Live Stream

[ytplayer id=’22727′]

| Latest Version 8.0.1 |

Bengaluru Urban

*ಸಕಲ ಭಕ್ತರ ಮನೋಭಿಷ್ಟಗಳನ್ನುಈಡೇರಿಸುವರು ರಾಯರು -ಸುಧೀಂದ್ರ ರಾವ್*

*ಸಕಲ ಭಕ್ತರ ಮನೋಭಿಷ್ಟಗಳನ್ನುಈಡೇರಿಸುವರು ರಾಯರು -ಸುಧೀಂದ್ರ ರಾವ್*

*ಸಕಲ ಭಕ್ತ ಜನರ ಮನೋಭಿಷ್ಟ ಗಳನ್ನುಈಡೇರಿಸುವರು ನಮ್ಮರಾಯರು-ಸುಧೀಂದ್ರ ರಾವ್*
ಬೆಂಗಳೂರು:ತನ್ನ ನಂಬಿ ಬಂದ ಸಕಲ ಭಕ್ತ ಜನರ ಮನೋಭಿಷ್ಟ ಗಳನ್ನು ಈಡೇರಿಸುವರು ನಮ್ಮ
ರಾಯರು ಎಂದು ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಸುಧೀಂದ್ರ ರಾವ್ ಹೇಳಿದರು.
ಅವರು ಶ್ರೀರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಹಾಗು 25ನೇ ರಜತ ಮಹೋತ್ಸವನ್ನು ಜಿಗಣಿ ಶ್ರೀಪಾದರಾಜ ಮಠದಲ್ಲಿ ವೈಭವಯುತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ರಾಯರೇ ಗತಿ ರಾಯರೇ ಮತಿ ನಮಗೆ, ರಾಯರು ತಮನ್ನು ನಂಬಿ ಆಶ್ರಯಿಸಿ ಬಂದ ಭಕ್ತರ ರೋಗ -ರುಜಿನ ದಾರಿದ್ರ್ಯಗಳನ್ನು ನಾಶ ಪಡಿಸಿ ಅವರಿಗೆ ಸದ್ಗತಿಯನ್ನು ಕರುಣಿಸುವರು ಎಂದರು.
ಆರಾಧನಾ ಅಂಗವಾಗಿ ಸುಪ್ರಭಾತ ಸೇವೆ, ನಿರ್ಮಲ ವಿಸರ್ಜನೆ, ಫಲಪಂಚಾಮೃತ, ಸಹಸ್ರ ನಾಮ ಅರ್ಚನೆ ಸಹಿತವಾಗಿ ಪೂಜಿಸಲಾಯಿತು.
ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು ಎಂದು ವ್ಯವಸ್ಥಾಪಕ ವಾದಿರಾಜ್ ಹೇಳಿದರು,
ಅಕ್ಷಯ ವಿಪ್ರ ಮಹಾಸಭಾದ ಉಪಾಧ್ಯಕ್ಷ ಡಾ, ಕಿರಣ್ ಎಸ್ ಮೂರ್ತಿ. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಜಂಟಿ ಕಾರ್ಯದರ್ಶಿ ಮಹೇಶ್, ಖಜಾಂಜಿ ರಾಘವೇಂದ್ರ ರಾವ್, ಶ್ರೀಮಠದ ಮುಖ್ಯಸ್ಥರಾದ ನಾಗರಾಜರಾವ್, ಶ್ಯಾಮ್, ಸತೀಶ್ ಸೇರಿದಂತೆ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವೀ ಕೇ ನ್ಯೂಸ್
";