ಬೆಂಗಳೂರು: ಬಸವನಗುಡಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿರುವ ಪರಮಪೂಜ್ಯ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶ್ರೀ ಶಿರೂರು ಮಠಾಧೀಶರಾದ ಶ್ರೀಶ್ರೀಶ್ರೀ ವೇದವರ್ಧನತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ. ಭವ್ಯ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ.
ಶಾಸಕರಾದ ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ಉತ್ತರಾಧಿ ಮಠದ ನಿರ್ದೇಶಕ ಸತ್ಯಧ್ಯಾನಚಾರ್ಯ ಕಟ್ಟಿ, ಕೇಶವ ಬಾಯರಿ, ಡಾ||ಉದಯಕುಮಾರ್ ಸರಳ್ತಾಯ, ಅಖಿಲ ಭಾರತ ಮಾಧ್ವ ಮಂಡಲ ಅಧ್ಯಕ್ಷರಾದ ಗೌತಮ್ ಹೆಚ್.ವಿ. ಮತ್ತು ಹರಿದಾಸ ಭಟ್ ರವರು, ವೀರನಾರಾಯಣ ಪಾಂಡುರಂಗಿ, ಪಾರಪತ್ಯಗಾರರಾದ ಶ್ರೀಶಾಭಟ್ ಕಡೆಕಾರ್ ರವರು, ವಿದ್ಯಾಪೀಠ ವ್ಯವಸ್ಥಾಪಕರು ಶಶಾಂಕ್ ಅಚಾರ್ಯ,ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಲಾಜಿರವರು ಉಪಸ್ಥಿತರಿದ್ದರು.
ಭವ್ಯ ಶೋಭಯಾತ್ರೆಯು ನವ ಮಂತ್ರಾಲಯ ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಯಲ್ಲಿ ವಿದ್ಯಾಪೀಠ ರಸ್ತೆಯ ಮೂಲಕ ಪೂರ್ಣಪ್ರಜ್ಞಾ ವಿದ್ಯಾಪೀಠದವರಗೆ ಸಾಗಿತು.
ನೂರಾರು ಅಗಮ ಪಂಡಿತರು, ಮಹಿಳಾ ಮಂಡಳಿಯವರಾದ ತ್ರಿಪುರ ಸುಂದರಿ, ಗಿರಿವಾಸವಿ ತಂಡದವರಿಂದ ಭಕ್ತಿಗೀತೆ ಹಾಡಿದರು , ಯಕ್ಷಗಾನ ವೇಷಧಾರಿಗಳು, ಪೂಜಾಕುಣಿತ, ಡೊಳ್ಳು, ವೀರಗಾಸೆ,ತಮಟೆವಾದ್ಯ ವಿವಿಧ ಕಲಾತಂಡಗಳು ಭಾಗವಹಿಸಿದ್ದರು.