Live Stream

[ytplayer id=’22727′]

| Latest Version 8.0.1 |

State News

ನಮ್ಮ ಮೆಟ್ರೋಗೆ ಶಾಕ್, ಬಿಎಂಟಿಸಿ ರಾಕ್!

ನಮ್ಮ ಮೆಟ್ರೋಗೆ ಶಾಕ್, ಬಿಎಂಟಿಸಿ ರಾಕ್!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ಏರಿಕೆ ಮಾಡಿದ ಪರಿಣಾಮ ಬಿಎಂಟಿಸಿಗೆ ಭರ್ಜರಿ ಉಪಯೋಗ ಆಗುತ್ತಿದೆ, ಆದಾಯ ಬರೋಬ್ಬರಿ 7.25 ಕೋಟಿ ರೂ ಗೆ ಏರಿಕೆಯಾಗಿದೆ,
ಕಳೆದ ನಾಲ್ಕೈದು ತಿಂಗಳ ಹಿಂದೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿತ್ತು, ಇದ್ರಿಂದಾಗಿ ಪ್ರಯಾಣಿಕರು ಬಿಎಂಟಿಸಿ ಮೊರೆ ಹೋಗಿದ್ದಾರೆ, ಪರಿಣಾಮ ಬಿಎಂಟಿಸಿಗೆ ಭಾರಿ ಲಾಭ ಬಂದಿದೆ,
ಬಿಎಂಟಿಸಿಯಲ್ಲಿ ನಿತ್ಯ ಸರಾಸರಿ 40 ಲಕ್ಷ ಪ್ರಯಾಣಿಕರ ಓಡಾಟ ಇತ್ತು, ಆದಾಯ 6.90 ಕೋಟಿ ರೂ ಇತ್ತು, ಆದರೆ ಮೆಟ್ರೋ ದರ ಏರಿಕೆ ಬಳಿಕ ನಿತ್ಯ ಸರಾಸರಿ 42 ಲಕ್ಷ ಪ್ರಯಾಣಿಕರು ಓಡಾಡ್ತಿದ್ದು, ಆದಾಯ 7.25 ಕೋಟಿ ರೂ,ಗೆ ಏರಿಕೆ ಆಗಿದೆ,
ಅಷ್ಟೇ ಅಲ್ಲ ಈ ಹಿಂದೆ ನಿತ್ಯ ನಗರದಲ್ಲಿ 6,900 ಬಸ್‍ಗಳಿಂದ 54 ಸಾವಿರ ಟ್ರಿಪ್ ಮಾಡಲಾಗುತ್ತಿತ್ತು, ಸದ್ಯ ಹೆಚ್ಚುವರಿ 2 ಸಾವಿರ ಡಿಪೋದಲ್ಲಿದ್ದ ಬಸ್‍ಗಳನ್ನು ಕೂಡ ರಸ್ತೆಗಳಿಸುವ ಮೂಲಕ 8 ಸಾವಿರ ಟ್ರಪ್ ಹೆಚ್ಚಳ ಮಾಡಿ, 62 ಸಾವಿರಕ್ಕೆ ಏರಿಕೆ ಮಾಡಲಾಗಿದೆ,

ವೀ ಕೇ ನ್ಯೂಸ್
";