Live Stream

[ytplayer id=’22727′]

| Latest Version 8.0.1 |

Travel Tips

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 33ನೇ ಯುವ ಸಂಘಟನೆ ಆಯೋಜನೆ

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 33ನೇ ಯುವ ಸಂಘಟನೆ ಆಯೋಜನೆ
ಶ್ರೀ ಚಾಮರಾಜೇಂದ್ರ ಮೃಗಾಲಯವು 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 33ನೇ ಯುವ ಸಂಘಟನೆಯನ್ನು ಆಯೋಜಿಸಲು ಉದ್ದೇಶಿಸಿದ್ದು, ಕಾರ್ಯಕ್ರಮವನ್ನು ಜುಲೈ 2025 ರಿಂದ ಜನವರಿ 2026 ರವರೆಗೆ 25 ಭಾನುವಾರಗಳಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗ0ಟೆವರೆಗೆ ನಡೆಸಲಾಗುವುದು.
ಮೊದಲು ಬಂದವರಿಗೆ ಮೊದಲ ಆದ್ಯತೆ ಅಧಾರದ ಮೇಲೆ 60 ಮಂದಿ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವನ್ಯಪ್ರಾಣಿಗಳ ವೈವಿಧ್ಯತೆ, ಸಂರಕ್ಷಣೆ ಹಾಗು ಮೃಗಾಲಯ ಪರಿಸರದಲ್ಲಿ ಅವುಗಳ ನಿರ್ವಹಣೆ, ಪ್ರಾಣಿ ವರ್ತನೆ ಅಧ್ಯಯನದ ಬಗ್ಗೆ ಕಾಲಕಾಲಕ್ಕೆ ತರಗತಿಗಳ ಮೂಲಕ ತಿಳಿಯಪಡಿಸಲಾಗುವುದು.ಆಸಕ್ತಿಯುಳ್ಳವರು ಜೂನ್ 25 ರಿಂದ ಜೂನ್ 28 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಸಲ್ಲಿಸುವುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ವಯಸ್ಸಿನ ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರದ ನಕಲು ದಾಖಲಾತಿಗಳನ್ನು ಸಲ್ಲಿಸಬೇಕು.

ಶಿಬಿರದ ಶುಲ್ಕ ರೂ. 2,500/- ಪಾವತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು 2025 ನೇ ಜೂನ್ 28ರ ಸಂಜೆ  4:00 ಗಂಟೆಯೊಳಗಾಗಿ ಸಲ್ಲಿಸುವುದು. ಶಿಬಿರಕ್ಕೆ ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು ಹೆಚ್ಚಿನ ವಿವರಗಳನ್ನು ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೃಗಾಲಯದ ವೆಬ್‍ಸೈಟ್ www.mysuruzoo.info ಅಥವಾ ಇ-ಮೇಲ್ [email protected] ಗೆ ಸಂಪರ್ಕಿಸಬಹುದು ಎಂದು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀ ಕೇ ನ್ಯೂಸ್
";