ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ: 13.08.2025 ರಂದು ಸಂಜೆ 05.00 ಗಂಟೆಗೆ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ -06, ಸಜ್ಜನರ ಸಲ್ಲಾಪ -06, ಮೀನಾರೋ ಪಾಮಣೋ( ಬಂಜಾರ ಸಿನಿಮಾ ವಿಶೇಷ) ತಿಂಗಳ ಅತಿಥಿ ಸಮಾರಂಭವನ್ನು ಏರ್ಪಡಿಸಲಾಗಿದೆ.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ, ಬಂಜಾರ ಚಲನಚಿತ್ರ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಶ್ರೀ ಉಮೇಶ್ ನಾಯ್ಕ್, ಭಾರತೀಯ ಬಂಜಾರ ಪ್ರಥಮ ಚಲನಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಾದ ಹೆಮಂತ್ ಕುಮಾರ್ (ಸುನೀಲ್ ಚವ್ಹಾಣ್), ಬಂಜಾರ ಮೌನಾಭಿನಯ ಕಲಾವಿದರಾದ ಶ್ರೀ ರವಿ ಲಮಾಣಿ, ಶ್ರೀ ಕುಮಾರ ನಾಯ್ಕ್, ರಾಜ್ಯ ಪ್ರಶಸ್ತಿ ವಿಜೇತ ಬಂಜಾರ ಚಲನಚಿತ್ರ ನಿರ್ದೇಶಕರು, ದಾವಣಗೆರೆ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.