ದೆಹಲಿ : ದೇಶದ ರಾಜಧಾನಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯ ಪ್ರದೇಶದಲ್ಲಿ ಶುಕ್ರವಾರ ಸಂಜೆ 7:49ಕ್ಕೆ ಭೂಕಂಪನವಾಗಿದೆ. ಕಳೆದ ಎರಡು ದಿನಗಳಲ್ಲಿ ಇದು ಎರಡನೇ ಬಾರಿಗೆ ದೆಹಲಿಯಲ್ಲಿ ಭೂಮಿ ಕಂಪಿಸಿದ ಘಟನೆಯಾಗಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 3.7 ರಷ್ಟು ದಾಖಲಾಗಿದ್ದು, ಇದರ ಕೇಂದ್ರಬಿAದು ಹರಿಯಾಣದ ಝಜ್ಜಾರ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ ತಿಳಿಸಿದೆ.
ಗುರುವಾರ (ಜುಲೈ 10, 2025) ಬೆಳಗ್ಗೆ 9:04ಕ್ಕೆ ದೆಹಲಿ ಮತ್ತು ಓಅಖ ಪ್ರದೇಶದಲ್ಲಿ 4.4 ತೀವ್ರತೆಯ ಭೂಕಂಪವಾಗಿತ್ತು. ಈ ಭೂಕಂಪದ ಕೇಂದ್ರಬಿAದುವೂ ಝಜ್ಜಾರ್‌ನ 3 ಕಿಲೋಮೀಟರ್ ಈಶಾನ್ಯದಲ್ಲಿ, 10 ಕಿಲೋಮೀಟರ್ ಆಳದಲ್ಲಿತ್ತು. ಈ ಎರಡೂ ಭೂಕಂಪಗಳು ಕಡಿಮೆ ತೀವ್ರತೆಯವು ಆಗಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಬಂದಿಲ್ಲ. ಆದರೆ, ಸತತ ಎರಡು ಬಾರಿ ಭೂಕಂಪ 48 ಗಂಟೆಗಳಲ್ಲಿ ಸಂಭವಿಸಿರುವುದು ದೆಹಲಿಯ ಜನರಲ್ಲಿ ಆತಂಕ ಮೂಡಿಸಿದೆ.
ಭೂಕಂಪನದ ಸಂದರ್ಭದಲ್ಲಿ ಕಟ್ಟಡಗಳು ಮತ್ತು ಮನೆಗಳಲ್ಲಿ ವಸ್ತುಗಳು ಅಲುಗಾಡಿದ ಅನುಭವವಾಗಿದೆ ಎಂದು ಸಾರ್ವಜನಿಕರು ತಮ್ಮ ಅನುಭವವನ್ನು ಹಂಚಿಕೊ0ಡಿದ್ದಾರೆ. ಕೆಲ ವಸ್ತುಗಳು ಕೆಳಗೆ ಬಿದ್ದಂತಹ ಘಟನೆಗಳೂ ದಾಖಲಾಗಿವೆ. ಭೂಕಂಪನ ಗೊಂಡ ತಕ್ಷಣವೇ ಮನೆಗಳು ಮತ್ತು ಕಚೇರಿಗಳಿಂದ ಜನರು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ಜನರು ತಮ್ಮ ಅನುಭವಗಳನ್ನು ಹಂಚಿಕೊ0ಡಿದ್ದಾರೆ.
ಭೂಕಂಪನ ಕಣ್ಣಾರೆ ಅನುಭವಿಸಿದೆ
ಕೆಲವರು ಭೂಕಂಪದ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಇನ್ನೂ ಕೆಲವರು ಈ ಘಟನೆಯನ್ನು ಟ್ರೋಲ್ ಮಾಡಿದ್ದಾರೆ. “ನಾನು ಭೂಕಂಪನ ಕಣ್ಣಾರೆ ಅನುಭವಿಸಿದೆ, ಆದರೆ ಇದು ನೈಸರ್ಗಿಕ ವಿಪತ್ತು, ಇದಕ್ಕೆ ನಾವು ಕೇವಲ ಮುನ್ನೆಚ್ಚರಿಕೆ ವಹಿಸಬಹುದು,” ಎಂದು ದೆಹಲಿಯ ಸ್ಥಳೀಯ ನಿವಾಸಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊ0ಡಿದ್ದಾರೆ.
ಭೂಕAಪಕ್ಕೆ ಒಳಗಾಗುವ ಅತ್ಯಂತ ಗಂಭೀರ ಪ್ರದೇಶಗಳಲ್ಲಿ ದೆಹಲಿಯು ಒಂದಾಗಿದೆ. ಈ ಪ್ರದೇಶದಲ್ಲಿ 5-6 ತೀವ್ರತೆಯ ಭೂಕಂಪಗಳು ಸಾಮಾನ್ಯವಾಗಿ ಸಂಭವಿಸುತ್ತವೆ, ಕೆಲವೊಮ್ಮೆ 6-7 ತೀವ್ರತೆಯ ಭೂಕಂಪಗಳು ಮತ್ತು ಅಪರೂಪಕ್ಕೆ 7-8 ತೀವ್ರತೆಯ ಭೂಕಂಪಗಳು ಸಂಭವಿಸಿರುವುದೂ ಉಂಟು. ಇಂತಹ ಹಲವು ಸರಣಿ ಭೂಕಂಪ ಸಂಭವಿಸುತ್ತಿರುವುದರಿ0ದ ದೆಹಲಿಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ, ಈ ಎರಡು ಭೂಕಂಪಗಳು ಕಡಿಮೆ ತೀವ್ರತೆ ಉಂಟಾಗಿದ್ದರಿ0ದ ಯಾವುದೇ ಗಂಭೀರ ಹಾನಿಯಾಗಿಲ್ಲ. ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರವು ಈ ಘಟನೆಯನ್ನು ನಿಕಟವಾಗಿ ಗಮನಿಸುತ್ತಿದ್ದು, ಜನರಿಗೆ ಶಾಂತವಾಗಿರಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ದೆಹಲಿಯಂತಹ ಭೂಕಂಪ-ಪೀಡಿತ ಪ್ರದೇಶದಲ್ಲಿ ವಾಸಿಸುವವರು ಭೂಕಂಪ ನಿರೋಧಕ ಕಟ್ಟಡಗಳನ್ನು ನಿರ್ಮಿಸುವುದು ಮತ್ತು ತುರ್ತು ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
VK NEWS DIGITAL : HEADLINES :