ಚಾಮರಾಜನಗರ: ರಾಮಕೃಷ್ಣ ಹೆಗಡೆಯವರು ದೇಶ ಕಂಡ ಅಪರೂಪದ ರಾಜಕಾರಣಿ .ಸಂಸ್ಕೃತಿ, ಪರಂಪರೆಯ ಪೋಷಕರಾಗಿ ತಮ್ಮ ಜ್ಞಾನದಿಂದಲೇ ರಾಜ್ಯ,ದೇಶ ಕಟ್ಟಿದ ಶ್ರೇಷ್ಠರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು , ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ರಾಜಕೀಯ ಮುತ್ಸದಿ ಶ್ರೀರಾಮಕೃಷ್ಣ ಹೆಗಡೆಯವರ ಕೊಡುಗೆಗಳು ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಾತಿ ಬಲ, ಹಣ ಬಲವಿಲ್ಲದ ರಾಜಕಾರಣದಲ್ಲಿ ದೇಶ ಕಂಡ ಅಪರೂಪದ ಶ್ರೇಷ್ಠ ಚಿಂತಕರು ರಾಮಕೃಷ್ಣ ಹೆಗ್ಗಡೆಯವರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ,ಕೇಂದ್ರ ಮಂತ್ರಿಗಳಾಗಿ ಸೇವೆ ಸಲ್ಲಿಸಿ ತಮ್ಮ ಜ್ಞಾನ ,ಬುದ್ಧಿವಂತಿಕೆ ,ಸಂಘಟನೆ ಹಾಗೂ ಎಲ್ಲ ಸಮುದಾಯಗಳ ಪ್ರೀತಿಸುವ ಮೂಲಕ ಸೇವೆ ಸಲ್ಲಿಸಿದ ಮಹಾವ್ಯಕ್ತಿ. ಸಂಸ್ಕೃತಿ, ಸಾಹಿತ್ಯ ನೃತ್ಯ, ಕ್ರೀಡೆ ,ಕ್ಷೇತ್ರಗಳಿಗೆ ಬಹಳ ಗೌರವ ನೀಡಿದ ವ್ಯಕ್ತಿ. ರೈತರ ಸಾಲ ಮನ್ನಾ ಅವರ ಅತ್ಯಂತ ಪ್ರಮುಖವಾದ ರಾಜಕೀಯ ನಿರ್ಧಾರ. ರೈತರಿಗೆ ಕೊಡುಗೆ ನೀಡಿದ ವ್ಯಕ್ತಿ. ನಾಡು ನುಡಿಗಳ ಭಾಷೆಯ ಬಗ್ಗೆ ಅಪಾರ ಗೌರವ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಹೆಗಡೆಯವರು ಭಾರತದ ರಾಜಕಾರಣದಲ್ಲಿ ಪ್ರಾಮಾಣಿಕ ಭದ್ರತೆ ಹಾಗೂ ನಿಷ್ಠೆಗೆ ಹೆಸರಾದವರು .ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿಯ ಹೋರಾಟದಲ್ಲಿ ಭಾಗವಹಿಸಿ ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆ ವಾಸ ಅನುಭವಿಸಿದರು . ರಾಜಕಾರಣದಲ್ಲಿ ಪ್ರಾಮಾಣಿಕ ವ್ಯಕ್ತಿಗಳನ್ನು ಬೆಳೆಸಿದ ಹೆಗಡೆಯವರು ರಾಜಕಾರಣದ ದಿಟ್ಟ ನಡೆಗೆ ಹೆಸರುವಾಸಿಯಾದವರು. ಭಾರತದ ಮಾಧ್ಯಮ ಕ್ಷೇತ್ರದ ಅನುಭವಿ ತಂಡಗಳು ಅವರ ಸಂದರ್ಶನಗಳನ್ನು ಮಾಡಿದಾಗ ಅಪಾರ ಅನುಭವದ ರಾಶಿಯೇ ಅವರಿಂದ ಬರುತಿತ್ತು. ದೇಶದ ಅಭಿವೃದ್ಧಿಗೆ ಅವರ ಜ್ಞಾನವನ್ನು ನೀಡಿದ ಮಹಾನ್ ವ್ಯಕ್ತಿ ಎಂದು ತಿ ಳಿಸಿದರು. ಚಾಮರಾಜ ನಗರಕ್ಕೆ ಹಲವಾರು ಬೇಟೆ ನೀಡಿದ ರಾಮಕೃಷ್ಣ ಹೆಗಡೆಯವರ ನೆನಪು ಸದಾ ಇರುತ್ತದೆ ಎಂದರು.
ಉದ್ಘಾಟನೆಯನ್ನು ನೆರವೇರಿಸಿದ ಪ್ರಸಿದ್ಧ ಜನಪದ ಕಲಾವಿದರಾದ ಶ್ರೀ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಭಾರತದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದವರು. ಕೃಷಿ, ನೀರಾವರಿ ,ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳಲ್ಲಿ ಅಪಾರವಾದ ಅಭಿವೃದ್ಧಿ ಸಾಧಿಸಿದವರು ಅನಂತನಾಗ್ ಮತ್ತು ಶಂಕರ್ ನಾಗ್ ರವರ ಚಿಂತನೆಯ ಮೂಲಕ ರಾಮಕೃಷ್ಣ ಹೆಗಡೆಯವರು ಮೆಟ್ರೋ ಯೋಜನೆಯ .ಮಾರ್ಗದರ್ಶನ ನೀಡಿದರು. ಇಂದು ಬೆಂಗಳೂರು ಇಡೀ ಜಗತ್ತಿನಲ್ಲಿ ಮಾದರಿಯಾದ ನಗರವಾಗಿ ರೂಪುಕೊಳ್ಳಲು ಹೆಗಡೆಯವರು ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾಪುರುಷೋತ್ತಮ ರಾಜಕಾರಣ ಇಂದು ಬಹಳ ಕಷ್ಟದಾಯಕವಾದದ್ದು. ಪ್ರಗತಿಪರ ಹಾಗೂ ದೂರದೃಷ್ಟಿಯ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆಯಂತಹವರ ವ್ಯಕ್ತಿತ್ವದ ವ್ಯಕ್ತಿಗಳು ಹೆಚ್ಚಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ, ರವಿಚಂದ್ರ ಪ್ರಸಾದ್, ಗಾಯಕರಾದ ಮುತ್ತುರಾಜ್, ರಾಜಣ್ಣ ,ಲೋಕೇಶ್ ನಾಯಕ ಇದ್ದರು.