ಭಾರತೀಯ ಪ್ರಾಣಿ ಸಂಸ್ಥಾನದ (ZSI) ವಿಜ್ಞಾನಿಗಳಿಂದ ಪಶ್ಚಿಮ ಘಟ್ಟಗಳ ಕಾಡಿನಿಂದ ಜೀವಂತ ಪಳೆಯುಳಿಕೆ (Living Fossil) ಖ್ಯಾತಿಯ ಮುಳ್ಳು ಬಾಲದ ಮರ ಇಲಿ (Platacanthomys lasiurus) ಪತ್ತೆ
ಭಾರತೀಯ ಪ್ರಾಣಿ ಸಂಸ್ಥಾನದ (ZSI) ವಿಜ್ಞಾನಿಗಳು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಜೀವಂತ ಪಳೆಯುಳಿಕೆ (Living Fossil) ಖ್ಯಾತಿಯ ಮಲಬಾರ್ ಮುಳ್ಳು ಬಾಲದ ಮರ ಇಲಿಯ (Platacanthomys lasiurus) ವೈಜ್ಞಾನಿಕ ವಿಕಸನದ ಇತಿಹಾಸವನ್ನು (Evolutionary History) ವಿವರಿಸುವ ಸಲುವಾಗಿ ಇದೇ ಪ್ರಪ್ರಥಮ ಬಾರಿಗೆ ಜೈವಿಕ ತಂತ್ರಜ್ಞಾನದ ಸಹಯೋಗದಿಂದ DNA ಬಾರ್ಕೋಡ್ ಗಳನ್ನೂ (Barcode) ರಚಿಸಲಾಗಿದೆ.
ಈ ಅಧ್ಯಯನವು ಪ್ರಾಣಿಯ ಉನ್ನತ ಮಟ್ಟದ ವರ್ಗಿಕರಣ ಶಸ್ತ್ರದ (Taxonomy) ಸ್ಪಷ್ಟತೆ ಒದಗಿಸುವಲ್ಲಿ ಸಹಾಯ ಮಾಡಿದೆ. ಇದು ಭಾರತೀಯ ಜೀವಶಾಸ್ತ್ರೀಯ ಸಮೀಕ್ಷೆಯ ವಿವಿಧ ಪ್ರಾದೇಶಿಕ ಕೇಂದ್ರಗಳ ವಿಜ್ಞಾನಿಗಳ ಸಹಯೋಗದ ಪ್ರಯತ್ನವಾಗಿದೆ. ಈ ಮಹತ್ವದ ಆವಿಷ್ಕಾರವನ್ನು ZSI, ಪಶ್ಚಿಮ ಪ್ರಾದೇಶಿಕ ಕೇಂದ್ರ (ಪುಣೆ) ನ ಡಾ. ಎಸ್. ಎಸ್. ತಾಳ್ಮಲೆ, ಡಾ. ಕೆ.ಪಿ. ದಿನೇಶ್ ಮತ್ತು ಶ್ರೀಮತಿ ಎ. ಶಬ್ನಂ; ZSI ಪಶ್ಚಿಮ ಘಟ್ಟ ಪ್ರಾದೇಶಿಕ ಕೇಂದ್ರ (ಕೋಝಿಕೋಡ್) ನ ಡಾ. ಜಾಫರ್ ಪಲೋಟ್ ಮತ್ತು ZSI ದಕ್ಷಿಣ ಪ್ರಾದೇಶಿಕ ಕೇಂದ್ರ (ಚೆನ್ನೈ) ನ ಡಾ. ಕೆ. ಎ. ಸುಬ್ರಹ್ಮಣಿಯನ್ ಅವರು ಸಂಯುಕ್ತವಾಗಿ ಕೈಗೊಂಡಿದ್ದಾರೆ.
ಈ ಸಂಶೋಧನೆಗಳು ಅಂತರರಾಷ್ಟ್ರೀಯ ಖ್ಯಾತಿಯ ಸಮೀಕ್ಷಿತ ಪೀರ್-ರಿವ್ಯೂ ಜರ್ನಲ್ “Journal of Animal Diversity” (ಲೊರೆಸ್ತಾನ್ ವಿಶ್ವವಿದ್ಯಾಲಯ, ಇರಾನ್) ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ವೈಜ್ಞಾನಿಕವಾಗಿ ಪ್ಲಾಟಾಕ್ಯಾಂಥಮಿಸ್ ಲಾಸಿಯೂರಸ್ (Platacanthomys lasiurus) ಎಂದು ಕರೆಯಲಾಗುವ ಮಲಬಾರ್ ಮುಳ್ಳು ಬಾಲದ ಮರ ಇಲಿ ಮೊದಲ ಬಾರಿ 1859ರಲ್ಲಿ ವಿವರಿಸಲ್ಪಟ್ಟಿದ್ದರೂ, ಪ್ರಜಾತಿಯ ಉದ್ಭವ ಮತ್ತು ವೈಜ್ಞಾನಿಕ ವಿಕಸನದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ DNA ಬಾರ್ಕೋಡ್ ಗಳನ್ನೂ ಸೃಜಿಸಲು ಸುಮಾರು 166 ವರ್ಷಗಳ ಕಾಲ ಕಾಯಬೇಕಾಯಿತು ಎಂದು ಡಾ. ದಿನೇಶ್ ತಿಳಿಸಿದ್ದಾರೆ.
ವಿಕಸನದ ಇತಿಹಾಸ (Evolutionary History) ಹಾಗು ಆಣ್ವಿಕ ತಂತ್ರಜ್ಞಾನದ, (Molecular Dating) ಅಧ್ಯಯನಗಳ ಪ್ರಕಾರ, ಪ್ರಸ್ತುತ ಮಲಬಾರ್ ಮುಳ್ಳು ಬಾಲದ ಮರ ಇಲಿಯ (Platacanthomys) ಯ ಪೂರ್ವಜರು ಇಓಸಿನ್ (Eocene) ಯುಗದಲ್ಲಿ (ಕ್ರಿಸ್ತಪೂರ್ವ 56 ರಿಂದ 33.9 ಮಿಲಿಯನ್ ವರ್ಷಗಳ ಹಿಂದೆ) ವಿಕಾಸನಗೊಂಡಿರಬಹುದು ಎಂದು ಸೂಚಿಸುತ್ತದೆ. ಪ್ಲಾಟಾಕ್ಯಾಂಥಮಿಸ್ ಎಂಬ ಪ್ರಜಾತಿ ಗೊಂಡ್ವಾನಾ ಖಂಡದ ಉಳಿದಿರುವ ಜೀವಂತ ಅವಶೇಷವಾಗಿದ್ದು (Living Fossil), ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಬಾಹ್ಯ ರೂಪವಿಜ್ಞಾನ (external morphological changes) ಬದಲಾವಣೆಯಿಲ್ಲದೆ ಉಳಿದಿರುವ ಸಾಧ್ಯತೆ ಇದೆ.
ಇದೆ ರೀತಿಯ ರೂಪ ಹೊಂದಿರುವ ಚೀನಾದ ಪುಟ್ಟ ಮುಳ್ಳು ಡಾರ್ಮೌಸ್ ಇಲಿ (Typhlomys) ಚೀನಾ ಮತ್ತು ವಿಯೆಟ್ನಾಮ್‌ನಲ್ಲಿರುವ ಹಲವು ಪ್ರದೇಶಗಳಿಂದ ಕಂಡು ಬರುತದೆ. ಚೀನಾದ ಪುಟ್ಟ ಡಾರ್ಮೌಸ್ ಇಲಿಯ ಪೂರ್ವಜರು ಮೈಒಸಿನ್ (Miocene) ಯುಗದಲ್ಲಿ (ಕ್ರಿ.ಪೂ. 23 ರಿಂದ 5.3 ಮಿಲಿಯನ್ ವರ್ಷಗಳ ಹಿಂದೆ) ವಿಕಸನಗೊಂಡಿವೆ. ಮಲಬಾರ್ ಮುಳ್ಳು ಬಾಲದ ಮರ ಇಲಿಯ ಅವಶೇಷ ಪ್ರಭೇದಗಳೆಂಬ ಮಾಹಿತಿಯು ಸಾರ್ವಜನಿಕರಲ್ಲಿ ಹೆಚ್ಚಿನ ಸಂರಕ್ಷಣಾ ಮೌಲ್ಯವನ್ನು ಸೇರಿಸಲಿದೆ. ಮುಂದಿನ ದಿನಗಳ್ಲಲಿ ಮಯೋಸೀನ್ (Miocene) ಮೂಲದ ಬಗ್ಗೆ ಆಣ್ವಿಕ ಡೇಟಿಂಗ್ (Molecular Dating) ಮಾಹಿತಿಯು ವಿದ್ಯಾರ್ಥಿಗಳು ಮತ್ತು ಸಂಶೋಧಕರಲ್ಲಿ ಹೆಚ್ಚಿನ ಸಂಶೋಧನಾ ಪ್ರಶ್ನೆಯನ್ನು ಹುಟ್ಟುಹಾಕಲಿದೆ ಎಂದು ಪ್ರಸ್ತುತ ಅಧ್ಯಯನ ತಂಡ ಹೇಳುತ್ತದೆ.
ಪ್ರಸ್ತುತ ಪ್ಲಾಟಾಕ್ಯಾಂಥಮಿಸ್ ವಂಶವೃಕ್ಷ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿರುವ ಆಶ್ರಯ ಸ್ಥಳಗಳಲ್ಲಿ ಉಳಿದಿರುವ ಒಂದು ಪುರಾತನ ಅವಶೇಷವಾಗಿರಬಹುದು (Evolutionarily Important Lineage), ಇದರ ಪೂರ್ವಜರು ಭೂಗರ್ಭದ ಇತಿಹಾಸದಲ್ಲಿ ಸಂಭವಿಸಿದ ಹಲವಾರು ಭೂಗತಘಟನೆಗಳಿಂದ ಅಳಿದುಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ವಂಶವೃಕ್ಷದ ಪ್ರಕಾರ ಪ್ಲಾಟಾಕ್ಯಾಂಥಮಿಸ್ (Platacanthomys) ಮತ್ತು ಟೈಫ್ಲೋಮಿಸ್ (Typhlomys) ಎಂಬ ಈ ಎರಡು ತಳಿಗಳು (genera) ಏಕವಂಶೀಯ (monophyletic) ಅಲ್ಲವೆಂಬುದರಿಂದ, ಅವುಗಳನ್ನು ವಿಭಿನ್ನ ಕುಟುಂಬಗಳಾಗಿ ವರ್ಗೀಕರಿಸುವುದು ಶಾಸ್ತ್ರೀಯವಾಗಿ ಸೂಕ್ತವೆಂದು ಈ ಅಧ್ಯಯನದಲ್ಲಿ ಸೂಚಿಸಲಾಗಿದೆ.
ಪಶ್ಚಿಮ ಘಟ್ಟಗಳ ಸಣ್ಣ ಸಸ್ತನಿಗಳ ಸಮೀಕ್ಷೆಯ ವೇಳೆಯಲ್ಲಿ ಸಮೀಕ್ಷಾ ತಂಡವು ಕೇರಳದ ಸುರ್ಯಮುಡಿಯಲ್ಲಿ ಮಲಬಾರ್ ಮುಳ್ಳು ಬಾಲದ ಮರ ಇಲಿಯನ್ನು ಕಂಡು ಹಿಡಿದಿದೆ. ಅನಂತರದ ಅಣುವಿಜ್ಞಾನ ಅಧ್ಯಯನಗಳ (DNA Barcode Technology) ನಂತರ, ಮಾದರಿ ಸಂಗ್ರಹವನ್ನು ಮುಂದಿನ ಅಧ್ಯಯನಗಳಿಗಾಗಿ ಭಾರತೀಯ ಪ್ರಾಣಿ ಸಂಸ್ಥಾನದ (ZSI) ಪಶ್ಚಿಮ ಪ್ರಾದೇಶಿಕ ಕೇಂದ್ರ (WRC), ಪುಣೆದಲ್ಲಿನ ರಾಷ್ಟ್ರೀಯ ಜೀವಶಾಸ್ತ್ರೀಯ ಸಂಗ್ರಹಾಲಯ ದಲ್ಲಿ (National Zoological Collections) ಸಂಗ್ರಹಿಸಿಡಲಾಗಿದೆ.
“ಕ್ಷಿಪ್ರ ಹವಾಮಾನ ಬದಲಾವಣೆಯ ಮಧ್ಯೆ ಪ್ಲಾಟಕಾಂಥೋಮಿಸ್‌ನಂತಹ ಐತಿಹಾಸಿಕವಾಗಿ ವಿವರಿಸಲಾದ ನಿಗೂಢ ಪ್ರಭೇದಗಳ ಕುರಿತು ಹೊಸ ವೈಜ್ಞಾನಿಕ ಸಂಶೋಧನೆ ಅತ್ಯಗತ್ಯ. ಸಂರಕ್ಷಣಾ ತಂತ್ರಗಳನ್ನು ತಿಳಿಸಲು ಮತ್ತು ಪ್ರಭೇದಗಳ ದೀರ್ಘಕಾಲೀನ ಉಳಿವನ್ನು ಖಚಿತಪಡಿಸಿಕೊಳ್ಳಲು ಸಮಗ್ರ ವಿಧಾನಗಳು ಪ್ರಮುಖವಾಗಿವೆ” ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆಯ ನಿರ್ದೇಶಕಿ ಡಾ. ಧೃತಿ ಬ್ಯಾನರ್ಜಿ (Dr. Dhriti Banerjee) ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಮಲಬಾರ್ ಮುಳ್ಳು ಬಾಲದ ಮರ ಇಲಿಗೆ ಆವಾಸಸ್ಥಾನದ ಅವನತಿಯೇ (Habitat Fragmentation) ಪ್ರಮುಖ ಬೆದರಿಕೆ ಎಂದು ಸಂಶೋಧನಾ ತಂಡದ ನಾಯಕ ಲೇಖಕ ಡಾ. ಎಸ್. ಎಸ್. ತಲ್ಮಲೆ (Dr. S.S. Talmale) ಹೇಳಿದ್ದಾರೆ. ಈ ಪ್ರಭೇದವು 50 ಮೀಟರ್ ನಿಂದ 2270 ಮೀಟರ್ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಕಂಡುಬರುತಿದ್ದು, ಐಯುಸಿಎನ್ ಕೆಂಪು ಪಟ್ಟಿಯಲ್ಲಿ (IUCN Redlist for Threantened List) ದುರ್ಬಲ (Vulnerable) ಎಂದು ಪಟ್ಟಿ ಮಾಡಲಾಗಿದೆ. ಇದನ್ನು ಭಾರತಿಯ ವನ್ಯಜೀವಿ (ರಕ್ಷಣೆ) ತಿದ್ದುಪಡಿ ಕಾಯ್ದೆ, 2022 ರ ಪಟ್ಟಿಯಲ್ಲಿ ಷೆಡ್ಯೂಲ್ II (Schedule II) ರ ಅಡಿಯಲ್ಲಿ ಸಂರಕ್ಷಿಸಲಾಗಿದೆ, ಇದು ಉದ್ದೇಶಿತ ಆವಾಸಸ್ಥಾನ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳುತ್ತದೆ.
“ಈ ಅಧ್ಯಯನವು ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿ ಪ್ರಾಣಿಗಳ ಪ್ರಾಚೀನ ವಂಶಾವಳಿಗಳ (Evolutionary Lineages) ಅಸ್ತಿತ್ವವನ್ನು ಬಹಿರಂಗಪಡಿಸುತ್ತದೆ, ಗೊಂಡ್ವಾನ ಸೂಪರ್ ಖಂಡದ (Gondwana Super Continent) ವಿಘಟನೆಯ ಸಮಯದಲ್ಲಿ ಉಷ್ಣವಲಯದ ನಿರಾಶ್ರಿತ ಜೀವಿಯಾಗಿ (Relict Refuge Species) ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ” ಎಂದು ಅಧ್ಯಯನಗಳ ಸಹ-ಲೇಖಕ ಡಾ. ಕೆ.ಎ. ಸುಬ್ರಮಣಿಯನ್ (Dr. K.A. Subramaniyan) ಹೇಳುತ್ತಾರೆ.
ಮಲಬಾರ್ ಮುಳ್ಳು ಬಾಲದ ಮರ ಇಲಿ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿ (Endemic species) ಕಂಡುಬರುವ ಅಪರೂಪದ ಇಲಿ ಎಂದು ಸಹ-ಲೇಖಕರಾದ ಡಾ. ಎಂ.ಜೆ. ಪಲೋಟ್ (Dr. Md. Jafer Palot) ತಿಳಿಸಿದ್ದಾರೆ.
“ಡಿಎನ್‌ಎ ಬಾರ್‌ಕೋಡಿಂಗ್ (DNA Barcoding) ಮತ್ತು ಫೈಲೋಜೆನೆಟಿಕ್ಸ್‌ನಂತಹ (Phylogenetics) ಆಣ್ವಿಕ ಸಾಧನಗಳು (Molecular Tools) ಮಲಬಾರ್ ಮುಳ್ಳು ಬಾಲದ ಮರ ಇಲಿಯ ವಿಕಸನದ ಇತಿಹಾಸವನ್ನು (Evolutinary History) ಬಹಿರಂಗಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತದೆ ಎಂದು ಡಾ. ಕೆ. ಪಿ. ದಿನೇಶ್ ಒತ್ತಿ ಹೇಳಿದರು.
ಡಾ. ಕೆ.ಪಿ. ದಿನೇಶ್ ಅವರು ಕರ್ನಾಟಕದ ಚಿಕ್ಕಮಗಳೂರಿನ ಕಬ್ಬಿನಹಳ್ಳಿಯ ಕಾಫಿ ಬೆಳೆಯುವ ಸಮುದಾಯಗಳಿಂದ ಬಂದವರಾಗಿದ್ದು, ಡಿಎನ್‌ಎ ಬಾರ್‌ಕೋಡಿಂಗ್ (DNA Barcoding), ಮಾಲಿಕ್ಯುಲರ್ ಫೈಲೋಜೆನೆಟಿಕ್ಸ್ (Molecular Phylogenetics) ಮತ್ತು ಡಿಎನ್‌ಎ ಮೆಟಾಬಾರ್‌ಕೋಡಿಂಗ್ (DNA Metabarcoding) ನಂತಹ ಅಣುಕೋಶ ಸಾಧನಗಳ (Molecular Biotechnology) ಮೇಲೆ ವ್ಯಾಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
Original publication is available at:
https://jad.lu.ac.ir/article_725040.html
High-resolution image of Platacanthomys lasiurus and the published article are attached.
For media inquiries, please contact the co-authors at the email address or Phone Numbers.
Dr. S. S. Talmale, E-mail: [email protected]; 9284653321
Dr. K.A. Subramanian, [email protected]; 9088039540
Dr. M.J. Palot, [email protected]; 9447470439
Dr. K.P. Dinesh, E-mail: [email protected]; 9916970365
VK NEWS DIGITAL :