ಬೆಂಗಳೂರು: ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ನ ವ್ಯವಸ್ಧಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ರಾಜೀನಾಮೆ ನೀಡಿದ್ದು, ಆಡಳಿತ ಮಂಡಳಿ ಸಹ ಭಾನುವಾರ ಅಂಗೀಕಾರ ಮಾಡಿದೆ, ಇನ್ನು ಖಾಲಿ ಇರುವ ಎರಡೂ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಬ್ಯಾಂಕ್ ಶೋಧನಾ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದೆ,
ರಾಜೀನಾಮೆ ಅಂಗೀಕರಿಸಿರುವ ಬ್ಯಾಂಕ್ ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರು ಬ್ಯಾಂಕಿನ ಎಂಡಿ ಮತ್ತು ಸಿಇಒ ಸ್ಧಾನಕ್ಕೆ ರಾಜೀನಾಮೆ ನೀಡಲು ವೈಯುಕ್ತಿಕ ಕಾರಣಗಳನ್ನು ನೀಡಿದ್ದಾರೆ ಹಾಗೂ ಮುಂಬೈಗೆ ಮರಳಿ ಹೋಗುವ ನಿರ್ಧಾರವನ್ನು ಸಹ ಉಲ್ಲೇಖಿಸಿದ್ದಾರೆ, ಹಾಗಾಗಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದಿದೆ, ಹಾಗೆಯೇ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಕೂಡ ಮಂಗಳೂರಿಗೆ ಸ್ಧಳಾಂತರಗೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣ ಹಾಗೂ ಅನೇಕ ವೈಯಕ್ತಿಕ ಕಾರಣಗಳನ್ನು ನೀಡಿದ್ದು, ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಜುಲೈ 31 2025 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ,
ಕೆಲ ಮಾಹಿತಿಗಳ ಪ್ರಕಾರ ಕಳೆದ ತಿಂಗಳಷ್ಟೇ ಆಡಿಟಿಂಗ್ ವೇಳೆ ಒಂದೂವರೆ ಕೋಟಿ ರೂ ವಹಿವಾಟಿನಲ್ಲಿ ವ್ಯತ್ಯಾಸ ಆಗಿರುವುದು ಬೆಳಕಿಗೆ ಬಂದಿದೆ, ಅದರ ಜೊತೆಗೆ ಕನ್ಸಲ್ಟೆಂಟ್ ಸೇವೆ ಹಾಗೂ ಇತರ ಉದ್ದೇಶಗಳಿಗೆ ನಿರ್ದೇಶಕರು 1.53 ಕೋಟಿ ರೂ ಖರ್ಚು ಮಾಡಿದ್ದರು, ಇದಕ್ಕೆ ಅನುಮತಿ ಇರಲಿಲ್ಲ, ಹಾಗಾಗಿ ರಾಜೀನಾಮೆ ನೀಡಿರಬಹುದು ಎನ್ನಲಾಗುತ್ತಿದೆ,
ಇನ್ನು ವ್ಯವಸ್ಧಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ರಾಜೀನಾಮೆ ನೀಡಿದ ನಂತರ ಸೋಮವಾರ ಕರ್ಣಾಟಕ ಬ್ಯಾಂಕ್ ಷೇರು ಬೆಲೆ ಶೇ.84 ರಷ್ಟು ಕುಸಿದಿದೆ, ಮೇ 27 ರಂದು ಆಕ್ಸಿನ್ ಸೆಕ್ಯುರಿಟೀಸ್ ಪ್ರಕಟಿಸಿದ ಸ್ಟಾಕ್ ರಿಸರ್ಚ್ ವರದಿಯ ಪ್ರಕಾರ ಬ್ರೋಕರೇಜ್ ಕರ್ಣಾಟಕ ಬ್ಯಾಂಕ್ ಷೇರುಗಳ ಮೇಲೆ ರೇಟಿಂಗ್ ನೀಡಿದ್ದು, 270 ರೂಗಳ ಗುರಿ ಬೆಲೆಯನ್ನು ನಿಗದಿಪಡಿಸಲಾಗಿತ್ತು ಅದರೆ ಈಗ 190 ಕ್ಕೆ ಇಳಿದಿದೆ,
Veekay News > State News > ಕರ್ಣಾಟದ ಬ್ಯಾಂಕ್ ನಲ್ಲಿ ರಾಜೀನಾಮೆ ಪರ್ವ, ಕುಸಿದ ಬ್ಯಾಂಕ್ ಷೇರು
ಕರ್ಣಾಟದ ಬ್ಯಾಂಕ್ ನಲ್ಲಿ ರಾಜೀನಾಮೆ ಪರ್ವ, ಕುಸಿದ ಬ್ಯಾಂಕ್ ಷೇರು
ವೀ ಕೇ ನ್ಯೂಸ್30/06/2025
posted on





















