ಬೆಂಗಳೂರು :ತಮೊಹಾ ಆರ್ಟ್ಸ್ ಫೌಂಡೇಶನ್ ತನ್ನ 9ನೇ ವಾರ್ಷಿಕೋತ್ಸವವನ್ನು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಭಾನುವಾರ, 24 ಆಗಸ್ಟ್ 2025, ಸಂಜೆ 6.00 ಗಂಟೆಗೆ ಭವ್ಯವಾಗಿ ಆಚರಿಸುತ್ತಿದೆ.
ಈ ವರ್ಷ ವಿದ್ಯಾರ್ಥಿಗಳಿಂದ ವಿಶೇಷವಾಗಿ “ದಶರೂಪ ವೈಭವಂ – ಶ್ರೀಮಹಾವಿಷ್ಣುವಿನ ದಶಾವತಾರಗಳ ಕಥಾನಕ” ಎಂಬ ನೃತ್ಯನಾಟಕವನ್ನು 80 ಕಲಾವಿದರು ವೇದಿಕೆಯ ಮೇಲೆ ಪ್ರದರ್ಶಿಸಲಿದ್ದಾರೆ.
ಈ ಸಾಂಸ್ಕೃತಿಕ ಸಮಾರಂಭಕ್ಕೆ ಡಾ. ದರ್ಶಿನಿ ಮಂಜುನಾಥ್ (ಕಲಾ ನಿರ್ದೇಶಕಿ, ನೃತ್ಯ ದಿಶಾ ಟ್ರಸ್ಟ್) ಹಾಗೂ ಗುರು ಶಶಿಕಲಾ ವೆಂಕಟೇಶ್ (ಕಲಾ ನಿರ್ದೇಶಕಿ, ನೃತ್ಯಸುಧಾ ಕಲಾ ಶಾಲೆ) ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಭರತನಾಟ್ಯ ರೂಪದಲ್ಲಿ ಶ್ರೀಮಹಾವಿಷ್ಣುವಿನ ದಿವ್ಯ ಕಥಾನಕವನ್ನು ಅನಾವರಣಗೊಳಿಸುವ ಈ ಉತ್ಸವ ಭಕ್ತಿ, ಸಂಪ್ರದಾಯ ಮತ್ತು ಕಲಾತ್ಮಕತೆಯ ಅಸಾಧಾರಣ ಸವಿಯನ್ನು ಪ್ರೇಕ್ಷಕರಿಗೆ ನೀಡಲಿದೆ ಎಂದು ತಮೋಹಾ ಆರ್ಟ್ಸ್ ಫೌಂಡೇಶನ್ ನಿರ್ದೇಶಕಿ ವಿದುಷಿ ಶ್ರೀಮತಿ ಗಾಯತ್ರಿ ಮಯ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.