ಗುರುರಾಯರ ಸನ್ನಿಧಿಗೆ ಆಗಮಿಸಿ ರಾಯರ ದರ್ಶನ ಪಡೆದ ಶ್ರೀಮತಿ
ಸುಧಾಮೂರ್ತಿಯವರು!
ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಈ ದಿನ ರಾಯರ ಬೃಂದಾವನಕ್ಕೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಹಾಗೂ ಐದು ತರದ ಹಣ್ಣುಗಳಿಂದ ಅಭಿಷೇಕವನ್ನು ನೆರವೇರಿಸಲಾಗಿ ತದನಂತರ ಭಕ್ತರು ಸನ್ನಿಧಿಯಲ್ಲಿ ಸಂಕಲ್ಪವನ್ನು ಮಾಡಿ ಗುರುಪಾದಪೂಜೆಯನ್ನು ಸಲ್ಲಿಸಿ ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಪ್ರಹ್ಲಾದ ರಾಜರ ಮುಂಭಾಗದಲ್ಲಿ ಶ್ರೀಮತಿ ಸುಧಾ ಮೂರ್ತಿಯವರು ಸಂಕಲ್ಪವನ್ನು ಮಾಡಿ ಪಾದಪೂಜೆಯಲ್ಲಿ ಭಾಗವಹಿಸಿ ಲೋಕಕ್ಕೆ ಒಳ್ಳೆಯದಾಗಬೇಕೆಂದು ಪ್ರಾರ್ಥನೆಯೊಂದಿಗೆ ಸಂಕಲ್ಪವನ್ನು ಮಾಡಿದರು ಈ ಸಂದರ್ಭದಲ್ಲಿ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಚಾರ್ಯರು ಜಿಕೆ ಆಚಾರ್ಯರು ಹಾಗೂ ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು ಶ್ರೀಮತಿ ಸುಧಾ ಮೂರ್ತಿಯವರಿಗೆ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಫಲ ಮಂತ್ರಾಕ್ಷತೆಯನ್ನು ಕೊಟ್ಟು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಸದಾ ಕಾಲ ಇರಲಿ ಎಂದು ಆಶೀರ್ವದಿಸಿದರು
Veekay News > World News > ಗುರುರಾಯರ ಸನ್ನಿಧಿಗೆ ಆಗಮಿಸಿ ರಾಯರ ದರ್ಶನ ಪಡೆದ ಶ್ರೀಮತಿ ಸುಧಾಮೂರ್ತಿಯವರು!
ಗುರುರಾಯರ ಸನ್ನಿಧಿಗೆ ಆಗಮಿಸಿ ರಾಯರ ದರ್ಶನ ಪಡೆದ ಶ್ರೀಮತಿ ಸುಧಾಮೂರ್ತಿಯವರು!
ವೀ ಕೇ ನ್ಯೂಸ್10/08/2025
posted on
