ವಿಜಯನಗರ ಉಪ ವಿಭಾಗ, ಮಾಗಡಿ ರಸ್ತೆ ಪೊಲೀಸ್ ಠಾಣೆ
ದಿನಾಂಕ:25-09-2025 ರಂದು ಮಹೇಶ್ ಪ್ರಸಾದ್ ಎಂಬುವವರು ಅಮೇರಿಕಾದಿಂದ ಬೆಂಗಳೂರಿಗೆ ಬಂದಿದ್ದು, ಮಾರ್ಗ ಮದ್ಯ ರಾಜ್‌ಕುಮಾರ್ ರಸ್ತೆ ಬಳಿ ಕಾರಿನಿಂದ ಇಳಿಯುವ ಸಂದರ್ಭದಲ್ಲಿ ತಮ್ಮ ಪರ್ಸನ್ನು ಕಳೆದುಕೊಂಡಿದ್ದು, ಅದರಲ್ಲಿ ವಿದೇಶಿ ಕರೆನ್ಸಿ, ಕ್ರೇಡಿಟ್ ಕಾರ್ಡ್ ಹಾಗೂ ಮುಖ್ಯವಾದ ದಾಖಲಾತಿಗಳು ಇದ್ದವೆಂದು, ಪರ್ಸನ್ನು ಪತ್ತೆಮಾಡಿ ಕೊಡಬೇಕೆಂದು ಠಾಣೆಗೆ ಬಂದು ಮೌಖಿಕವಾಗಿ ತಿಳಿಸಿದಾಗ ಪಿ.ಐ ರವರು ಠಾಣೆಯ ಸಿಬ್ಬಂದಿಗಳಾದ ಕಾರ್ತಿಕ್ ಪ್ರಸಾದ್ ಪಿಎಸ್‌ಐ ಕುಮಾರ್ ಕೆ.ಆರ್ ಎಎಸ್‌ಐ, ರವಿಕುಮಾರ್ ಆರ್ ಎ ಹೆಚ್‌ಸಿ, ಪ್ರವೀಣ್ ಕುಮಾರ್ ವಿ ಆರ್ ಹೆಚ್‌ಸಿ, ನಾಗರಾಜ್ ಟಿ ಎಸ್ ಹೆಚ್‌ಸಿ ರವರಿಗೆ ಪತ್ತೆ ಮಾಡಿ ಕೊಡುವಂತೆ ಸೂಚಿಸಿದ್ದು, ಅವರುಗಳು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿ ಪರ್ಸನ್ನು ಪತ್ತೆ ಮಾಡಿ ಮಹೇಶ್ ಪ್ರಸಾದ್ ರವರನ್ನು ಕರೆಸಿ ಅವರ ಪರ್ಸನ್ನು ವಾಪಸ್ಸು ನೀಡಿರುತ್ತಾರೆ.

ಮಹಿಳಾ ಪೊಲೀಸ್ ಠಾಣೆ, ಉತ್ತರ ವಿಭಾಗ.
ಮಹಿಳಾ ಪೊಲೀಸ್ ಠಾಣೆ, ಉತ್ತರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಹೆಚ್‌ಸಿ-ಶ್ರೀಮತಿ. ಶಕುಂತಲಾ ರವರು, ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ “ಮಕ್ಕಳ ಮೇಲಿನ ದೌರ್ಜನ್ಯ” ಪ್ರಕರಣ ತಡೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಮೂಡಿಸಿರುತ್ತಾರೆ.

ಉತ್ತರ ವಿಭಾಗದ, ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆ.
ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆಯ ಹೆಚ್‌ಸಿ ಕೆಂಪರಾಮಯ್ಯ ಮತ್ತು ರಾಜು ಕಲಾಲ್ ರವರುಗಳು ಅವರ ಠಾಣೆಯ ಪ್ರಕರಣವೊಂದರಲ್ಲಿ ಆರೋಪಿ ಸತೀಶ್ @ ಗೊಣ್ಣೆ ಬಿನ್ ಭೀಮಯ್ಯ ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ, ಈ ಆರೋಪಿಯ ವಿರುದ್ಧ ಘನ ನ್ಯಾಯಾಲಯವು ಉದ್ಘೋಷಣೆಯನ್ನು ಹೊರಡಿಸಿದ್ದು, ಸದರಿ ಆರೋಪಿಯನ್ನು ದಿನಾಂಕ:23/09/2025 ರಂದು ಕೆಂಪರಾಮಯ್ಯ ಮತ್ತು ರಾಜು ಕಲಾಲ್ ರವರುಗಳು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಮಾಡಿ, ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಅದೇ ಪ್ರಕಾರ ಮಹಾಲಕ್ಷಿ ಲೇಔಟ್‌ನ ಮತ್ತೊಂದು ಪ್ರಕರಣದಲ್ಲಿ ಘನ ನ್ಯಾಯಾಲಯವು ಆರೋಪಿ ಕಿಶೋರ್ @ ಪೀಚು ಬಿನ್ ಕರುಣಾಕರ ವಿರುದ್ಧ ವಾರೆಂಟ್ ಹೊರಡಿಸಿದ್ದು, ಈ ಆರೋಪಿಯನ್ನು ಕೆಂಪರಾಮಯ್ಯ ಮತ್ತು ರಾಜು ಕಲಾಲ್ ರವರುಗಳು ದಿನಾಂಕ:23/09/2025 ರಂದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಮಾಡಿ, ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.





















