ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (Art Cultural Educational Enlight Foundation, Bengaluru) ಸಂಸ್ಥಾಪಕಿ ಅಂಬಿಕಾ ಸಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಅಂಗವಾಗಿ, ಶಿಕ್ಷಕರಿಗೆ ಧನ್ಯವಾದ ಸಲ್ಲಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ದಿನಾಂಕ 5 ಸೆಪ್ಟೆಂಬರ್ 2025 ರ ಶುಕ್ರವಾರದಂದು “ಲಾರ್ಡ್ ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಎಂ. ರುಕ್ಮಾಂಗದ ನಾಯ್ಡು,ನಿರ್ದೇಶಕರುಗಳಾದ ಶ್ರೀ ಮನೋಹರ್, ಶ್ರೀ ಸುರೇಂದ್ರ, ಶಾಲೆಯ ಪ್ರಾಂಶುಪಾಲರುಗಳಾದ ಡಾ. ಉಷಾ ಕುಮಾರಿ, ಮಂಜುನಾಥ್, ಶ್ರೀನಿವಾಸ್ ರೆಡ್ಡಿ, ಡಾ. ಪದ್ಮಾ ನವನೀತ್, ಉಪ ಪ್ರಾಂಶುಪಾಲರಾದ ಲೀಲಾ, ಮುಖ್ಯೋಪಾಧ್ಯಾಯನಿ ವನಿತಾ, ಮತ್ತು ಹಿಂದೂಸ್ತಾನ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಸಂಘಟನಾ ಆಯುಕ್ತರಾದ ದೀಪಿಕಾ ಹಾಗೂ ಆಡಳಿತ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.