Live Stream

[ytplayer id=’22727′]

| Latest Version 8.0.1 |

Bengaluru UrbanState News

ಬೆಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪಂಕಜ್ ಕುಮಾರ್ ಪಾಂಡೆ

ಬೆಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪಂಕಜ್ ಕುಮಾರ್ ಪಾಂಡೆ

*ಬೆಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಷನ್ (BANGALORE MANAGEMENT ASSOCIATION) ಅಧ್ಯಕ್ಷರಾಗಿ ಕೆಪಿಟಿಸಿಎಲ್  (KPTCL MD) ಎಂಡಿ ಪಂಕಜ್ ಕುಮಾರ್ ಪಾಂಡೆ (PANKAJ KUMAR PANDEY) ಅವಿರೋಧ ಆಯ್ಕೆ: ಉಪಾಧ್ಯಕ್ಷರಾಗಿ ಬೆಸ್ಕಾಂ ಎಂಡಿ (BESCOM MD)  ಡಾ.ಶಿವಶಂಕರ್ (DR. SHIVASHANKAR ) ಬಿಎಂಎನಲ್ಲಿ ಮೂವರು ಐಎಎಸ್ ಅಧಿಕಾರಿಗಳು ಇದೀಗ ಪದಾಧಿಕಾರಿಗಳು* 

ಬೆಂಗಳೂರು,ನ.3; ಬರುವ 2025 – 26 ರ ಸಾಲಿಗೆ ಬೆಂಗಳೂರು ಮ್ಯಾನೆಜ್ಮೆಂಟ್ ಅಸೋಸಿಯೇಷನ್ – ಬಿಎಂಎ ಅಧ್ಯಕ್ಷರಾಗಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ [ಐಎಎಸ್] ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಆರ್. ಸರ್ಕಲ್ ನ ಬೆಸ್ಕಾಂ ಕಾರ್ಪೋರೆಟ್ ಕಚೇರಿಯ ಬೆಳಕು ಭವನದಲ್ಲಿ ಆಯೋಜಿಸಲಾದ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ಅತ್ಯಂತ ಪ್ರತಿಷ್ಟಿತ ಸಂಘಟನೆಯಾದ ಬಿಎಂಎ ಉಪಾಧ್ಯಕ್ಷರಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಶಂಕರ್ [ಐಎಎಸ್], ಉದ್ಯಮಿ ವಿ. ಶ್ರೀನಿವಾಸ ಮೂರ್ತಿ ಉಪಾಧ್ಯಕ್ಷರಾಗಿ, ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಶ [ಐಎಎಸ್] ಗೌರವ ಕಾರ್ಯದರ್ಶಿ ಹಾಗೂ ಬಿಎಂಆರ್ ಸಿಎಲ್ ಸಲಹೆಗಾರರಾದ ವಸಂತ್ ರಾವ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ಮೂವರು ಹಿರಿಯ ಐಎಎಸ್ ಅಧಿಕಾರಿಗಳು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಬಿಎಂಎ ಇತಿಹಾಸದಲ್ಲಿ ಸಾಕಷ್ಟು ಮಂದಿ ಐಎಎಸ್ ಅಧಿಕಾರಿಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇಂದು ಪಂಕಜ್ ಕುಮಾರ್ ಪಾಂಡೆ ಅವರು ಸಹ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷರಾದ ಪ್ಲೈಟ್ ಲೆಪ್ಟಿನೆಂಟ್ ಕೆ.ಪಿ. ನಾಗೇಶ್ ಅವರಿಂದ ಪಾಂಡೆ ಅವರು ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಪಂಕಜ್ ಕುಮಾರ್ ಪಾಂಡೆ, ಬೆಂಗಳೂರು ಮ್ಯಾನೆಜ್ಮೆಂಟ್ ಅಸೋಸಿಯೇಷನ್ – ಬಿಎಂಎ ವೃತ್ತಿಪರ ಸಂಸ್ಥೆಯಾಗಿದ್ದು, 1953 ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಆಲ್ ಇಂಡಿಯಾ ಮ್ಯಾನೆಜ್ಮೆಂಟ್ ಅಸೋಸಿಯೇಷನ್ ನಿಂದ ಬಿಎಂಎ ಮಾನ್ಯತೆ ಪಡೆದಿದ್ದು, ಆಡಳಿತಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ತರಬೇತಿ, ವೃತ್ತಿಪರರನ್ನು ಸಬಲೀಕರಣಗೊಳಿಸುವ, ಸ್ಫೂರ್ತಿದಾಯಕ ನಾಯಕತ್ವವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊಸ ತಂಡದೊಂದಿಗೆ ತಾವು ರಚನಾತ್ಮಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಬಿಎಂಎ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಉದ್ಯಮಿ ವಿ. ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮ ಸಂಸ್ಥೆಗೆ ಅತ್ಯುತ್ತಮ ಪರಂಪರೆ ಇದ್ದು, ಇದು ಮತ್ತೆ ಭವ್ಯ ಇತಿಹಾಸವನ್ನು ಸೃಷ್ಟಿಸಲಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರು ಆಡಳಿತ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೀ ಕೇ ನ್ಯೂಸ್
";