ಚಾಮರಾಜನಗರ: ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆದ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಕಾರ್ಯಕ್ರಮ ಅತ್ಯಂತ ವೈಭವ ಸಂಭ್ರಮ ,ಶ್ರದ್ಧೆ ,ಭಕ್ತಿಯಿಂದ ನಡೆಯಿತು.
ಇಂದು ಚಾಮರಾಜನಗರ ಶ್ರೀ ಕೃಷ್ಣ ನಾಮ ಜಪದ ಝೇಂಕಾರದ ಮೂಲಕ ಶ್ರೀ ಚಾಮರಾಜೇಶ್ವರ ದೇವಾಲಯದ ಸುತ್ತ ಹಾಗೂ ರಥದ ಬೀದಿಯಲ್ಲಿ ಶ್ರೀ ಕೃಷ್ಣ ನಾಮಸ್ಮರಣೆ ಶ್ರೀ ಕೃಷ್ಣ ಹಾಗೂ ರಾಧೆಯರ ಸಂಭ್ರಮ ಸಂಭ್ರಮ ವಿಶೇಷವಾಗಿ ನಡೆಯಿತು.
ನೂರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮೊಸರು ಮಡಿಕೆ ಓಡೆಯುವ ಉತ್ಸವ ಉದ್ಘಾಟನೆಯನ್ನು ಮಂಡ್ಯ ಜಿಲ್ಲೆಯ ಅಬಕಾರಿ ಜಿಲ್ಲಾ ಅಧಿಕಾರಿ ನಾಗಶಯನ ರವರು ಉದ್ಘಾಟನೆಯನ್ನು ನೆರವೇರಿಸಿ ಶ್ರೀ ಕೃಷ್ಣ ಪ್ರಜ್ಞೆಯನ್ನು ಚಾಮರಾಜನಗರದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಋಗ್ವೇದಿ ಯವರು ನಿರಂತರವಾಗಿ 15 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಇಡೀ ಗಡಿ ಜಿಲ್ಲೆಯಲ್ಲಿ ಅತ್ಯಂತ ವೈಭವದ ಸಂಭ್ರಮದ ಕಾರ್ಯಕ್ರಮವನ್ನು ರೂಪಿಸಿ, ಸಾವಿರಾರು ಜನರ ಆನಂದಕ್ಕೆ ಕಾರಣರಾಗಿದ್ದಾರೆ. ಶ್ರೀ ಕೃಷ್ಣ ಸಾರ್ವಕಾಲಿಕ ಸಂದೇಶವನ್ನು ಜಗತ್ತಿಗೆ ನೀಡಿದವರು. ಭಗವದ್ಗೀತೆ ನಮ್ಮೆಲ್ಲರ ಪವಿತ್ರ ಗ್ರಂಥ. ಭಗವದ್ಗೀತೆಯು ಮಾನವ ಕಲ್ಯಾಣದ ರಹಸ್ಯಗಳನ್ನು ಹಾಗೂ ಮೌಲ್ಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿಂತನ ಶಕ್ತಿಯ ಮೂಲಕ ರೂಪಿಸಿರುವ ಶ್ರೀ ಕೃಷ್ಣ ಮತ್ತು ಅವನ ಬಾಲ ಲೀಲೆಗಳು ಪ್ರತಿ ಮನೆಯಲ್ಲಿಯೂ ಸಂಭ್ರಮಕ್ಕೆ ಕಾರಣವಾಗುತ್ತದೆ .ಶ್ರೀ ಕೃಷ್ಣ ಮತ್ತು ರಾಧೆ ಪವಿತ್ರತೆಯ ಸಂಕೇತವಾಗಿದ್ದಾರೆ .ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮೊಸರು ಮಡಿಕೆ ಒಡೆಯುವ ಉತ್ಸವ ವರ್ಷ ವರ್ಷ ಜನಪ್ರಿಯವಾಗಿ ಕುಟುಂಬ ಸಹಿತ ಉತ್ಸವಕ್ಕೆ ಆಗಮಿಸಿ, ಮನಸ್ಸನ್ನು ಸಂತೋಷಗೊಳಿಸುವ ಉತ್ಸವವಾಗಿದೆ . ಇದಕ್ಕಾಗಿ ಶ್ರಮಿಸುವ ಸರ್ವರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟ್ಟಣ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ರವರು ಯುವಕರನ್ನು ಒಂದುಗೂಡಿಸುವ ಹಾಗೂ ಆಧ್ಯಾತ್ಮಿಕ ಶಕ್ತಿಯ ಕಡೆಗೆ ಕರೆದೊಯ್ಯುವ ಮೊಸರು ಮಡಿಕೆ ಒಡೆಯುವ ಉತ್ಸವವು ಬಹಳ ವಿಶೇಷವಾದದ್ದು . ಗಡಿ ಜಿಲ್ಲೆಯಲ್ಲಿ ಬಹಳ ಉತ್ಸಾಹದಿಂದ ಸ್ವಯಂ ಪ್ರೇರಿತರಾಗಿ ಸೇರುವ ಉತ್ಸವವಾಗಿದೆ. ಕೃಷ್ಣ ಪ್ರತಿಷ್ಠಾನ ಹದಿನೈದು ವರ್ಷಗಳಿಂದ ಈ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಸಂಪೂರ್ಣ ಸಹಕಾರವನ್ನು ನೀಡೋಣ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶ್ರೀ ಕೃಷ್ಣ ಪ್ರತಿಷ್ಠಾನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮೊಸರು ಮಡಿಕೆ ಒಡೆಯುವ ಉತ್ಸವ ಆಯೋಜನೆ ಮಾಡಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀರಾಮ ಮತ್ತು ಕೃಷ್ಣರು ಸದಾ ಕಾಲ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ. ಶ್ರೀರಾಮ ಮತ್ತು ಕೃಷ್ಣರ ಆದರ್ಶಗಳು ಸದಾ ಕಾಲ ಜೀವಂತಿಕೆಯಿಂದ ಕೂಡಿದೆ. ಕೃಷ್ಣ ಆನಂದ ಸಾಗರದ ಸಂಕೇತ. ಕೃಷ್ಣ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿ. ಮನಶಾಸ್ತ್ರಜ್ಞ .ಆತನ ಚಿಂತನೆಗಳು ಸಾವಿರಾರು ವರ್ಷಗಳಿಂದಲೂ ನಿರಂತರವಾಗಿ ಜಗತ್ತಿಗೆ ಆದರ್ಶಪ್ರಾಯವಾಗಿದೆ .
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ರಾಧಾಷ್ಟಮಿ ಮೂಲಕ ದೇಶಿಯ ಕ್ರೀಡೆಗಳನ್ನು ಉತ್ತೇಜಿಸಲು ಕಬ್ಬಡಿ ಪಂದ್ಯಾವಳಿ, ಶ್ರೀ ಕೃಷ್ಣ ಹೂ ಕಟ್ಟುವ ಸ್ಪರ್ಧೆ ,ಶ್ರೀ ಕೃಷ್ಣ ಕವನ ಸ್ಪರ್ಧೆ, ಶ್ರೀ ಕೃಷ್ಣ ಕೆಸರುಗದ್ದೆಓಟ ಹಾಗೂ ಮೊಸರು ಮಡಿಕೆ ಓಡೆಯುವ ಸ್ಪರ್ಧೆಗಳು ಹಾಗೂ ಶ್ರೀ ಕೃಷ್ಣ ಮತ್ತು ರಾಧಾ ವೇಷಧಾರಿಗಳ ಸಂಭ್ರಮಕ್ಕೆ ಮತ್ತು ಗಡಿಗೆಯನ್ನು ಗುರಿಯಿಟ್ಟು ಸಾಧಿಸುವ ಛಲಕ್ಕೆ ಒಂದು ಅವಕಾಶವಾಗಿದೆ. ಯುವಶಕ್ತಿಯನ್ನು ಜಾಗೃತಗೊಳಿಸಿ ಸನ್ಮಾರ್ಗದ ಕಾರ್ಯಕ್ರಮಗಳನ್ನು ರೂಪಿಸಿದಾಗ ಸಮಾಜಕ್ಕೆ ಉತ್ತಮವಾದ ಸಂದೇಶ ಉಂಟಾಗುತ್ತದೆ ಎಂದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಕಾರ್ಯದರ್ಶಿ ಜನಪದ ಗಾಯಕ ಸುರೇಶ್ ನಾಗ್ ಹರದನಹಳ್ಳಿ ರವರಿಂದ ವಿಶೇಷ ಶ್ರೀ ಕೃಷ್ಣ ಗೀತ ಗಾಯನ ನಡೆಯಿತು. ಶ್ರೀ ಕೃಷ್ಣನ ಹಾಡುಗಳು ನೂರಾರು ಜನರನ್ನು ಹರ್ಷ ಚಿತ್ತರನ್ನಾಗಿ ಮಾಡಿತು.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ವಹಿಸಿ ಮಾತನಾಡುತ್ತಾ 2010ರಲ್ಲಿ ಆರಂಭವಾದ ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರಥಮ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ಇಂದಿಗೂ 15ನೇ ವರ್ಷದ ಸಂಭ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಇಡೀ ಚಾಮರಾಜನಗರ ಜಿಲ್ಲೆಯ ಹಳ್ಳಿಗೂ ವಿಸ್ತರಿಸುವ ಕಾರ್ಯವನ್ನು ಮಾಡುತ್ತಿರುವ ಶ್ರೀ ಕೃಷ್ಣ ಪ್ರತಿಷ್ಠಾನಕ್ಕೆ ಸರ್ವರೂ ಶಕ್ತಿಯನ್ನು ನೀಡೋಣ. ಒಳ್ಳೆಯದನ್ನು ಬಯಸೋಣ. ಒಳ್ಳೆಯ ಕಾರ್ಯವನ್ನು ಮಾಡುವವರಿಗೆ ಭಗವಂತನ ಆಶೀರ್ವಾದ ಸದಾ ಕಾಲ ಇರುತ್ತದೆ ಎಂದು ತಿಳಿಸಿದರು.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶ್ರೀ ಕೃಷ್ಣನ ಉತ್ಸವ ಪ್ರತಿ ಮನೆಯಲ್ಲಿಯೂ ಕೂಡ ಹೊಸ ಉತ್ಸಾಹವನ್ನು ತುಂಬುತ್ತಿದೆ . ಪೋಷಕರು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷವನ್ನು ಧರಿಸುವ ಮೂಲಕ ಶ್ರೀ ಕೃಷ್ಣನ ಪೂಜೆಯನ್ನು ನೆರವೇರಿಸುವ ಮೂಲಕ ಸಂತೋಷವನ್ನು ಪಡೆಯುವ ಕಾರ್ಯವಾಗಿದೆ. ಶ್ರೀ ಕೃಷ್ಣ ಧರ್ಮರಕ್ಷಕ. ಧರ್ಮಾ ಸದಾಕಾಲ ಜಾಗೃತವಾಗಿರಬೇಕು. ಧರ್ಮದಿಂದ ಮನುಷ್ಯ ಸಂಪೂರ್ಣ ಉನ್ನತಿಯನ್ನು ಸಾಧಿಸುತ್ತಾನೆ ಎಂದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರದೀಪ್ ಕುಮಾರ್ ದೀಕ್ಷಿತ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಮುಖಂಡರಾದ ಚಂದ್ರಶೇಖರ್, ಬಾಲಸುಬ್ರಹ್ಮಣ್ಯಂ, ಶಿವು, ಶ್ರೀನಿಧಿ, ಶರಣ್ಯ ಋಗ್ವೇದಿ, ಉಪಸ್ಥಿತರಿದ್ದರು.
ಗಮನಸೆಳೆದ ಸೈಕಲ್ ಬ್ರಾಂಡ್ ಅಗರಬತ್ತಿ.
ಮೈಸೂರಿನ ಸೈಕಲ್ ಬ್ರಾಂಡ್ ಅಗರಬತ್ತಿ ವತಿಯಿಂದ ಕಳೆದ 15 ವರ್ಷಗಳಿಂದ ಶ್ರೀ ಕೃಷ್ಣ ಮೊಸರು ಮಡಿಕೆ ಒಡೆಯುವ ಉತ್ಸವಕ್ಕೆ ವಿಶೇಷವಾಗಿ ಆರು ಅಡಿ ಎತ್ತರದ 24 ಗಂಟೆ ಕಾಲ ಸತತವಾಗಿ ತನ್ನ ಪರಿಮಳಯುಕ್ತವಾದ ಸುವಾಸನೆ ಬೀರುವ, ವಿಶೇಷವಾಗಿ ತಯಾರಿಸಿ ಕೃಷ್ಣ ಪ್ರತಿಷ್ಠಾನದ ಉತ್ಸವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸುವುದು ವಿಶೇಷವಾದದ್ದು. ಆರು ಅಡಿ ಎತ್ತರದ ಗಂಧದಕಡ್ಡಿ ಉತ್ಸವದ ವಿಶೇಷ ಆಕರ್ಷಣೆಯಾಗಿ ನೂರಾರು ಜನ ಸಂಭ್ರಮ ಪಟ್ಟರು.
ಎಲ್ಲೆಲ್ಲೂ ಯುವಕರ ಶ್ರೀ ಕೃಷ್ಣ ಕಲರವ.
ಮೊಸರು ಮಡಿಕೆ ಹೊಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಯುವಕರ ದಂಡೆ ಆಗಮಿಸಿತ್ತು. 6 ತಂಡಗಳು ವಿಶೇಷವಾಗಿ ತಯಾರಿ ಮಾಡಿಕೊಂಡು ಮೊದಲ ಹಂತದಲ್ಲಿ ಸುಮಾರು 20 ಎತ್ತರದ ಮೊಸರು ಕುಡಿಕೆಯನ್ನು ಒಡೆದು ಬೆಣ್ಣೆ ಮತ್ತು ಮೊಸರನ್ನು ಚೆಲುವ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿ ಕುತೂಹಲವನ್ನು ಉಂಟುಮಾಡುತ್ತಿತ್ತು ಪ್ರತಿ ಕ್ಷಣವು ಸುತ್ತಲೂ ನೀರು ಎರಚುವ ಮೂಲಕ ಆತ ಗುರಿ ಸಾಧಿಸಲು ವಿಫಲ ಮಾಡಲು ಪ್ರಯತ್ನಗಳು ನಡೆದರು ಜಲ ಬಿಡದೆ ಎತ್ತರದಲ್ಲಿರುವ ಗಡಿಯನ್ನು ಹತ್ತಿ ಒಡೆದು ಸಂಭ್ರಮಿಸಿ ಬೆಣ್ಣೆ ತಿನ್ನುವ ದೃಶ್ಯಗಳು , ಭಗವಂತನ ಬಾಸ್ಮರಣೀಯ ಮೂಲಕ ಶ್ರೀ ಕೃಷ್ಣ ನಾಮ ಪಠಿಸುವ ಮೂಲಕ ಧನ್ಯರಾದರು. ಕೃಷ್ಣ ಮತ್ತು ರಾಧೆರು ಬೆಣ್ಣೆ ತೆಗೆಯುವ ಮೂಲಕ ಧನ್ಯರಾದರು.
ಎಲ್ಲೆಲ್ಲೂ ಶ್ರೀ ಕೃಷ್ಣ ರಾಧೆಯರ ದರ್ಶನ.
ನಗರದ ಎಲ್ಲಿ ನೋಡಿದರೂ ಚಿಕ್ಕ ಬಾಲಕ ಬಾಲಕಿಯರು ಶ್ರೀ ಕೃಷ್ಣ ವೇಷಧಾರಿಗಳಾಗಿ ರಾಧೆರಾಗಿ ಮುದ್ದು ಮುದ್ದಾಗಿ ಓಡಾಡುವ ಬೆಣ್ಣೆ ತಿನ್ನುವ ಮೊಸರು ಗಡಿಕೆಯಲ್ಲಿ ಮೊಸರು ಒಡೆಯುವ ಹಾಗೂ ತುಂಟಾಟಗಳ ಮೂಲಕ ಮಕ್ಕಳ ಮುಗ್ಧ ಭಾವಗಳು ಜನರನ್ನು ಆನಂದದ ಪರಮ ಸಾಗರದಲ್ಲಿ ಮುಳುಗಿಸಿತು.
ಶ್ರೀಕೃಷ್ಣ ಹೂ ಕಟ್ಟುವ ಸ್ಪರ್ಧೆ.
ಭಾರತೀಯ ಸಂಸ್ಕೃತಿಯಲ್ಲಿ ಹೂವಿಗೆ ವಿಶೇಷ ಗೌರವ ಮತ್ತು ಭಕ್ತಿ ಶ್ರದ್ಧೆ ಇದೆ. ಹೂ ಕಟ್ಟುವುದು ಒಂದು ವಿಶೇಷವಾದ ಕಲೆ ಮತ್ತು ಆಸಕ್ತಿ. ಆಧುನಿಕ ಯುಗದಲ್ಲಿ ಹೂ ಕಟ್ಟುವ ಪ್ರಕ್ರಿಯೆ ಉತ್ತೇಜಿಸಲು ಯುವಕರಿಗೆ ಮತ್ತು ಯುವತಿಯರಿಗೆ ಹೂ ಕಟ್ಟುವ ಸ್ಪರ್ಧೆಯನ್ನು ಆಯೋಜಿಸಿ ಉತ್ತೇಜನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಹೂ ಕಟ್ಟುವ ಮೂಲಕ ನೋಡಿಗರಲ್ಲೂ ಕುತೂಹಲ ಕೆರಳಿಸಿದರು. ಶ್ರೀ ಕೃಷ್ಣ ಗೀತ ಗಾಯನ ಹಾಗೂ ಸಂಕೀರ್ತನೆ ನಡೆಯಿತು.