Live Stream

[ytplayer id=’22727′]

| Latest Version 8.0.1 |

State News

*ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ,  ನ್ಯಾಯ ಕೊಡಿ ಎಂದು- ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ*

*ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ,  ನ್ಯಾಯ ಕೊಡಿ ಎಂದು- ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ*

*ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ,  ನ್ಯಾಯ ಕೊಡಿ ಎಂದು- ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ*

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಟಿ. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇಕಡ 50 ಮಿತಿಗೊಳಿಸಲು ಆದೇಶಿಸಿರುವ ಬಗ್ಗೆ ಮತ್ತು ಕಾಂತರಾಜು ಮತ್ತು ಜೆ.ಪಿ.ಹೆಗಡೆ ಆಯೋಗಗಳ ಮೀಸಲಾತಿ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸದಂತೆ ತಡೆಹಿಡಿದಿರುವ ಬಗ್ಗೆ.

 

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ಡಾ||ಗಾ.ನಂ.ಶ್ರೀಕಂಠಯ್ಯ IFS(R), ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಎಂ.ಎ.ಆನಂದ್, ಸಂಘದ ಪ್ರಧಾನ ಕಾರ್ಯದರ್ಶಿ ಅಡಿಟರ್ ನಾಗರಾಜ್ ಯಲಚವಾಡಿ, ಕಡಬಗೆರೆ ಒಕ್ಕಲಿಗರ ಕ್ರೀಯಾ ಸಮಿತಿ ಅಧ್ಯಕ್ಷರಾದ ಕೆ.ಸಿ.ಶಿವರಾಮು, ಒಕ್ಕಲಿಗ ಸಮಾಜದ ಮುಖಂಡರಾದ ರಂಗನರಸಿಂಹಯ್ಯ, ಮೇಲುಕೋಟೆ ಶಿವರಾಜು, ಪಿ.ಎಂ.ಅಶೋಕ್ ರವರು ಭಾಗವಹಿಸಿದ್ದರು.

*ಡಾ||ಗಾ.ನಂ.ಶ್ರೀಕಂಠಯ್ಯ* ರವರು ಮಾತನಾಡಿ ರಾಜ್ಯ ಸರ್ಕಾರ ಮೀಸಲಾತಿ ಕುರಿತು 12ನೇ ತಾರೀಖು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಕಾಂತರಾಜು ವರದಿಯಂತೆ ಶೇಕಡ 76ರಷ್ಟು ಮೀಸಲಾತಿ ಕೊಡಲು ತೀರ್ಮಾನ ಮಾಡಲು ಹೋರಟಿದ್ದಾರೆ.

ಕೋರ್ಟ್ ನಲ್ಲಿ ಶೇಕಡ 50ರಷ್ಟು ಮಾತ್ರ ಮೀಸಲಾತಿ ಕೊಡಬೇಕು ಎಂದು ಆದೇಶ ನೀಡಿದ್ದಾರೆ ಸಚಿವ ಸಂಪುಟ ಕರೆದು ವ್ಯರ್ಥ, ಕಾಂತರಾಜು, ಜಯಪ್ರಕಾಶಹೆಗಡೆ ಕೊಟ್ಟ ವರದಿ ತಿರಸ್ಕಾರ ಮಾಡಿ.
ಕುರುಬ ಸಮುದಾಯಕ್ಕೆ ಶೇಕಡ ನೂರಷ್ಟು ಮೀಸಲಾತಿ ಕೊಟ್ಟ ಬೇರೆ ಜಾತಿಯವರಿಗೆ ಮಲತಾಯಿ ಧೋರಣಯನ್ನು ಸರ್ಕಾರ ಮಾಡಿದೆ.

ಕಾಂತರಾಜು ವರದಿ 2014ರಲ್ಲಿ ಸರ್ವೆ ಮಾಡಿತು ಇದೀಗ 11ವರ್ಷವಾಗಿದೆ ಅ ವರದಿಯಲ್ಲಿ ಸತ್ಯಂಶವಿಲ್ಲ ಅವೈಜ್ಞಾನಿಕವಾಗಿದೆ ಎಲ್ಲ ಸಮುದಾಯದವರು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾತಿಜನಗಣತಿ ಸಮೀಕ್ಷೆ ನಡೆಯುವುದರಿಂದ ಅದರ ಮೇಲೆ ಸಮಾಜ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವುದರಿಂದ ಅ ವರದಿ ಮೇಲೆ ಮೀಸಲಾತಿ ಕೊಡಿ ಸರ್ಕಾರಕ್ಕೆ ಮನವಿ ಮಾಡಿದರು.

*ಅಡಿಟರ್ ನಾಗರಾಜ್ ಯಲಚವಾಡಿ* ರವರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಕುರಿತು ಸತತ ಹೋರಾಟ ಮಾಡುತ್ತಿದ್ದೇವೆ.

ಕಾಂತರಾಜು ವರದಿಯನ್ನು ಪರಿಣಿತರಿಗೆ ಕೊಡಿ, ಬೇಡಜಂಗಮ 500ಜನ ಇದ್ದರು ಈಗ ನಾಲ್ಕು ಲಕ್ಷ ಜನ ಇದ್ದಾರೆ ಇದರ ಕುರಿತು ತನಿಖೆಯಾಗಬೇಕು.

ಎಲ್ಲ ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಅವರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳು ಕೆಲಸಗಳು ಸಿಗಬೇಕು.

ವೀ ಕೇ ನ್ಯೂಸ್
";