Live Stream

[ytplayer id=’22727′]

| Latest Version 8.0.1 |

State News

“ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು” ಕುರಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

“ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು” ಕುರಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರು 30.07.2025: “ಬುಡಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಕೇವಲ ವಸ್ತುಸಂಗ್ರಹಾಲಯಗಳಿಗೆ ಸೀಮಿತಗೊಳಿಸುವ ಬದಲು ಶಿಕ್ಷಣ, ನೀತಿ ನಿರೂಪಣೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕೇಂದ್ರಕ್ಕೆ ತರುವುದು ಅವಶ್ಯಕ. ಬುಡಕಟ್ಟು ಜ್ಞಾನ ವ್ಯವಸ್ಥೆಯು ನಮಗೆ ಕೇವಲ ಭೂತಕಾಲದ ನೆನಪಲ್ಲ, ಬದಲಾಗಿ ಭವಿಷ್ಯದ ದಿಕ್ಕಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಮೌಂಟ್ ಕಾರ್ಮೆಲ್ ಕಾಲೇಜು (ಸ್ವಾಯತ್ತ)ನಲ್ಲಿ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ “ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು” ಕುರಿತು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ” ಭಾರತದಲ್ಲಿ 700 ಕ್ಕೂ ಹೆಚ್ಚು ಗುರುತಿಸಲ್ಪಟ್ಟ ಬುಡಕಟ್ಟು ಜನಾಂಗಗಳಿವೆ. ಈ ಸಮುದಾಯಗಳ ಸಂಸ್ಕೃತಿ, ಭಾಷೆಗಳು, ಹಾಡುಗಳು, ನೃತ್ಯಗಳು, ಜಾನಪದ ಕಥೆಗಳು, ಸಾಮಾಜಿಕ ವ್ಯವಸ್ಥೆಗಳು ಮತ್ತು ಜೀವನಶೈಲಿಗಳು ವೈವಿಧ್ಯಮಯ ಭಾರತದ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಮತ್ತು ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನ ಜ್ಞಾನದ ವಾಹಕಗಳಾಗಿವೆ” ಎಂದರು.

” ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ “ಬುಡಕಟ್ಟು ಗೌರವ ಸರಣಿ”ಯ ಅಡಿಯಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ “ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಪದ್ಧತಿಗಳು” ಕುರಿತ ಸಮ್ಮೇಳನವು ಬಹಳ ಸಮಯೋಚಿತ ಮತ್ತು ಪ್ರಸ್ತುತವಾಗಿದೆ.. ನೀರು, ಅರಣ್ಯ ಮತ್ತು ಭೂಮಿಯ ರಕ್ಷಕ ಬಿರ್ಸಾ ಮುಂಡಾ, ಭಾರತೀಯ ಬುಡಕಟ್ಟು ಸಮಾಜಕ್ಕೆ ಸ್ವಾಭಿಮಾನ, ಸಂಘಟಿತ ಪ್ರತಿರೋಧ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಮಾರ್ಗವನ್ನು ತೋರಿಸಿದವರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಹೊರಾಡಿ,  ಬುಡಕಟ್ಟು ಸಮಾಜದ ಸ್ವಾಭಿಮಾನವನ್ನು ಪುನಃಸ್ಥಾಪಿಸಿದರು. ಅವರ ನೇತೃತ್ವದ “ಉಲ್ಗುಲಾನ್” ಕ್ರಾಂತಿಯು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಳುವಳಿಯೂ ಆಗಿತ್ತು. ಅವರು ಸಾಂಸ್ಕೃತಿಕ ಸ್ವರಾಜ್ಯದ ಪ್ರವರ್ತಕರಾಗಿದ್ದರು. ಅವರು ಭಾರತದ ಬುಡಕಟ್ಟು ಸಂಪ್ರದಾಯಗಳು, ಭಾಷೆ, ನಂಬಿಕೆ ಮತ್ತು ಜೀವನಶೈಲಿಯನ್ನು ಉಳಿಸಲು ಹೋರಾಡಿದರು” ಎಂದು ಹೇಳಿದರು.

“ನಮ್ಮ ಬುಡಕಟ್ಟು ಜನಾಂಗಗಳು ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲೆ ಸಮತೋಲಿತ ಸಹಬಾಳ್ವೆಗೆ ಅದ್ಭುತ ಉದಾಹರಣೆಯಾಗಿವೆ. ಜಾನಪದ ಹಾಡುಗಳು ಮತ್ತು ಕಥೆಗಳಲ್ಲಿ ಹುದುಗಿರುವ ಪರಿಸರ, ಇತಿಹಾಸ, ಹಬ್ಬಗಳು, ನಂಬಿಕೆಗಳು ಮತ್ತು ಜ್ಞಾನ ವ್ಯವಸ್ಥೆಗಳೊಂದಿಗಿನ ಅವರ ಸಂಬಂಧವು ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೂ ಸಹ ಆಳವಾದ ಅರ್ಥವನ್ನು ಹೊಂದಿದೆ. ಬಿದಿರು, ಮರ, ಹುಲ್ಲು, ಜೇಡಿಮಣ್ಣು ಇತ್ಯಾದಿಗಳಿಂದ ತಯಾರಿಸಿದ ದಿನನಿತ್ಯದ ಬಳಕೆಯ ವಸ್ತುಗಳು, ಆವರ್ತನ ಕೃಷಿ, ಅರಣ್ಯ ಆಧಾರಿತ ಕೃಷಿ, ಸಾವಯವ ಗೊಬ್ಬರದ ಬಳಕೆ ಮತ್ತು ಮರದ ತುದಿ, ತುಳಸಿ, ಗಿಲೋಯ್, ಸಲೈ, ಮಹುವಾ ಮುಂತಾದ ಔಷಧಿಗಳ ಜ್ಞಾನ, ಬುಡಕಟ್ಟು ಸಮಾಜದ ಸ್ಥಳೀಯ ಪದ್ಧತಿಗಳು ಕೇವಲ ಸಂಪ್ರದಾಯಗಳಲ್ಲ, ಜೀವನ ವಿಧಾನಗಳಾಗಿವೆ. ‘ಸ್ವದೇಶಿ’ ಎಂದರೆ ‘ಸ್ಥಳೀಯ ಉತ್ಪಾದನೆ’ ಮಾತ್ರವಲ್ಲ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಪ್ರಕೃತಿಯೊಂದಿಗೆ ಸಮತೋಲನ ಕೂಡ” ಎಂದು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ, ಪ್ರೊಫೆಸರ್ ಕೆ ಆರ್ ಜಲಜ, ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಸುಪೀರಿಯರ್ ಸಿಸ್ಟರ್ ಫ್ರಿಡೋಲಿನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

VK DIGITAL NEWS:

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";