ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ 2025ರಂದು (Teachers Day 2025) “ಗಾನವಿ ಸಿಂಧು ಆಡಿಟೋರಿಯಂ” ದಿನಾಂಕ 7/09/25 ಭಾನುವಾರ ರಂದು ಅಲ್ಲೆಘೆನಿ ರೈಸಿಂಗ್ ಫೌಂಡೇಶನ್ ಟ್ರಸ್ಟ್ (ರಿ) ಹಾಗೂ ಅಲ್ಲೆಘೆನಿ ಟೀಚರ್ಸ್ ಅಸೋಸಿಯೇಷನ್ (Alleghany rising Association), ಡ್ರೀಮ್ಸ್ ಕರೋಕೆ ಕ್ಲಬ್ ಹಾಗೂ ಫ್ಲಾಶ್ ಬ್ಯಾಕ್ ಇವೆಂಟ್ಸ್ ವತಿಯಿಂದ ಶಿಕ್ಷಕರಿಗೆ (Karnataka Teachers) ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮ ಚಿತ್ರ ಗೀತೆಗಳು ಹಳೆಯ ಕನ್ನಡ, ಹಿಂದಿ ಹಾಡುಗಳ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮ ಮುಖ್ಯ ಅಥಿತಿಗಳಾಗಿ ಶ್ರೀ ಶ್ರೀ ಶ್ರೀ. ಸಂತೋಷ್ ಗುರೂಜಿ, ಖ್ಯಾತ ಗಾಯಕರು ಶಶಿಧರ್ ಕೋಟೆ ರವರು ಹಾಗೂ ಲಕ್ಷ್ಮಣ್ ಬಾಲ ರವರು, ಮಾರುತಿ ಮೆಡಿಕಲ್ಸ್ ಮಾಲೀಕರು ಮಹಿಂದ್ರಾ ಮುನಾಥ್ ರವರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಖ್ಯಾತ ಪತ್ರಕರ್ತರು ಪರ್ವೀಜ್ ಪಾಷಾ, ಕೆಪಿಸಿಸಿ ಪದವೀಧರ ವಿಭಾಗದ ಕಾರ್ಯದರ್ಶಿ ಆಯೇಷಾ ಸುಲ್ತಾನ್ ರವರು, ಗಾಯಕರು ಸ್ಯಾಮ್ಸನ್ ನವೀನ್ ರವರು, ಆಡಿಟೋರಿಯಂ ಮಾಲೀಕರು ಕುಮಾರ್ ಹಾಗೂ ವಿಜಯಲಕ್ಷ್ಮೀ ಮತ್ತು ಭೈರವಿ ನಾಟ್ಯ ತಂಡ ಆಗಮಿಸಿ ಶಿಕ್ಷಕರಿಗೆ ಗೌರವಿಸಲಿದ್ದಾರೆ