BENGALURU : ಕನ್ನಡ ಚಿತ್ರರಂಗ ಬಹು ಜನಪ್ರಿಯ ನಟರಾಗಿದ್ದ ದಿ.ಕೆ ಎಸ್ ಅಶ್ವತ್ಥ್ ಅವರು ಯಾರಿಗೆ ತಾನೇ ತಿಳಿದಿಲ್ಲ. ಅವರ ಧರ್ಮ ಪತ್ನಿ ಶ್ರೀಮತಿ ಶಾರದಮ್ಮನವರು ಮಾತ್ರ ಬಂಧು ಬಳಗದವರಿಗೆ ಮಾತ್ರ ಪರಿಚಯವಿತ್ತು. 96 ವರ್ಷಗಳಾಗಿದ್ದ ಶ್ರೀಮತಿ.ಶಾರದಮ್ಮನವರು ಇಂದು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸುತ್ತೇನೆ.
ಒಂದು ಹಳೆಯ ಫೋಟೋ ಕೆ ಎಸ್ ಅಶ್ವತ್ಥ್ ಅವರ ಕುಟುಂಬದ್ದು ಹಂಚಿಕೊಂಡಿದ್ದೇನೆ. ಮೈಸೂರಿನ ಶಿವರಾಂಪೇಟೆಯ ದಿನಗಳು. ಶ್ರೀ.ಕೆ ಎಸ್ ಅಶ್ವತ್ಥ್ ಅವರು ಒಂದು ಟಾಂಗಾದಲ್ಲಿ ಬಹುತೇಕ ಒಂದು ಆನಂದ ಬಣ್ಣದ ಜುಬ್ಬಾ ಹಾಕಿಕೊಂಡು ಬಂದಿಳಿದರೆ ನಮಗೆಲ್ಲಾ ಸಂಭ್ರಮ. ಯಾವುದಾದರೂ ಕುಟುಂಬದ ಕಾರ್ಯಕ್ರಮಗಳು ನಡೆದಾಗ ಶ್ರೀಮತಿ.ಶಾರದಮ್ಮನವರು ಬಂದಾಗ ನನ್ನ ಅಮ್ಮನನ್ನು ಗುರುತಿಸಿ ಏನೇ ಪುಟ್ಟಿ ಹೇಗಿದ್ಯಾ ಅಂತ ಮಾತನಾಡಿಸುತ್ತಿದ್ದರು. ನಾವು ಶ್ರೀಮತಿ ಮತ್ತು ಶ್ರೀ.ಕೆ ಎಸ್ ಅಶ್ವತ್ಥ್ ದಂಪತಿಗಳ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಿದ್ದೆವು.
ಶ್ರೀ.ಕೆ ಎಸ್ ಅಶ್ವತ್ಥ್ ಅವರ ಕುಟುಂಬ ಸರಸ್ವತಿಪುರಂ ಬಡಾವಣೆಯ ಕಲಾಶ್ರೀ ಮನೆಗೆ ಬಂದ ನಂತರ ಅವರ ವಾಕಿಂಗ್, ಕೆಲವೊಮ್ಮೆ ಒಂದು ನಾಯಿಯ ಜೊತೆ ವಾಕಿಂಗ್, ಅವರ ವಾಕಿಂಗ್ ಸ್ಟಿಕ್ ಎಲ್ಲವನ್ನೂ ನೋಡಿದ ಮೈಸೂರಿನ ಜನರು ಅನೇಕ. ನಮ್ಮ ಸ್ಮಾರ್ತ ಉಲುಚುಕಮ್ಮೆ ಸಮುದಾಯ ಹೆಮ್ಮೆ ಇವರ ಕುಟುಂಬ. ಗತಕಾಲದ
ಮೈಸೂರಿನ ದಿನಗಳು ನಿಜಕ್ಕೂ ಗ್ರೇಟ್. ಹಿರಿಯರ ಕಣ್ಮರೆ ನಿಜಕ್ಕೂ ದುಃಖದ ಸಂಗತಿ. ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ.





















