Live Stream

[ytplayer id=’22727′]

| Latest Version 8.0.1 |

Sports News

ಚಿನ್ನ-ಬೆಳ್ಳಿ ಮುಡಿಗೇರಿಸಿದ ಎಂ.ಎಸ್.ಪುಣ್ಯ-ವರ್ಷಿಣಿ-ಪವನಿ ಕಾಮತ್-ಚೇತನ್ ಓಬು ಲಕ್ಷ್ಮಿ

ಚಿನ್ನ-ಬೆಳ್ಳಿ ಮುಡಿಗೇರಿಸಿದ ಎಂ.ಎಸ್.ಪುಣ್ಯ-ವರ್ಷಿಣಿ-ಪವನಿ ಕಾಮತ್-ಚೇತನ್ ಓಬು ಲಕ್ಷ್ಮಿ

ಬೆಂಗಳೂರು : ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 13ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆಯಲ್ಲಿ ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತು ಪಡೆದ ಸ್ಪರ್ಧಿಗಳು ಚಿನ್ನ-ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂ.ಎಸ್.ಪುಣ್ಯ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದರೆ, ಸೇಫಿಯಂಟ್ ಕಾಲೇಜಿ9ನ ಪಿ. ವರ್ಷಿಣಿ 1 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ. ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಪವನಿ ಕಾಮತ್ 1 ಬೆಳ್ಳಿ ಹಾಗೂ ಚೇತನ ಓಬು ಲಕ್ಷ್ಮಿ ಹಾಗೂ ಎಸ್.ತರುಣ್ ಆಯಾ ವೈಯಕ್ತಿಕ ಈವೆಂಟ್‌ಗಳಲ್ಲಿ 1 ಬೆಳ್ಳಿ ಪದಕವನ್ನು ಗೆದ್ದು ಗೆಲುವಿನ ನಗೆ ಬೀರಿದ್ದಾರೆ.
ಈ ಸ್ಪರ್ಧೆಯಲ್ಲಿ 10 ಮೀ ರೈಫಲ್, 50 ಮೀ ರೈಫಲ್, ಪಿಸ್ತೂಲ್ ಈವೆಂಟ್‌ಗಳು, ಟ್ರ‍್ಯಾಪ್ ಮತ್ತು ಸ್ಕೀಟ್ ಸೇರಿದಂತೆ ಎಲ್ಲಾ ರೀತಿಯ ಶೂಟಿಂಗ್ ಕ್ರೀಡೆಗಳು ನಡೆದಿದ್ದು “ಮೈಸೂರು ಶೂಟಿಂಗ್ ಕ್ಲಬ್” ನಿಂದ ಪಾಲ್ಗೊಂಡಿದ್ದ ಶೂಟರ್‌ಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದಿನ ಹಂತಕ್ಕೆ (ದಕ್ಷಿಣ ವಲಯಗಳು) ಅರ್ಹತೆ ಪಡೆದಿದ್ದಾರೆ. 50 ಮೀ ರೈಫಲ್ ಎನ್‌ಆರ್‌ನಲ್ಲಿ 5 ವೈಯಕ್ತಿಕ ಪದಕಗಳನ್ನು ಮತ್ತು ಐಎಸ್‌ಎಸ್‌ಎಫ್ ಈವೆಂಟ್‌ಗಳಲ್ಲಿ 4 ಪದಕಗಳನ್ನು ಗೆದ್ದಿರುವ ಮೈಸೂರು ಶೂಟಿಂಗ್ ಕ್ಲಬ್ ತಂಡಕ್ಕೆ ರಾಷ್ಟಿಯ ಪ್ಯಾರಾ ಶೂಟರ್ ಬಿ.ಆರ್.ದರ್ಶನ್ ಕುಮಾರ್ (ಮೈಸೂರು) ಉತ್ತಮ ತರಬೇತಿ ನೀಡಿದ್ದರು.
ಸಾಹಸ ಕ್ರೀಡೆಯಾದ ಶೂಟಿಂಗ್ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಬೇಕೆಂಬ ಮಹಾತ್ವಾಕಾಂಕ್ಷೆಯೊAದಿಗೆ ಮೈಸೂರಿನಲ್ಲಿ ಶೂಟಿಂಗ್ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯಬಹುದೆಂದು ರಾಷ್ಟಿಯ ಪ್ಯಾರ ಶೂಟರ್ ಬಿ.ಆರ್.ದರ್ಶನ್ ಕುಮಾರ್ ತಿಳಿಸಿದ್ದಾರೆ. ಶೂಟಿಂಗ್ ತರಬೇತಿಗೆ ಮೊ.9986950999 ಸಂಪರ್ಕಿಸಬಹುದು.

VK DIGITAL NEWS:

ಸಿರಿಯಾಳ ಷಷ್ಠಿ ಆಚರಣೆ ಮತ್ತು ಮಹತ್ವ

ವೀ ಕೇ ನ್ಯೂಸ್
";