ಬೆಂಗಳೂರು : ಗೆಜ್ಜೆ ಪೂಜೆ (Gejje Pooje) ಎನ್ನುವುದು ನರ್ತಕಿಯ ಜೀವನದ ಮಹತ್ತರ ಘಟ್ಟ. ಗೆಜ್ಜೆಪೂಜೆಯ ಮೂಲಕ ತಮ್ಮ ನೃತ್ಯ ಜೀವನದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ. ಹೀಗೊಂದು ಗೆಜ್ಜೆ ಪೂಜೆಯು ಶ್ರೀ ಗಣೇಶ ನೃತ್ಯಾಲಯ (Ganesha Nrithyalaya) ಅರಿಶಿನಕುಂಟೆ ಸಂಸ್ಥೆಯ ನಿರ್ದೇಶಕರು ಆದ ಶ್ರೀ ಎಂ ಡಿ ಗಣೇಶ್ (Sri M.D. Ganesh) ಮತ್ತು ಶ್ರೀಮತಿ ಭಾವನಾ ಗಣೇಶ್ (Smt. Bhavana Ganesh) ರವರು, ತಮ್ಮ ಶಿಷ್ಯೆಯಾದ ಕು|| ಪ್ರತೀಕ್ಷಾಳ ಗೆಜ್ಜೆ ಪೂಜೆಯನ್ನು ಕಲಾಗ್ರಾಮ ಸಭಾಂಗಣದಲ್ಲಿ ನೆರೆವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ|| ಸುಮನಾ ಆರ್. ನಾಟ್ಯಚಾರ್ಯ. ಸ್ವಾಮಿ ಎಂ, ಕ್ಯಾಪ್ಟನ್. ಶ್ರೀ ಮಹಾಬಲೇಶ್ವರ ತುಂಗಾ ಮತ್ತು ವೈದ್ಯ ದಂಪತಿಗಳಾದ ಡಾ|| ಗೋಪಾಲ್ ಮತ್ತು ಡಾ|| ನಿಶ್ಚಲ ಗೋಪಾಲ್ ರವರು ಉಪಸ್ಥಿತರಿದ್ದರು. ವೈವಿದ್ಯಮಯ ಬೆಳಕು, ಮಾಧುರ್ಯವಾದ ಸಂಗೀತದಿಂದ ಕು|| ಪ್ರತೀಕ್ಷಾಳ ನೃತ್ಯ ಪ್ರಸ್ತುತಿಯು ಕಲಾರಸಿಕರ ಮನಸೊರೆಗೊಂಡಿತ್ತು.



















