ಬೆಂಗಳೂರು: ಬನಶಂಕರಿಯ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಹೈಸ್ಕೂಲ್ನ 150ಕ್ಕೂ ಹೆಚ್ಚು ಮಕ್ಕಳಿಗೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ, ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ “ಸಮಾಜ ಸಹಾಯ” ಅಭಿಯಾನದಡಿಯಲ್ಲಿ ‘ಸಂಸ್ಕಾರ ನೋಟ್ಬುಕ್’ಗಳನ್ನು ವಿತರಿಸಲಾಯಿತು.

ಮುಂದೆ ಅವರು ಮಾತನಾಡುತ್ತ ಈ ಸಂಸ್ಕಾರ ನೋಟ್ಬುಕ್ನ ವೈಶಿಷ್ಟ್ಯಗಳೆಂದರೆ ನಮ್ಮ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂತರ ಭಾವಚಿತ್ರದ ಜೊತೆಗೆ ಅವರ ಮಾಹಿತಿಗಳು ಇರುತ್ತದೆ ಅದರಿಂದ ನಮಗೆ ಅವರ ಶಕ್ತಿ ಸಾಮರ್ಥ್ಯಗಳ ಅರಿವಾಗಿ ನಮಗೆ ಅದನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ವೇಳೆ ಸಮಿತಿಯ ಸದಸ್ಯರಾದ ಸೌ. ಕೋಮಲಕಾಶಿ, ಸೌ. ಸುಧಾ ಮುರುಗನ್, ಸೌ. ಪ್ರತಿಭಾ ಮಹೇಶ್ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.