ಬೆಂಗಳೂರು: ಐಟಿ ಸಿಟಿ ಎಂದೇ ಹೆಸರುವಾಸಿಯಾದ ಬೆಂಗಳೂರು, ಉದ್ಯೋಗ ಮತ್ತು ಪಾರ್ಟಿ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ವಾರಾಂತ್ಯ ಬಂದರೆ ಸಾಕು, ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯುವಜನತೆ ಮೋಜು-ಮಸ್ತಿ ನಡೆಸುವುದು ಸಾಮಾನ್ಯ.
ಆದರೆ ಇತ್ತೀಚೆಗೆ, ವಿಶೇಷವಾಗಿ ಕಳೆದ ಆರು ತಿಂಗಳಲ್ಲಿ, ನಗರದ ಪಬ್-ಬಾರ್ ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪಬ್ ಸಿಟಿ ಎಂಬ ಪಟ್ಟ ಪಡೆದಿದ್ದ ಬೆಂಗಳೂರಿನಲ್ಲಿ ಇದು ತೀವ್ರ ಚರ್ಚೆಗೆ ಗುರಿಯಾಗುತ್ತಿದೆ.
ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇ. 50ರಷ್ಟು ಹೆಚ್ಚಳ, ಜೊತೆಗೆ ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟು, ಉದ್ಯೋಗದಲ್ಲಿ ಅಸ್ಥಿರತೆ, ಮತ್ತು ಕಾರ್ಪೊರೇಟ್ ವೆಚ್ಚದಲ್ಲಿ ಕಡಿತ ಈ ಎಲ್ಲವೂ ಮದ್ಯದಂಗಡಿಗಳ ಲಾಭದಾಯಕತೆಯನ್ನು ಕೆಡಿಸಿದೆ.
ಫುಡ್ & ಬೇವರೇಜ್ (F&B) ಉದ್ಯಮದ ಮೂಲಗಳ ಪ್ರಕಾರ, ಈ ಕಾರಣಗಳಿಂದಾಗಿ ಬಹುಪಾಲು ಬಾರ್‌ಗಳು ಮುಚ್ಚಲ್ಪಟ್ಟಿವೆ, ಮತ್ತಷ್ಟು ಬಾರ್‌ಗಳು ಮುಚ್ಚುವ ಹಂತದಲ್ಲಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.