ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರುಗಳ ಪ್ರತಿನಿಧಿ ಮಂಡಳಿಯು ಇಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.
ಈ ಸಂದರ್ಭದಲ್ಲಿ, ಮಂಡಳಿಯ ಸದಸ್ಯರು ರಾಜ್ಯಪಾಲರೊಂದಿಗೆ ಕರ್ನಾಟಕ ಮತ್ತು ಬೆಂಗಳೂರು ನಗರ ಹಾಗೂ ಇಲ್ಲಿನ ವ್ಯಾಪಾರ, ಸಂಸ್ಕøತಿ ಮತ್ತು ಪರಂಪರೆ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು. ಅವರು ಕರ್ನಾಟಕದ ತಾಂತ್ರಿಕ ಅಭಿವೃದ್ಧಿ ಮತ್ತು ಬೆಂಗಳೂರಿನ ಐಟಿ ಹಬ್ ಸ್ಥಾನಮಾನವನ್ನು ಮೆಚ್ಚಿಕೊಂಡರು.
ರಾಜ್ಯಪಾಲರು ಮಂಡಳಿಗೆ ಆತ್ಮೀಯವಾಗಿ ಸ್ವಾಗತಿಸಿ, ನಿಯೋಗವು ಕರ್ನಾಟಕ ಹಾಗೂ ಬೆಂಗಳೂರಿಗೆ ಆಗಮಿಸಿದಕ್ಕಾಗಿ ಅಭಿನಂದಿಸಿ, ಕರ್ನಾಟಕ ಹಾಗೂ ಬೆಂಗಳೂರು ಭಾರತದ ತಾಂತ್ರಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಕುರಿತು ತಿಳಿಸಿದರು.
ಈ ಭೇಟಿಯು, ಭಾರತೀಯ ಸಾಂಸ್ಕøತಿಕ ಸಂಬಂಧ ಮಂಡಳಿ ಅವರ ವತಿಯಿಂದ ಆಯೋಜಿಸಲಾದ ಪ್ರವಾಸದ ಭಾಗವಾಗಿದ್ದು, ಶ್ರೀಲಂಕಾದ ಯುವ ರಾಜಕೀಯ ನಾಯಕರಿಗೆ ಭಾರತದ ಸಂಸ್ಕøತಿ, ಪ್ರಜಾಪ್ರಭುತ್ವ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಸಮಗ್ರ ಅರಿವು ನೀಡುವ ಉದ್ದೇಶ ಹೊಂದಿದೆ.
Veekay News > State News > ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರ ನಿಯೋಗ
ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರ ನಿಯೋಗ
ವೀ ಕೇ ನ್ಯೂಸ್23/07/2025
posted on
