಸೈನ್ಯೆ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,3ನೇ ಕ್ರಾಸ್. ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ವೀ ಕೇ ನ್ಯೂಸ್
";