ನವದೆಹಲಿ: ಬೆಂಗಳೂರು ಮುಂಬೈನಂತಹ ಮಹಾ ನಗರಗಳಲ್ಲಿ ತುರ್ತು ಕಾರ್ಯಗಳಿಗೆ ಓಡಾಡಬೇಕು ಅಂದ್ರೆ ಆಟೋ, ಓಲಾ. ಊಬರ್‌ನಲ್ಲಿ ಓಡಾಡಬೇಕು. ಆದ್ರೆ ಕೆಲವೊಮ್ಮೆ ನಿಗದಿಕ್ಕಿಂತ ಹೆಚ್ಚು ದುಡ್ಡು ಕೇಳಿದಾಗ ಅನುಕೂಲ ಇದ್ದವರು ಕೊಟ್ಟು ಹೋಗ್ತಾರೆ, ಇಲ್ಲದವರು ಏನ್ ಮಾಡ್ತಾರೆ ಹೇಳಿ? ಅದರಲ್ಲೂ, ಮಳೆಗಾಲ, ಟ್ರಾಫಿಕ್ ಜಾಮ್‌ನಂತಹ ಸಂದರ್ಭದಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆಯನ್ನು ಖಾಸಗಿ ಕ್ಯಾಬ್ ಸೇವಾ ಕಂಪನಿಗಳು ಸೃಷ್ಟಿಸುತ್ತಿವೆ.
ಇದರ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಆದರೀಗ ಕೇಂದ್ರ ಸರ್ಕಾರವೇ ಪೀಕ್ ಅವರ್‌ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಅವಕಾಶ ಮಾಡಿಕೊಟ್ಟಿದೆ…
ಹೌದು. ಓಲಾ, ಊಬರ್ ನಂತರ ಅಗ್ರಿಗೇಟರ್ ಕಂಪನಿಗಳು ಪೀಕ್ ಅವರಗಳಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ದರ ಅಂದರೆ ಸರ್ಜ್ ಚಾರ್ಜ್ ವಿಧಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜುಲೈ 1ರಂದು ಆದೇಶ ಹೊರಡಿಸಿದೆ.