ಬೆಂಗಳೂರು: ಶಿಕ್ಷಣ ರತ್ನ ರಾಷ್ಟ್ರೀಯ ಶೈಕ್ಷಣಿಕ ಕನ್ನಡ ಮತ್ತು ಆಂಗ್ಲ ಮಾಸಪತ್ರಿಕೆಯು (Shikshana Ratna national educational monthly magazine in Kannada and English) ಪ್ರತಿವರ್ಷದಂತೆ ಈ ಬಾರಿಯೂ ಅರ್ಹ ಶಿಕ್ಷಕರಿಗೆ ಪ್ರತಿಷ್ಠಿತ ವಾರ್ಷಿಕ ಪುರಸ್ಕಾರ (Prestigious Shikshana Ratna Annual Awards) ಸಮಾರಂಭ ಹಮ್ಮಿಕೊಂಡಿದೆ. 2025ನೇ ಶೈಕ್ಷಣಿಕ ಸಾಲಿನ ಶ್ರೇಷ್ಠ ಸಾಧಕ ಪುರಸ್ಕಾರ ಸಂದರ್ಭದಲ್ಲಿ ಶಿಕ್ಷಕರನ್ನು ಗುರುತಿಸಿ, ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗಿನ ಎಲ್ಲ ಶಿಕ್ಷಕವೃಂದದವರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು.
ಶಿಕ್ಷಕರ ದಿನಾಚರಣೆ ಅಂಗವಾಗಿ ಇದೇ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಶಿಕ್ಷಣ ರತ್ನ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಎಲ್ಲ ಶಿಕ್ಷಕರು “ಮೊಬೈಲ್ ಬಿಡಿ-ಪುಸ್ತಕ ಹಿಡಿಯಿರಿ” ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳೋಣ.
ಇದೇ ಸಂದರ್ಭದಲ್ಲಿ ಮಾನ್ಯ ಶಿಕ್ಷಣ ಸಚಿವರು, ಶಾಸಕರು, ಇಲಾಖೆ ಉನ್ನತಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುತ್ತಾರೆ. ಶಿಕ್ಷಕರಿಗೆ ಸಂಬಂಧಪಟ್ಟ ವಿಚಾರಗಳ ಕುರಿತು ತಜ್ಞರು ವಿಚಾರಗೋಷ್ಠಿ ನಡೆಸಿಕೊಡಲಿದ್ದಾರೆ. ವಿಶೇಷ ಸ್ಮರಣ ಸಂಚಿಕೆಯು ಬಿಡುಗಡೆಯಾಗಲಿದೆ. ಆಸಕ್ತ ಶಿಕ್ಷಕರು ತಮ್ಮ ಸ್ವವಿವರಗಳನ್ನು ಶಿಕ್ಷಣ ರತ್ನ ಪತ್ರಿಕಾ ಕಚೇರಿಗೆ ಕಳುಹಿಸಿಕೊಡಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕೆ ಎಸ್ ವಿಜಯಕುಮಾರ್ – 92431 92802
ಮತ್ತು ಬಿ ಕೆ ಪ್ರಸನ್ನ – 94481 19247
ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 20, 2025.
- ವಿಳಾಸ : 554/2, 2ನೇ ಮಹಡಿ,ಸಂಪಿಗೆ ರಸ್ತೆ 13ನೇ ಅಡ್ಡ ರಸ್ತೆ, ಮಲ್ಲೇಶ್ವರ, ಬೆಂಗಳೂರು -03
evarthajala@gmail.com