ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಮೈಸೂರಿನ ‘ನೃಪತುಂಗ ಕನ್ನಡ ಶಾಲೆ’ಯ ಸಹಯೋದಲ್ಲಿ ೦೬–೦೮–೨೦೨೫ರಂದು ಮೈಸೂರಿನ ರಾಮಕೃಷ್ಣ ನಗರದ ರಮಾ ಗೋವಿಂದ ರಂಗ ಮಂದಿರದಲ್ಲಿ ಸಂಜೆ ೪ಕ್ಕೆ ಕನ್ನಡ ಹೋರಾಟಕ್ಕೆ ಘನತೆ–ಗಾಂಭೀರ್ಯವನ್ನು ತಂದುಕೊಟ್ಟ ‘ಡಾ.ಎಂ. ಚಿದಾನಂದಮೂರ್ತಿ ಅವರ ನೆನಪಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕೂ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು ಜಿಲ್ಲೆಯ ೧೨ ವಿದ್ಯಾರ್ಥಿಗಳನ್ನು ಡಾ. ಎಂ. ಚಿದಾನಂದಮೂರ್ತಿ ಅವರ ನೆನÀಪಿನಲ್ಲಿ ‘ಬಹುಮಾನ–ಸನ್ಮಾನ’ ಕಾರ್ಯಕ್ರಮ ವ್ಯವಸ್ಥೆಯಾಗಿದೆ.
ಕರ್ನಾಟಕದ ಮಾಜಿ ಶಿಕ್ಷಣ ಸಚಿವರಾದ, ಅಡಗೂರು ಎಚ್ ವಿಶ್ವನಾಥ್ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕಿಂತ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ೧೨ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ನೀಡುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ನ್ಯಾ. ಸ.ರ ಮಾಣಿಕ್ಯ ಅವರು ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಆಶಯ ನುಡಿಗಳನ್ನಾಡಲಿದ್ದು, ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ಸ.ರ. ಸುದರ್ಶನ ಅವರು ವಿಶೇಷ ಉಪಸ್ಥಿತಿ ಮತ್ತು ಬೆಂಗಳೂರಿನ ಡಾ.ಆರ್.ಶೇಷಶಾಸ್ತ್ರಿ, ಬಾ.ಹ. ಉಪೇಂದ್ರ, ಮ. ಚಂದ್ರಶೇಖರ, ಬಿ.ವಿ. ರವಿಕುಮಾರ್, ಹೊಸೂರು ನಾಗರಾಜ್ ಮತ್ತು ಸಂಜೀವರತ್ನ ಅವರುಗಳ ಉಪಸ್ಥಿತಿ ಇರುತ್ತದೆ.
ಕನ್ನಡ ಸಂಘಟನೆಗಳೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದರೆ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಂದೇಶ ರವಾನೆ ಆಗುತ್ತದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ನಮ್ಮನ್ನು ಗುರುತಿಸುವ ಜನ ಇದ್ದಾರೆ ಎಂದು ಉತ್ಸಾಹ ಮೂಡುತ್ತದೆ ಎಂಬ ಆಶಯದಿಂದ ಬಳಗವು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ.
2024-25ನೆಯ ಸಾಲಿನ ಎ ಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಜಿ.ಎನ್. (98.7%)),ಮಹೇಶ್ ಎಂ.(98.08%), ವಿನುತಾ ಎನ್.ಎಂ.(97.92%), ಪ್ರೇಮಾಂಜಲಿ(97.76%), ನಿತ್ಯ ಸಿ.ಬಿ.(97.6%), ಕೀರ್ತನ ಜೆ. (97.44%), ರಮ್ಯಶ್ರೀ(97.28%), ಸುಪ್ರೀತಾ, (97.28%), ನಿತಿನ್ ಎಸ್ (97.12%), ಸುನೀತಾ ಎಸ್ (96.96%), ಸಿಂಚನ ಡಿ ಎಂ. (96.96%), ಮತ್ತು ಶಿವಾನಿ ಕೆ. (96.96%), ರೂ.1000 ನಗದು ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು.