Live Stream

[ytplayer id=’22727′]

| Latest Version 8.0.1 |

State News

ಆಟೋ ಚಾಲಕರಿಗೆ ಆರ್‍ಟಿಓ ಶಾಕ್ ಬೆಂಗಳೂರನಲ್ಲಿ 100 ಕ್ಕೂ ಹೆಚ್ಚು ಆಟೋ ಸೀಜ್!

ಆಟೋ ಚಾಲಕರಿಗೆ ಆರ್‍ಟಿಓ ಶಾಕ್ ಬೆಂಗಳೂರನಲ್ಲಿ 100 ಕ್ಕೂ ಹೆಚ್ಚು ಆಟೋ ಸೀಜ್!

ಆಟೋ ಚಾಲಕರಿಗೆ ಆರ್‍ಟಿಓ ಶಾಕ್ ಬೆಂಗಳೂರನಲ್ಲಿ 100 ಕ್ಕೂ ಹೆಚ್ಚು ಆಟೋ ಸೀಜ್!
ಬೆಂಗಳೂರು: ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಆಟೋ ಚಾಲಕರು ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಗ್ರಾಹಕರಿಂದ ದುಪ್ಟಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಆರ್‍ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ,
ಆ್ಯಪ್ ಆಧಾರಿತ ಮತ್ತು ಇನ್ನಿತರ ಆಟೋ ಚಲಾಕರು ಮೀಟರ್ ಹೆಸರಿನಲ್ಲಿ ಗ್ರಾಹಕರಿಂದ ಹಗಲು ದರೋಡೆ ಮಾಡಿದರೆ ಅಂತಹ ಚಾಲಕರ ಆಟೋ ಸೀಜ್ ಮಾಡಿ ಅವರ ಪರ್ಮೀಟ್ ರದ್ದು ಪಡಿಸುವಂತೆ ಸಾರಿಗೆ ಇಲಾಖೆ ಕಮಿಷನರ್ ಗೆ ಸಚಿವ ರಾಮಲಿಂಗರೆಡ್ಡಿ ಸೂಚಿಸಿದ್ದಾರೆ,
ಈ ಬಗ್ಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಶೋಭಾ ಪ್ರತಿಕ್ರಿಯಿಸಿದ್ದು ಆಟೋ ಚಾಲಕರ ವಿರುದ್ಧ ಸಾರ್ವಗಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ, ಈ ಕಾರ್ಯಾಚರಣೆಯಲ್ಲಿ ದುಪ್ಪಟ್ಟು ದರ ಹಾಗೂ ದಾಖಲೆಗಳಿಲ್ಲದ 250 ಕ್ಕೂ ಅಧಿಕ ಆಟೋ ಚಾಲಕರ ಮೇಲೆ ದಾಖಲೆ ಮಾಡಿಕೊಳ್ಳಲಾಗಿದ್ದು, 100 ಕ್ಕೂ ಅಧಿಕ ಆಟೋ ಸೀಜ್ ಮಾಡಲಾಗಿದೆ, ದರ ಏರಿಕೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಅಗ್ರಿಗೇಟರ್ ಕಂಪನಿಗಳಳ ಮೇಲೂ ನಾವು ನಿಗಾ ಇಡುತ್ತಿದ್ದೇವೆ ಎಂದು ಹೇಳಿದ್ದಾರೆ,

ವೀ ಕೇ ನ್ಯೂಸ್
";