ಬೆಂಗಳೂರು : ಶ್ರೀ ವ್ಯಾಸರಾಜ ಮಠ (ಸೋಸಲೆ) ಸುಬ್ರಹ್ಮಣ್ಯನಗರ ಶಾಖೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 10 ರಿಂದ 12ರ ವರೆಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಅವುಗಳ ಈ ರೀತಿ ಇವೆ :
ಪೂಜಾ ಕೈಂಕರ್ಯಗಳು : ಆರಾಧನೆಯ ಮೂರೂ ದಿನಗಳಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಅಲಂಕಾರ ಪಂಕ್ತಿ ಸೇವಾ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ, ಸಂಜೆ 5-00ಕ್ಕೆ ರಥೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ.
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ರಿಂದ 7). ಆಗಸ್ಟ್ 10-ಸುರಭಿ ಗಾನ ಮಂಡಳಿ, ಆಗಸ್ಟ್ 11-ಜಾನ್ಹವಿ ಭಜನಾ ಮಂಡಳಿ, ಆಗಸ್ಟ್ 12-ಪವಿತ್ರ ಗಾನ ವೃಂದ.
ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 7 ರಿಂದ 8-30). ಆಗಸ್ಟ್ 10-“. ಹರಿದಾಸ ಮಂಜರಿ”. ಶ್ರೀಮತಿ ರೂಪಶ್ರೀ ಪ್ರಭಂಜನ (ಗಾಯನ), ಶ್ರೀ ಪಂಚಾಕ್ಷರಿ ಹಿರೇಮಠ್ (ಹಾರ್ಮೋನಿಯಂ), ಶ್ರೀ ದತ್ತಾ ಜೋಶಿ (ತಬಲಾ). 11-“ಹರಿದಾಸ ವೈಭವ”. ಶ್ರೀಮತಿ ಸುಷ್ಮಾ ಶ್ರೇಯಸ್ (ಗಾಯನ), ಶ್ರೀ ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು), ಶ್ರೀ ಗಣೇಶ್ ಮೂರ್ತಿ (ಮೃದಂಗ). ಆಗಸ್ಟ್ 12-“ಹರಿದಾಸ ಝೇಂಕಾರ”. ಶ್ರೀ ಶಿಶಿರ ಕೆ.ಪಿ. (ಗಾಯನ), ಕು|| ಸಂಸ್ಕೃತಿ ಎಸ್. ಬಾಣಾವರ್ (ಕೀ-ಬೋರ್ಡ್), ಶ್ರೀ ಧೃವ ಆಚಾರ್ಯ (ತಬಲಾ).
ಪ್ರಶಸ್ತಿ ಪ್ರದಾನ ಸಮಾರಂಭ : ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣದಾಸ್ ಅವರ ಹೆಸರಿನಲ್ಲಿ ಪ್ರತಿವರ್ಷವೂ ರಾಯರ ಆರಾಧನೆಯಂದು ಸಮಾಜ ಸೇವಾ ಧುರೀಣರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದು ವಾಡಿಕೆ. ಅದೇ ರೀತಿ ಈ ವರ್ಷವೂ ಸಹ ಜನಪ್ರಿಯ ಶಾಸಕರೂ ಹಾಗೂ ಮಾಜಿ ಉಪಮುಖ್ಯಮಂತ್ರಿಗಳೂ ಆದ ಡಾ|| ಸಿ.ಎನ್. ಅಶ್ವತ್ಥನಾರಾಯಣ ಮತ್ತು ಜನಪ್ರಿಯ ನಗರಸಭೆ ಸದಸ್ಯರಾದ ಶ್ರೀ ಹೆಚ್. ಮಂಜುನಾಥ್ ಇವರಿಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿ ವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸೋಸಲೆ ಪ್ರಕಾಶ್ ಅವರು ವಿನಂತಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), #1160, 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ರಾಜಾಜಿನಗರ, 2ನೇ ಹಂತ ಸುಬ್ರಹ್ಮಣ್ಯನಗರ, ಬೆಂಗಳೂರು-560010