Live Stream

[ytplayer id=’22727′]

| Latest Version 8.0.1 |

Dharwad

ಶ್ರೇಷ್ಠ ಕಲಾವಿದ ಅನಂತ ನಾಗ್ : ಸಚಿವ ಜೋಶಿ

ಶ್ರೇಷ್ಠ ಕಲಾವಿದ ಅನಂತ ನಾಗ್ : ಸಚಿವ ಜೋಶಿ

ಬೆಂಗಳೂರು 22, ಇಂದು ಬೆಂಗಳೂರಿನಲ್ಲಿ ಕನ್ನಡದ ಪ್ರಸಿದ್ಧ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರೊಂದಿಗೆ ‘ಒಂದು ಕಲಾತ್ಮಕ ಸಂಜೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರನ್ನುಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ ಅವರು ಸನ್ಮಾನಿಸಿದರು .

75ರ‌ ವಯಸ್ಸಿನಲ್ಲೂ ಅನಂತ ನಾಗ್ ರವರು ಚಿತ್ರರಂಗದಲ್ಲಿ ತುಂಬಾ ಉತ್ಸಾಹದಿಂದ, ಕ್ರಿಯಾಶೀಲರಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಂತ ನಾಗ್ ನಟನೆಯ ಚಲನಚಿತ್ರಗಳು, ಎಂತಹದ್ದೇ ಪಾತ್ರಗಳನ್ನು ಕೊಟ್ಟರು ನಿಭಾಯಿಸಿ, ಅತ್ಯುತ್ತಮ ನಟನೆಯ ಮೂಲಕ ನಮ್ಮನ್ನು ರಂಜಿಸಿದ್ದಾರೆ ಎಂದು ಜೋಶಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದರಾದ ಗಾಯತ್ರಿ ಅವರು ಹಾಗೂ ಗಣಪತಿ ಭಟ್ ಸೇರಿದಂತೆ ಚಿತ್ರರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೀ ಕೇ ನ್ಯೂಸ್
";