ಬೆಂಗಳೂರು : ವಿದುಷಿ ಶ್ರೀಮತಿ ಗಾಯತ್ರಿ ಮಯ್ಯ ಅವರ ಪುತ್ರಿ ಹಾಗೂ ಶಿಷ್ಯೆಯಾಗಿರುವ ಹತ್ತು ವರ್ಷದ ಬಾಲಪ್ರತಿಭೆ ಪಿ. ಆದ್ಯಾ ಮಯ್ಯ, ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ತಮೋಹ ಆರ್ಟ್ಸ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದಳು.
ದಶರೂಪ ವೈಭವಂ ಎಂಬ ಭವ್ಯ ನೃತ್ಯರೂಪಕದಲ್ಲಿ , ಆದ್ಯಾ ಭಕ್ತ ಪ್ರಹ್ಲಾದ ಮತ್ತು ಶ್ರೀಕೃಷ್ಣನ ಕಾಳಿಂಗ ನೃತ್ಯ ರೂಪವನ್ನು ಅತೀವ ಮನೋಹರವಾಗಿ ಪ್ರದರ್ಶಿಸಿದಳು. ತನ್ನ ಭಾವಭಂಗಿ ಮತ್ತು ನೃತ್ಯಕೌಶಲ್ಯದಿಂದ ಪ್ರೇಕ್ಷಕರ ಮನಗೆದ್ದಳು.
ಇದರೊಂದಿಗೆ ಅವಳು ಕೊನ್ನಕ್ಕೋಲ್ ಕಲೆಗೂ ತೊಡಗಿ, ತಮ್ಮ ಗುರು ಶ್ರೀ ಕೊನ್ನಕ್ಕೋಲ್ ಸೋಮಶೇಖರ ಜೋಯಿಸ್ ಅವರ ಮಾರ್ಗದರ್ಶನದಲ್ಲಿ ಆದಿತಾಳ ತನಿ ಆವರ್ತನವನ್ನು ನಿರೂಪಿಸಿದಳು. ಈ ಅಪೂರ್ವ ಪ್ರದರ್ಶನವು ಪ್ರೇಕ್ಷಕರಿಂದಲೂ, ಮಾನ್ಯ ಮುಖ್ಯ ಅತಿಥಿಗಳಿಂದಲೂ ಅಪಾರ ಮೆಚ್ಚುಗೆಯನ್ನು ಗಳಿಸಿತು.