Live Stream

[ytplayer id=’22727′]

| Latest Version 8.0.1 |

State News

ಗೂಗಲ್ ಭಾಷಾಂತರ ಎಡವಟ್ಟು-ಮೆಟಾಗೆ ಪತ್ರ ಬರೆದ ಸಿದ್ದರಾಮಯ್ಯ!

ಗೂಗಲ್ ಭಾಷಾಂತರ ಎಡವಟ್ಟು-ಮೆಟಾಗೆ ಪತ್ರ ಬರೆದ ಸಿದ್ದರಾಮಯ್ಯ!

ಬೆಂಗಳೂರು: ಆನ್ಲೈನ್ ನಲ್ಲಿ ಟ್ರಾನ್ಸ್ಲೇಷನ್ ಯಡವಟ್ಟು ಇತ್ತೀಚೆಗೆ ಜಾಸ್ತಿಯಾಗಿದೆ, ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಕ್ಯಾಪ್ಷನ್ ನಲ್ಲೇ ಅವಾಂತರ ಸೃಷ್ಟಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.
ಮೆಟಾ ಸಂಸ್ಧೆಯ ಗೂಗಲ್ ಟ್ರಾನ್ಸ್ಲೇಷನ್ ಎಡವಟ್ಟು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ,
ದಿವಂಗತ ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಸುದ್ದಿಯ ಪೋಸ್ಟ್ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದರು,
ಟ್ರಾನ್ಸ್ಲೇಷನ್ ಆಗುವ ವೇಳೆ Chief Minister siddarmaiah passed away yesterday multlingual star, Senior Actress B Sarojadevi tood darshan of Sarojadevi’s body and paid his last respects ಎಂದು ಪೋಸ್ಟ್ ಆಗಿದೆ,
ಇಡೀ ಕ್ಯಾಪ್ಷನ್ ಪೂರ್ತಿ ತಪ್ಪಾಗಿದ್ದು ಪೋಸ್ಟ್ ಓದಿದಿ ಪ್ರತಿಯೊಬ್ಬರು ಕಕ್ಕಾಬಿಕ್ಕಿ ಆಗಿದ್ದಾರೆ, ಮೆಟಾ ಸಂಸ್ಧೆಯ ತಂತ್ರಜ್ಞಾನ ಯಡವಟ್ಟು ಸಂಬಂಧ ಕಮೆಂಟ್ಸ್ ಮಾಡಿ ನೆಟ್ಟಿಗರು ಕಾಲೆಳೆದಿದ್ದಾರೆ,

ವೀ ಕೇ ನ್ಯೂಸ್
";